18ನೇ ಆವೃತ್ತಿಯ ಅರ್ಧ ಐಪಿಎಲ್ ಮುಗಿಯಿತು... ಇಲ್ಲಿಯವರೆಗಿನ ದಾಖಲೆಗಳನ್ನು ಒಮ್ಮೆ ನೋಡೋಣ! IPL 2025

IPL 2025
Published on

IPL 2025 : ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸುಮಾರು ಅರ್ಧದಷ್ಟು ಪಂದ್ಯಗಳು ಪೂರ್ಣಗೊಂಡಿವೆ. ಈ ಸೀಸನ್​ನಲ್ಲಿ ಇಲ್ಲಿಯವರೆಗೆ 38 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಈ ಸಂದರ್ಭದಲ್ಲಿ, ಇಲ್ಲಿಯವರೆಗೆ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಲ್ಲಿ ಯಾರು ಮುಂದಿದ್ದಾರೆ. ಯಾರು ಅತಿ ಹೆಚ್ಚು ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಬಾರಿಸಿದ್ದಾರೆ ಎಂಬುದನ್ನು ನಾವೀಗ ತಿಳಿಯೋಣ.

ಅತಿ ಹೆಚ್ಚು ರನ್​ ಗಳಿಸಿದವರು

* ನಿಕೋಲಸ್ ಪೂರನ್ - 368 ರನ್ (ಲಖನೌ ಸೂಪರ್ ಜೈಂಟ್ಸ್)

* ಸಾಯಿ ಸುದರ್ಶನ್ - 365 ರನ್ (ಗುಜರಾತ್ ಟೈಟಾನ್ಸ್)

* ಜೋಸ್ ಬಟ್ಲರ್ - 315 ರನ್ (ಗುಜರಾತ್ ಟೈಟಾನ್ಸ್)

ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 3 ಬೌಲರ್‌ಗಳು

* ಪ್ರಸಿದ್ಧ ಕೃಷ್ಣ - 14 ವಿಕೆಟ್‌ಗಳು (ಗುಜರಾತ್ ಟೈಟಾನ್ಸ್)

* ಕುಲದೀಪ್ ಯಾದವ್ - 12 ವಿಕೆಟ್‌ಗಳು (ಡೆಲ್ಲಿ ಕ್ಯಾಪಿಟಲ್ಸ್)

* ನೂರ್ ಅಹ್ಮದ್ - 12 ವಿಕೆಟ್‌ಗಳು (ಚೆನ್ನೈ ಸೂಪರ್ ಕಿಂಗ್ಸ್)

ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳು

* ನಿಕೋಲಸ್ ಪೂರನ್ - 31 ಸಿಕ್ಸರ್‌ಗಳು (ಲಖನೌ ಸೂಪರ್‌ಜೈಂಟ್ಸ್)

* ಶ್ರೇಯಸ್ ಅಯ್ಯರ್ - 20 ಸಿಕ್ಸರ್‌ಗಳು (ಪಂಜಾಬ್ ಕಿಂಗ್ಸ್)

* ಯಶಸ್ವಿ ಜೈಸ್ವಾಲ್ - 17 ಸಿಕ್ಸರ್‌ಗಳು (ರಾಜಸ್ಥಾನ ರಾಯಲ್ಸ್)

ಅತಿ ಹೆಚ್ಚು ಬೌಂಡರಿಗಳನ್ನು ಹೊಡೆದ ಬ್ಯಾಟ್ಸ್‌ಮನ್‌ಗಳು

* ಸಾಯಿ ಸುದರ್ಶನ್ - 36 ಬೌಂಡರಿಗಳು (ಗುಜರಾತ್ ಟೈಟಾನ್ಸ್)

* ಟ್ರಾವಿಸ್ ಹೆಡ್ - 33 ಬೌಂಡರಿಗಳು (ಸನ್‌ರೈಸರ್ಸ್ ಹೈದರಾಬಾದ್)

* ಜೋಸ್ ಬಟ್ಲರ್ - 32 ಬೌಂಡರಿಗಳು (ಗುಜರಾತ್ ಟೈಟಾನ್ಸ್)

ಇನ್ನು ಅಂಕಪಟ್ಟಿಯಲ್ಲಿ ಗುಜರಾತ್​ ಟೈಟಾನ್ಸ್​ ತಂಡ ಮೊದಲ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್​ ಎರಡು, ಆರ್​ಸಿಬಿ ಮೂರು ಪಂಜಾಬ್​ ನಾಲ್ಕನೇ ಸ್ಥಾನದಲ್ಲಿದೆ. ಸಿಎಸ್​ಕೆ ತಂಡ ಕೊನೆಯ ಸ್ಥಾನದಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net