ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ನಾಗಸಾಧುಗಳ ಭೇಟಿ

New Project (14)
Published on

ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಮೇ 2ರಿಂದ 4ರ ವರೆಗೆ ಅತಿಮಹಾರುದ್ರಯಾಗ ನಡೆಯಲಿದ್ದು, ಅೋರಿ ನಾಗಸಾಧುಗಳ ತಂಡವೊಂದು ಕ್ಷೇತ್ರಕ್ಕೆ ದಿಢೀರ್ ಭೇಟಿ ನೀಡಿದೆ. ಅತಿಮಹಾರುದ್ರ ಯಾಗದ ಪೂರ್ವ ತಯಾರಿ ವೀಕ್ಷಿಸಿದ ನಾಗಸಾಧುಗಳ ತಂಡ ಕ್ಷೇತ್ರದ ಹಿನ್ನೆಲೆ ಕುರಿತು ಪ್ರಮುಖರಿಂದ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದೆ.

ಇದೀಗ 1 ತಿಂಗಳ ಕಾಲ ರುದ್ರಪಾರಾಯಣ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಕುಂಭಮೇಳದಲ್ಲಿ ಭಾಗವಹಿಸಿದ ಅೋರಿ ನಾಗಸಾಧುಗಳ ತಂಡ ದಿಢೀರ್ ಭೇಟಿ ದೇಗುಲದ ಪ್ರಮುಖರು ಮತ್ತು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಮಹದೇವನ ಅಪ್ಪಣೆಯಂತೆ ಈ ಕ್ಷೇತ್ರಕ್ಕೆ ಬಂದಿದ್ದೇವೆ. ಮುಂದೆ ನಡೆಯುವ ರುದ್ರಯಾಗದ ಸಂದರ್ಭ ಮಹಾದೇವನ ಅಪ್ಪಣೆಯಾದರೆ ಖಂಡಿತ ನಾವು ಇಲ್ಲವೆ ನಮ್ಮಂತಹ ಇತರೆ ನಾಗ ಸಾಧುಗಳು ಭೇಟಿ ನೀಡಬಹುದು ಎಂದರು

11 ಕುಂಡಗಳಲ್ಲಿ ಹವಿಸ್ಸು ಸಮರ್ಪಿಸಿ ಯಾಗ

ಅತಿಮಹಾರುದ್ರಯಾಗ ಸಮಿತಿ ಗೌರವಾಧ್ಯಕ್ಷ ಬಿ.ರುನಾಥ ಸೋಮಯಾಜಿ, ಸಮಿತಿ ಅಧ್ಯಕ್ಷ ಬ್ರಹ್ಮಾನಂದ ರೆಡ್ಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ನೇತೃತ್ವದಲ್ಲಿ, ಅನಂತ್‌ಭಟ್ ಓಣಿಬೈಲು ನೇತೃತ್ವದಲ್ಲಿ ಅತಿಮಹಾರುದ್ರ ಯಾಗ ನಡೆಯಲಿದೆ. ಜಿಲ್ಲೆಯಲ್ಲೇ ಮೊದಲ ಬಾರಿ ನಡೆಯುವ ಅತಿಮಹಾರುದ್ರ ಯಾಗದಲ್ಲಿ 400 ಮಂದಿ ಋತ್ವಿಜರು, 14,641 ಸಂಖ್ಯೆಯಲ್ಲಿ ರುದ್ರ ಪಠಣ ಮಾಡಿ 11 ಕುಂಡಗಳಲ್ಲಿ ಹವಿಸ್ಸು ಸಮರ್ಪಿಸಿ ಯಾಗ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net