More

    ಕಾಂಗ್ರೆಸ್​ ಈ ಬಾರಿ 40 ಸ್ಥಾನಗಳನ್ನಾದ್ರು ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಪ್ರಧಾನಿ ನರೇಂದ್ರ ಮೋದಿ

    -ಕಾಂಗ್ರೆಸ್‌ಗೆ ನೀತಿಯೂ ಇಲ್ಲ, ನಾಯಕನೂ ಇಲ್ಲ

     ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂಬುದೆ ನಮ್ಮ ಪ್ರಾರ್ಥನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

    ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಭಾಷಣ ಮಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮನ್ನು ಆಶೀರ್ವದಿಸಿದ್ದಾರೆ. ಕಾಂಗ್ರೆಸ್​ ಈ ಬಾರಿ 40 ಸ್ಥಾನಗಳನ್ನು ಪಡೆಯಲಿ ಎಂಬುದು ನಮ್ಮ ಪ್ರಾರ್ಥನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

    ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ದೇಶದ ಜನರು ಈ ಧ್ವನಿಯನ್ನು ಬಲಪಡಿಸಿದ್ದಾರೆ. ನಾನು ಕೂಡ ಈ ಬಾರಿ ಸಿದ್ಧರಾಗಿ ಬಂದಿದ್ದೇನೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಗೊಂದಲದಲ್ಲಿಯೇ ಇತ್ತು, ಕಾಂಗ್ರೆಸ್ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ. ಕಾಂಗ್ರೆಸ್‌ನ ಚಿಂತನೆ ಹಳೆಯದಾಗಿದೆ, ಅದರ ಕೆಲಸವೂ ಕೂಡ  ವಾಗ್ದಾಳಿ ಮಾಡಿದ್ದಾರೆ.   

    ಕಾಂಗ್ರೆಸ್ ಶತ್ರುಗಳಿಗೆ ಭೂಮಿ ನೀಡಿದೆ, ಕಾಂಗ್ರೆಸ್ ಆಡಳಿತದಲ್ಲಿ ಒಬಿಸಿಗೆ ಮೀಸಲಾತಿ ಸಿಗಲಿಲ್ಲ, ಕಾಂಗ್ರೆಸ್ ಕಾಯಿಲೆ ಬಿದ್ದಿದೆ, ಸ್ವಂತ ನೀತಿ ಇಲ್ಲದವರು ಮೋದಿಯವರ ಗ್ಯಾರಂಟಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ . ಕಾಂಗ್ರೆಸ್ ಬ್ರಿಟಿಷರಿಂದ ಪ್ರಭಾವಿತವಾಗಿದೆ. ಇದರಿಂದಾಗಿಯೇ ಬ್ರಿಟಿಷರು ಮಾಡಿದ ಕಾನೂನುಗಳು ಕಾರ್ಯರೂಪಕ್ಕೆ ಬಂದವು, ದಶಕಗಳ ನಂತರವೂ ಕೆಂಪು ದೀಪ ಸಂಸ್ಕೃತಿ ಮುಂದುವರೆಯಿತು ಎಂದರು.

    ಕಾಂಗ್ರೆಸ್‌ಗೆ ನೀತಿಯೂ ಇಲ್ಲ, ನಾಯಕನೂ ಇಲ್ಲ.ಕಾಂಗ್ರೆಸ್ ಭಾರತೀಯ ಸಂಸ್ಕೃತಿಯನ್ನು ಗೌಣವಾಗಿ ನೋಡಿದೆ. ಇಂದು ಕಾಂಗ್ರೆಸ್‌ಗೆ ಸ್ವಾವಲಂಬಿ ಭಾರತ ಎಂಬ ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶವು ಎಲ್ಲವನ್ನೂ ಅರ್ಥಮಾಡಿಕೊಂಡಿದೆ ಮತ್ತು ಅದರ ಪರಿಣಾಮವನ್ನು ಕಾಂಗ್ರೆಸ್ ಅನುಭವಿಸುತ್ತಿದೆ. ಅತ್ತ ಕಾಂಗ್ರೆಸ್‌ 40 ಸ್ಥಾನಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ ಈ ಬಾರಿ ಕನಿಷ್ಠ 40 ಸೀಟುಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts