ಬೆಂಗಳೂರಿಗೆ ಬರೋರು, ಬೆಂಗಳೂರಿಂದ ಬೇರೆ ಊರಿಗೆ ಹೋಗೋರು ನಾಳೆ ಹುಷಾರು!

High Way
Published on

ಬೆಂಗಳೂರು: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ನಾಳೆ ಹೆದ್ದಾರಿ ಬಂದ್​ ಮಾಡಲಿದ್ದು, ಸೆಪ್ಟೆಂಬರ್​ 28ಕ್ಕೆ ಕರ್ನಾಟಕ ಬಂದ್​ಗೆ ಕರೆ ನೀಡಿದ್ದಾರೆ. ನಾಳೆ ಹೆದ್ದಾರಿಗಳು ಬಂದ್​ ಆಗಲಿರುವ ಕಾರಣ ಸಾರ್ವಜನಿಕರು ತುಸು ಎಚ್ಚರ ವಹಿಸುವುದು ಒಳಿತು.

5 ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಂದ್​ ಆಗಲಿರುವುದರಿಂದ ಬೆಂಗಳೂರಿನಿಂದ ದೂರದ ಊರುಗಳಿಗೆ ಪ್ರಯಾಣ ಹೊರಡಲು ಯಾರಾದರೂ ಪ್ಲ್ಯಾನ್​ ಹಾಕಿಕೊಂಡಿದ್ದರೆ..ಅಥವಾ ಬೇರೆ ಊರುಗಳಿಂದ ರಾಜಧಾನಿಗೆ ಬರುವ ಯೋಜನೆಯಿದ್ದರೆ..ಅದನ್ನು ಮುಂದೂಡುವುದು ಒಳಿತು. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲ ಹೆದ್ದಾರಿಗಳನ್ನೂ ನಾಳೆ ರೈತ ಸಂಘಟನೆಗಳು ಬಂದ್​ ಮಾಡಿ, ಪ್ರತಿಭಟನೆ ನಡೆಸಲಿವೆ. ಇದರೊಂದಿಗೆ ಜೈಲ್​ ಭರೋ ಹೋರಾಟವನ್ನೂ ಮಾಡಲಿದ್ದಾರೆ. ಇದನ್ನೂ ಓದಿ: ಕ್ರಿಕೆಟಿಗರ ಹೆಂಡತಿಯರು ಡ್ರಗ್ಸ್​ ತೆಗೆದುಕೊಳ್ಳುವುದನ್ನ ಶೆರ್ಲಿನ್​ ನೋಡಿದ್ದಾರಂತೆ!

ಸಚಿವ ಎಸ್.ಟಿ.ಸೋಮಶೇಖರ್ ಅಧಿವೇಶನದಲ್ಲಿ ಬುಧವಾರ ಎಪಿಎಂಸಿ ಮಸೂದೆ ಮಂಡಿಸಿದ ಬೆನ್ನಲ್ಲೇ ರೈತ ಸಂಘಟನೆಗಳ ಆಕ್ರೋಶವೂ ನೂರ್ಮಡಿಯಾಗಿದೆ. ಈಗಾಗಲೇ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿಯನ್ನೂ ಮಾಡುತ್ತಿದ್ದಾರೆ. ನಾಳಿನ ಪ್ರತಿಭಟನೆ ಸ್ವರೂಪ ತುಸು ಗಂಭೀರವಾಗಿಯೇ ಇರಲಿದ್ದು, ಜನಸಾಮಾನ್ಯರು ಎಚ್ಚರಿಕೆ ವಹಿಸುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net