ಕೆವಿಜಿಯಲ್ಲಿ ರಾಷ್ಟ್ರಮಟ್ಟದ ಕೆವಿಜಿಸಿಇ ಹ್ಯಾಕ್ ವೈಸ್

New Project (19)
Published on

ಸುಳ್ಯ: ಕೆವಿಜಿ ಇಂಜಿನಿಯರಿಂಗ್ ಕಾಲೇಜು ವತಿಯಿಂದ ರಾಷ್ಟ್ರಮಟ್ಟದ ಕೆವಿಜಿಸಿಇ ಹ್ಯಾಕ್ ವೈಸ್-2025 ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.

ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಮೌರ್ಯ ಆರ್.ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕ್ಯೂಆರ್ ಸ್ಟೋರ್ ಬೆಂಗಳೂರು ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಜಿ., ಎ.ಒ.ಎಲ್.ಇ. ಕಮಿಟಿ ಬಿ ಸಿಇಒ ಹಾಗೂ ವಿಟಿಯು ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಡಾ.ಉಜ್ವಲ್ ಯು.ಜೆ. ಮಾತನಾಡಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಸುರೇಶ್ ವಿ., ಕ್ವಾನ್ ಟೆಕ್ ಒರಿಜಿನ್ ಸಿಇಒ ಅನಂತ್ ಮಲ್ಯ, ಉಪಪ್ರಾಂಶುಪಾಲ ಡಾ.ಶ್ರೀಧರ್ ಕೆ., ಸ್ಪೇರಾ ಹೈವ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಅಶ್ರದ್ ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಚಂದ್ರಶೇಖರ್ ಎ. ಸ್ವಾಗತಿಸಿದರು. ಹ್ಯಾಕ್ ವೈಸ್ ಕಾರ್ಯಕ್ರಮದ ಚೀಫ್ ಕೋ ಆರ್ಡಿನೇಟರ್ ಪ್ರೊ.ಕಿಶೋರ್ ಕುಮಾರ್ ವಂದಿಸಿದರು. ಸಮೃದ್ಧಿ ಎಂ.ಡಿ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಮಾನ್ಯ ಕಾರ್ಯಕ್ರಮ ನಿರೂಪಿಸಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಎಒಎಲ್‌ಇ ಕಮಿಟಿ ಬಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net