

ಅಂಕೋಲ: ಹೀರೋಗಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ವಾಡಿಕೆ. ಇನ್ನೂ ಕೆಲವರು ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ನಟಿಸುವುದೂ ಉಂಟು. 'ರಾಮ ರಾಮಾ ರೇ', 'ಮ್ಯಾನ್ ಆಫ್ ದಿ ಮ್ಯಾಚ್' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ನಟರಾಜ್ ಮಾತ್ರ ಬೇರೆ ರೀತಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ ಗೋಕರ್ಣದ ಅಂಕೋಲಕ್ಕೆ ಪ್ರವಾಸ ಕೈಗೊಂಡಿದ್ದ ನಟರಾಜ್, ಅಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಹೋರಾಟಗಾರರಾದ ಸುಕ್ರಿ ಬೊಮ್ಮಗೌಡ ಅವರೊಂದಿಗೆ ಕೆಲಕಾಲ ಸಮಯ ಕಳೆದಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿರುವ ವೃಕ್ಷಮಾತೆ ಎಂದೇ ಎಲ್ಲರ ಪ್ರೀತಿಗೆ ಪಾತ್ರರಾಗಿರುವ 'ತುಳಸಿ ಅಜ್ಜಿ' ಅವರನ್ನು ಭೇಟಿ ಮಾಡಿ, ಅವರೊಂದಿಗೆ ಗಿಡ ನೆಡುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಮಾರ್ಟಿನ್’ ಜತೆಗೆ ಸೆಣಸಲು ಬಂದ ಆ ಇಬ್ಬರು ದೈತ್ಯರು!
ನಂತರ ಅಲ್ಲಿಯೇ ಇದ್ದ ಹೊನ್ನಳ್ಳಿ ಶಾಲೆಯ ಮಕ್ಕಳ ಜೊತೆಯಲ್ಲಿ ಕಾಲ ಕಳೆದು, ಮೂರು ದಿನಗಳ ಕಾಲ ಉತ್ತಮ ಕೆಲಸಗಳನ್ನು ಮಾಡುತ್ತಾ, ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.