More

  ತರಲೆ ನಟ ಮತ್ತು ಭಯಂಕರ ದೆವ್ವ; ವಿಜಯವಾಣಿ ಸಿನಿಮಾ ವಿಮರ್ಶೆ

  • ಚಿತ್ರ: ನಟ ಭಯಂಕರ
  • ನಿರ್ದೇಶನ: ಪ್ರಥಮ್
  • ನಿರ್ಮಾಣ: ಸ್ವಾರಸ್ಯ ಸಿನಿ ಕ್ರಿಯೇಶನ್ಸ್
  • ತಾರಾಗಣ: ಪ್ರಥಮ್, ನಿಹಾರಿಕಾ, ಸುಶ್ಮಿತಾ ಜೋಶಿ, ಸಾಯಿಕುಮಾರ್, ಶೋಭರಾಜ್, ಕುರಿ ಪ್ರತಾಪ್, ಓಂ ಪ್ರಕಾಶ ರಾವ್ ಮುಂತಾದವರು

  | ಚೇತನ್ ನಾಡಿಗೇರ್ ಬೆಂಗಳೂರು

  ಅಲ್ಲೊಂದು ಒಂಟಿ ಮನೆ ಇರುತ್ತದೆ. ಆ ಮನೆಯಲ್ಲೊಂದು ಹೆಣ್ಣು ದೆವ್ವ. ಆ ದೆವ್ವ ಪ್ರತೀಕಾರಕ್ಕಾಗಿ ಕಾಯುತ್ತಿರುತ್ತದೆ. ನಾಯಕ ಆ ಮನೆಯ ಬಗ್ಗೆ ಗೊತ್ತಿಲ್ಲದೆಯೇ ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಭೂತಚೇಷ್ಟೆಗಳನ್ನು ಅನುಭವಿಸುತ್ತಾನೆ. ಕೊನೆಗೆ ಅವನ ಒಳ್ಳೆಯತನದಿಂದ ಆ ಭೂತವೇ ಅವನಿಗೊಂದು ಸಲಾಂ ಹೊಡೆದು ಹೋಗುತ್ತದೆ. ಈ ತರಹದ ಚಿತ್ರಗಳು ಕನ್ನಡಕ್ಕೆ ಹೊಸದಲ್ಲ. ‘ನಟ ಭಯಂಕರ’ ಅದೇ ಸಾಲಿಗೆ ಸೇರುವ ಸಿನಿಮಾ.

  ಅವನು ಭಯಂಕರ ದೊಡ್ಡ ನಟ. ನಿರ್ವಪಕರನ್ನು ತನ್ನ ತಾಳಕ್ಕೆ ಕುಣಿಸುವ, ನಿರ್ದೇಶಕರನ್ನು ಪಕ್ಕಕ್ಕಿಟ್ಟು ತಾನೇ ಎಲ್ಲ ನಿರ್ಧಾರ ತೆಗೆದುಕೊಳ್ಳುವ, ತಾನು ಮಾಡಿದ್ದೇ ನಟನೆ ಎನ್ನುವ ಸೂಪರ್ ಸ್ಟಾರ್. ಇಂತಹ ತಿಕ್ಕಲು ಸ್ವಭಾವದವನನ್ನು ಸಹಿಸಿಕೊಳ್ಳಲಾಗದೇ, ಎಲ್ಲರೂ ಹೈರಾಣಾಗಿರುತ್ತಾರೆ. ಹೀಗೆ ಎಲ್ಲರನ್ನೂ ಆಟ ಆಡಿಸುವ ಅವನು ಒಬ್ಬ ಕುರುಡಿ ದೆವ್ವದ ಕೈಗೆ ಸಿಕ್ಕಿ ಹಾಕಿಕೊಂಡರೆ ಆಗ ಏನೆಲ್ಲಾ ಆಗಬಹುದು ಎಂಬುದನ್ನು ಚಿತ್ರದಲ್ಲಿ ಭಯ ಹುಟ್ಟಿಸುತ್ತಲೇ ತಮಾಷೆಯಾಗಿ ತೋರಿಸಲಾಗಿದೆ.

  ಈ ತರಹದ ಸಿನಿಮಾಗಳು ಕನ್ನಡಕ್ಕೆ ಹೊಸತಲ್ಲ. ಆದರೆ, ಅದನ್ನು ತಮ್ಮದೇ ಶೈಲಿಯಲ್ಲಿ ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ ಪ್ರಥಮ್ ಪ್ರಯತ್ನದ ಜತೆಗೆ ಚಿತ್ರದ ವೇಗ ಮತ್ತು ಲೆಂಥ್ ಬಗ್ಗೆ ಅವರು ಸ್ವಲ್ಪ ಗಮನಹರಿಸಬೇಕಿತ್ತು. ತಾನು ಸ್ಟಾರ್ ಹೀರೋಗಳಂತೆ ಫೈಟು, ನೃತ್ಯ ಮಾಡಿದರೆ ಜನ ಒಪು್ಪತ್ತಾರೋ, ಇಲ್ಲವೋ ಎಂಬ ಗೊಂದಲ ಪ್ರಥಮ್ೂ ಇದ್ದಂತಿದೆ. ಹಾಗಾಗಿ, ಅವರು ನಿಜಜೀವನದಲ್ಲಿ ಹೇಗಿದ್ದಾರೋ, ಚಿತ್ರದಲ್ಲೂ ಅದೇ ರೀತಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರು ಸಾಧ್ಯವಾದಷ್ಟೂ ನೈಜವಾಗಿ ಇರುವುದಕ್ಕೆ ಪ್ರಯತ್ನಿ ಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ಮತ್ತು ಫೈಟ್ ಮಾಡಿದ್ದಾರೆ. ಮಾತು ಸಹ ಅಷ್ಟೇ. ಚಿತ್ರದಲ್ಲಿ ಮೂರ್ನಾಲ್ಕು ಹುಡುಗಿಯರಿದ್ದಾರೆ. ರ‍್ಯಾಂಪ್ ವಾಕ್​ಗೆ ಬಂದವರಂತೆ ಚಿತ್ರದ ತುಂಬಾ ಓಡಾಡುತ್ತಿರುತ್ತಾರೆ. ಮಿಕ್ಕಂತೆ ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್ ಅಲ್ಲಲ್ಲಿ ನಗಿಸುವ ಪ್ರಯತ್ನ ಮಾಡಿದ್ದಾರೆ. ಸಾಯಿಕುಮಾರ್ ಇಲ್ಲಿ ಅಗ್ನಿ ಎಂ.ಬಿ.ಬಿ. ಎಸ್ ಆಗಿ ಇಷ್ಟವಾಗುತ್ತಾರೆ. ಶೋಭರಾಜ್, ಶಂಕರ್ ಅಶ್ವತ್ಥ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾರೆ. ಪ್ರದ್ಯೋತ್ತನ್ ಸಂಗೀತದಲ್ಲಿ 2 ಹಾಡುಗಳು ಕೇಳುವಂತಿವೆ.

  ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?

  ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts