ರಾಷ್ಟ್ರಪ್ರಶಸ್ತಿ ಪಡೆದ ಕಡೈಸಿ ವಿವಸಾಯಿ ಚಿತ್ರದ ನಟಿ ಕಾಸಮ್ಮಳ್ ಮಗನಿಂದಲೇ ಬರ್ಬರ ಹತ್ಯೆ!​

Actress Kasammal
Published on

ಚೆನ್ನೈ: ರಾಷ್ಟ್ರಪ್ರಶಸ್ತಿ ಪಡೆದ ತಮಿಳಿನ 'ಕಡೈಸಿ ವಿವಾಸಾಯಿ" ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ ನಟಿ ಕಾಸಮ್ಮಳ್​ (71) ಮಗನ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ.

ಈ ಘಟನೆ ಮದುರೈ ಜಿಲ್ಲೆಯ ಅನೈಯುರ್​ನಲ್ಲಿರುವ ಕಾಸಮ್ಮಳ್​ ಮನೆಯಲ್ಲಿ ನಡೆದಿದೆ. ಕಾಸಮ್ಮಳ್​ ಪುತ್ರ ನಾಮಕೋಡಿ (52)ಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮದ್ಯ ಖರೀದಿ ಮಾಡಲು ಹಣ ಕೊಡದಿದ್ದಕ್ಕೆ ತಾಯಿ ಕಾಸಮ್ಮಳ್​ ಜತೆ ಜಗಳಕ್ಕಿಳಿದ ನಾಮಕ್ಕೋಡಿ, ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾನೆ. ಇದರ ಪರಿಣಾಮ ಕಾಸಮ್ಮಳ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಸಮ್ಮಳ್​ ಮತ್ತು ಆಕೆಯ ಪತಿ ಬಾಲಸಾಮಿಗೆ ನಾಲ್ವರು ಮಕ್ಕಳಿದ್ದಾರೆ. ನಾಮಕೋಡಿಗೆ ಮದುವೆಯಾಗಿದ್ದು, ಪತ್ನಿಯಿಂದ ದೂರವಾಗಿ ತಾಯಿಯ ಜತೆಯಲ್ಲೇ ವಾಸವಿದ್ದನು.

ಕಾಸಮ್ಮಳ್​ ಅವರು ವಿಜಯ್ ಸೇತುಪತಿ ಮತ್ತು ನಲ್ಲಂದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ 'ಕಡೈಸಿ ವಿವಸಾಯಿ' ಚಿತ್ರದಲ್ಲಿ ತಮ್ಮ ಪಾತ್ರದಿಂದಲೇ ಹೆಸರುವಾಸಿಯಾಗಿದ್ದರು. ಸಿನಿಮಾದಲ್ಲಿ ಹಲವಾರು ಗ್ರಾಮಸ್ಥರು ನಟಿಸಿದ್ದರು. 'ಕಡೈಸಿ ವಿವಸಾಯಿ' ಅತ್ಯುತ್ತಮ ತಮಿಳು ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net