ನವದೆಹಲಿ: ನೈರುತ್ಯ ಮಾರುತವು ಬಿಸಿಲಿನಿಂದ ಬಸವಳಿದಿದ್ದ ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಭಾರತದಲ್ಲಿ ಅಬ್ಬರಿಸುತ್ತಿದೆ. ಈಗಾಗಲೇ ಮಳೆಗೆ ಜರ್ಜರಿತವಾಗಿರುವ ದೆಹಲಿಯಲ್ಲಿ ಜುಲೈ 2 ರವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಉತ್ತರದ ಹಲವಾರು ರಾಜ್ಯಗಳಲ್ಲಿ ಸಹ ಭಾರಿಮಳೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ‘ನನಗಾಗಿ ಕಪ್ ಗೆಲ್ಲುವುದಲ್ಲ, ಇಡೀ ತಂಡ ಉತ್ತಮವಾಗಿ ಆಡಬೇಕು’: ರಾಹುಲ್ ದ್ರಾವಿಡ್
ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 30 (ಭಾನುವಾರ) ರಿಂದ ಜುಲೈ 2 (ಮಂಗಳವಾರ) ವರೆಗೆ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಹೀಗಾಗಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಮುಂದುವರಿಯಲಿದೆ.
ಮುಂದಿನ ವಾರದಲ್ಲಿ ದೆಹಲಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಶನಿವಾರ ದೆಹಲಿಯ ಸಫ್ದರ್‌ಜಂಗ್‌ನಲ್ಲಿರುವ ಪ್ರಾಥಮಿಕ ಹವಾಮಾನ ಕೇಂದ್ರವು 8.9 ಮಿಮೀ ಮಳೆಯನ್ನು ದಾಖಲಿಸಿದರೆ, ಲೋಧಿ ರಸ್ತೆಯಲ್ಲಿ ಮಧ್ಯಾಹ್ನ 2:30 ರಿಂದ ಸಂಜೆ 5:30 ರ ನಡುವೆ 12.6 ಮಿಮೀ ಮಳೆಯಾಗಿದೆ ಎಂದು ವರದಿ ತಿಳಿಸಿದೆ.
ದೆಹಲಿಯ ಜೊತೆಗೆ, ನೈಋತ್ಯ ಮಾನ್ಸೂನ್ ಮುಂದುವರೆದಂತೆ ಉತ್ತರದ ಹಲವಾರು ರಾಜ್ಯಗಳಲ್ಲಿ ಸಹ ಮಳೆಯಾಗುವ ನಿರೀಕ್ಷೆಯಿದೆ. ಇನ್ನು ಜೂನ್ 30 ರಿಂದ ಜುಲೈ 3 ರವರೆಗೆ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ..
ಮಾನ್ಸೂನ್ ಉತ್ತರ ಪ್ರದೇಶಕ್ಕೆ ಸಂಪೂರ್ಣವಾ್ಇ ವ್ಯಾಪಿಸಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಪಶ್ಚಿಮ ರಾಜಸ್ಥಾನ, ಹರಿಯಾಣ, ಚಂಡೀಗಢ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಜಮ್ಮುವಿನ ಉಳಿದ ಪ್ರದೇಶಗಳಿಗೆ ಮಾನ್ಸೂನ್ ಹರಡಲು ಪರಿಸ್ಥಿತಿಗಳು ಅನುಕೂಲಕರವಾಗಿವೆ.
ಮಧ್ಯ ಭಾರತದಲ್ಲಿ, ಮಾನ್ಸೂನ್ ಗುಜರಾತ್, ಮಧ್ಯಪ್ರದೇಶದ ಉಳಿದ ಭಾಗಗಳು ಮತ್ತು ರಾಜಸ್ಥಾನ ಮತ್ತು ಛತ್ತೀಸ್‌ಗಢದ ಕೆಲವು ಪ್ರದೇಶಗಳಿಗೆ ಮತ್ತಷ್ಟು ಮುಂದುವರಿಯುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಕೊಂಕಣ-ಗೋವಾ, ಕೇರಳ, ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಈಶಾನ್ಯ ಭಾರತದಲ್ಲಿ, ಮುಂದಿನ ಮೂರು ದಿನಗಳಲ್ಲಿ ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
‘ಧಕ್-ಧಕ್’ ಬೆಡಗಿಯನ್ನು ‘ದೇಶದ್ರೋಹಿ’ ಎಂದ ನೆಟ್ಟಿಗರು! ಕಾರಣ ಇದೇ ನೋಡಿ..