More

    ರೈತ ಸಂಘಟನೆಗಳಿಂದ 28ಕ್ಕೆ ಕರ್ನಾಟಕ ಬಂದ್

    ಬೆಂಗಳೂರು: ರೈತ ಸಂಘಟನೆಗಳು ಕೈಗೊಂಡಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಚಿವ ಎಸ್.ಟಿ.ಸೋಮಶೇಖರ್ ಅಧಿವೇಶನದಲ್ಲಿ ಬುಧವಾರ ಎಪಿಎಂಸಿ ಮಸೂದೆ ಮಂಡಿಸಿದ ಬೆನ್ನೆಲ್ಲೆ ರಾಜ್ಯ ರೈತ ಸಂಘಟನೆಗಳು ಸೋಮವಾರ (ಸೆ.28) ಕರ್ನಾಟಕ ಬಂದ್​ಗೆ ಕರೆ ನೀಡಿವೆ.

    ಮೂರು ದಿನಗಳಿಂದ ಸ್ವಾತಂತ್ರ್ಯಉದ್ಯಾನ ಹಾಗೂ ಆನಂದ್ ರಾವ್ ವೃತ್ತದಲ್ಲಿ ನಡೆಯತ್ತಿರುವ ರೈತರ ಅಹೋರಾತ್ರಿ ಧರಣಿ ಮುಂದುವರಿದಿದೆ. ಹೋರಾಟದ ವಿಚಾರದಲ್ಲಿ ಎರಡು ಬಣ ಏರ್ಪಟ್ಟಿದ್ದು, ಕರ್ನಾಟಕ ಬಂದ್ ಬಗ್ಗೆ ಸಂಘಟನೆಗಳಲ್ಲೇ ಗೊಂದಲ ಮೂಡಿತ್ತು. ಆದರೆ, ಎಸ್.ಟಿ.ಸೋಮಶೇಖರ್ ಎಪಿಎಂಸಿ ಮಸೂದೆ ಮಂಡಿಸಿದ ಬೆನ್ನೆಲ್ಲೆ ಒಗ್ಗಟ್ಟಾದ ರೈತ ಸಂಘಟನೆಗಳು ಸೆ.28ರಂದು ಕರ್ನಾಟಕ ಬಂದ್​ಗೆ ಕರೆ ಕೊಟ್ಟು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿವೆ. ಈ ನಡುವೆ ರೈತ ಸಂಘಟನೆಗಳ ಮುಖಂಡರು ಬುಧವಾರ ಪರಸ್ಪರ ಚರ್ಚೆ ನಡೆಸಿದ್ದು, ಸೆ.25ರಂದು ಮೈಸೂರು ಬ್ಯಾಂಕ್ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿ ಬಂದ್, ಜೈಲ್ ಭರೋ ಹೋರಾಟ ಮಾಡಲು ನಿರ್ಧರಿಸಿದ್ದಾರೆ.

    ಐಕ್ಯ ಹೋರಾಟ ಸಮಿತಿಯ 32 ಸಂಘಟನೆಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಾಗಿ ಕರ್ನಾಟಕ ಬಂದ್ ಮಾಡುವುದು ಶತಸಿದ್ಧ.
    | ಬಡಗಲುಪುರ ನಾಗೇಂದ್ರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

    ಸಂಘಟನೆಗಳ ಬಂಬಲ

    ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು, ಕಾರ್ವಿುಕ ಸಂಘಟನೆಳು, ಓಲಾ-ಊಬರ್, ಬೀದಿ ಬದಿ ವ್ಯಾಪಾರಿಗಳು,ಲಾರಿ ಮಾಲೀಕರ ಸಂಘ, ಕನ್ನಡ ಸಂಘರ್ಷ ಸಮಿತಿ ಸೇರಿ ವಿವಿಧ ಕನ್ನಡ ಪರ ಸಂಘಟನೆ ಸೇರಿ 32ಕ್ಕೂ ಅಧಿಕ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿದೆ. ಹೋಟೆಲ್ ಮಾಲೀಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಕೆಲ ಸಂಘಟನೆಗಳು ನೈತಿಕ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಕೆಎಸ್​ಆರ್​ಟಿಸಿ, ಮೆಟ್ರೋ, ಬಿಎಂಟಿಸಿ ಸೇವೆ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts