More

    ಕ್ರಿಕೆಟಿಗರ ಹೆಂಡತಿಯರು ಡ್ರಗ್ಸ್​ ತೆಗೆದುಕೊಳ್ಳುವುದನ್ನ ಶೆರ್ಲಿನ್​ ನೋಡಿದ್ದಾರಂತೆ!

    ಮುಂಬೈ: ಬಾಲಿವುಡ್​ ಕಲಾವಿದರಿಗೆ ಡ್ರಗ್ಸ್​ ನಂಟಿರುವ ಕುರಿತು ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಈ ಕುರಿತು, ದೀಪಿಕಾ ಪಡುಕೋಣೆ ಸೇರಿದಂತೆ ನಾಲ್ವರು ಬಾಲಿವುಡ್​ ನಟಿಯರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ.

    ಇದನ್ನೂ ಓದಿ: ಡ್ರಗ್ಸ್​ ಪೆಡ್ಲರ್​ ಜತೆ ನಟ ದಿಗಂತ್​ ಚಾಟಿಂಗ್​…

    ಈ ಮಧ್ಯೆ, ಮಾದಕ ನಟಿ ಎಂದೇ ಹೆಸರಾಗಿರುವ ಶರ್ಲಿನ್​ ಚೋಪ್ರಾ ಹೊಸದೊಂದು ಬಾಂಬ್​ ಸಿಡಿಸಿದ್ದಾರೆ. ಕ್ರಿಕೆಟಿಗರ ಪತ್ನಿಯರು ಡ್ರಗ್ಸ್​ ತೆಗೆದುಕೊಳ್ಳುವುದನ್ನು ಅವರು ಕಣ್ಣಾರೆ ಕಂಡಿದ್ದಾರಂತೆ. ಒಂದು ಪಕ್ಷ ಎನ್​ಸಿಬಿ ಕೇಳಿದರೆ, ತಾವು ಒಂದಿಷ್ಟು ವಿಷಯಗಳನ್ನು ಬಹಿರಂಗಪಡಿಸುವುದಾಗಿ ಅವರು ಹೇಳಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಒಂದೊಮ್ಮೆ ನಾನು ಕೆಕೆಆರ್ ಮ್ಯಾಚ್​ ನೋಡುವುದಕ್ಕೆ ಕೊಲ್ಕತ್ತಾಗೆ ಹೋಗಿದ್ದೆ. ಮ್ಯಾಚ್​ ನಂತರ ಪಾರ್ಟಿಗೆ ನನಗೆ ಆಹ್ವಾನ ಸಿಕ್ಕಿತ್ತು. ಸಾಮಾನ್ಯವಾಗಿ ಇಂತಹ ಪಾರ್ಟಿಗಳಲ್ಲಿ ಕ್ರಿಕೆಟಿಗರು ಮತ್ತು ಅವರ ಪತ್ನಿಯರು ಹಾಜರಿರುತ್ತಾರೆ. ನಾನು ಆ ಪಾರ್ಟಿಯಲ್ಲಿ ಸಾಕಷ್ಟು ಡ್ಯಾನ್ಸ್​ ಮಾಡಿ, ಒಂದು ಹಂತದಲ್ಲಿ ಸುಸ್ತಾದೆ. ವಾಷ್​ರೂಮ್​ಗೆ ಹೋದಾಗ, ಹಲವು ಕ್ರಿಕೆಟಿಗರ ಪತ್ನಿಯರು ಕೊಕೇನ್ ತೆಗೆದುಕೊಳ್ಳುವುದನ್ನು ನೋಡಿದೆ. ಕೆಲವರು ನನ್ನನ್ನು ನೋಡಿ ಸ್ಮೈಲ್​ ಮಾಡಿದರು. ನಾನು ತಪ್ಪಾದ ಜಾಗದಲ್ಲಿದ್ದೇನೆ ಎನ್ನುವುದು ನನಗೆ ಅರ್ಥವಾಯಿತು’ ಎಂದು ಅವರು ಹೇಳಿದ್ದಾರೆ.

    ಬಹುಶಃ ಪುರುಷರ ವಾಶ್​ರೂಮ್​ಗೆ ಹೋಗಿದ್ದರೆ, ಪರಿಸ್ಥಿತಿ ಇದಕ್ಕಿಂತ ವಿಭಿನ್ನವಾಗೇನೂ ಇರುತ್ತಿರಲಿಲ್ಲ ಎಂದನಿಸುತ್ತದೆ ಎಂದು ಶರ್ಲಿನ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಡ್ರಗ್ಸ್ ಕೇಸ್​; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಬುಲಾವ್​​

    ಈ ವಿಷಯದಲ್ಲಿ ಶರ್ಲಿನ್​ ಯಾವ ಕ್ರಿಕೆಟಿಗರ ಹೆಸರನ್ನು ಹೇಳಿದಿದ್ದರೂ, ಒಂದು ಪಕ್ಷ ಅಗತ್ಯ ಬಿದ್ದರೆ ಹೆಸರು ಹೇಳುವುದಕ್ಕೆ ಸಿದ್ಧ ಎಂದು ಅವರು ಹೇಳಿಕೊಂಡಿದ್ದಾರೆ. ‘ಈ ವಿಚಾರವಾಗಿ ಎನ್​ಸಿಬಿಯವರು ನನ್ನನ್ನು ವಿಚಾರಣೆ ಮಾಡಿದರೆ, ಹೆಸರು ಹೇಳುವುದಕ್ಕೆ ಸಿದ್ಧ’ ಎಂದು ಅವರು ಹೇಳಿಕೊಂಡಿದ್ದಾರೆ.

    ಮಗುವಾಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮೇಘನಾ ರಾಜ್​ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts