ಎಂಗೇಜ್​ಮೆಂಟ್​ ದಿನ ಭಾವಿ ಪತ್ನಿಯ ಅಪ್ಪುಗೆ ರಹಸ್ಯ ಬಯಲು... ಬೇಸತ್ತು ಮದ್ವೆ ದಿನವೇ ಪ್ರಾಣ ಬಿಟ್ಟ ಐಟಿ ಅಧಿಕಾರಿ! Income Tax Officer

Income Tax Officer
Published on

Income Tax Officer : ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆದಾಯ ತೆರಿಗೆ ಅಧಿಕಾರಿಯೊಬ್ಬರು ಭಾವಿ ಪತ್ನಿಯ ಕಿರುಕುಳದಿಂದ ಬೇಸತ್ತು ಮದುವೆಯ ದಿನವೇ ಸಾವಿಗೆ ಶರಣಾಗಿದ್ದಾರೆ.

ಮೃತರನ್ನು ನಾಸಿಕ್ ಮೂಲದ ಆದಾಯ ತೆರಿಗೆ ಅಧಿಕಾರಿ ಹರೇಕೃಷ್ಣ ಪಾಂಡೆ (36) ಎಂದು ಗುರುತಿಸಲಾಗಿದೆ. ಪಾಂಡೆಗೆ ಉತ್ತರ ಪ್ರದೇಶದ ವಾರಣಾಸಿಯ ಯುವತಿ ಜೊತೆ ಮದುವೆ ನಿಶ್ಚಯ ಮಾಡಲಾಗಿತ್ತು.

ನಿಶ್ಚಿತಾರ್ಥದ ಸಮಯದಲ್ಲಿ ತನ್ನ ಭಾವಿ ಪತ್ನಿ, ಮಾಜಿ ಬಾಯ್​ಫ್ರೆಂಡ್​ನನ್ನು ಅಪ್ಪಿಕೊಂಡಿದ್ದಳು. ಇದಾದ ನಂತರ, ಆಕೆಯ ಪ್ರೇಮ ಪ್ರಕರಣ ಪಾಂಡೆಗೆ ಗೊತ್ತಾಗಿ, ಆತಂಕಕ್ಕೂ ಒಳಗಾಗಿದ್ದರು. ತಮ್ಮ ಪ್ರೀತಿ ವಿಚಾರ ಗೊತ್ತಾಗಿದ್ದೇ ತಡ ಮದುವೆಗೆ ಒತ್ತಡ ಹೇರಲು ಯುವತಿ ಪ್ರಾರಂಭಿಸಿದಳು. ಅಲ್ಲದೆ, ನಿರಾಕರಿಸಿದರೆ ವರದಕ್ಷಿಣೆ ಅಪರಾಧದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದಳು.

ಆಕೆಯ ನಿರಂತರ ಮಾನಸಿಕ ಹಿಂಸೆಯಿಂದ ಬೇಸತ್ತ ಅಧಿಕಾರಿ, ಮದುವೆಯ ದಿನದಂದು ದುಡುಕಿನ ನಿರ್ಧಾರ ಕೈಗೊಂಡು, ಸಾವಿಗೆ ಶರಣಾಗಿದ್ದಾರೆ. ನಾಸಿಕ್‌ನ ಉತ್ತಮನಗರ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಅಂಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ನಾಸಿಕ್ ನಗರದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net