ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು; ಆದ್ರೆ ಈ ಷರತ್ತುಗಳು ಅನ್ವಯ!

Nandi hills 31 dec 19
Published on

ಚಿಕ್ಕಬಳ್ಳಾಪುರ: ಪ್ರವಾಸಿಗರು, ಪ್ರೇಮಿಗಳ ಹಾಟ್​​ ಸ್ಪಾಟ್​​ ಆಗಿದ್ದ ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು ಮಾಡಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು ಮಾಡಿ ಶನಿವಾರ-ಭಾನುವಾರ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಆನ್​​ಲೈನ್ ಹಾಗೂ ಆಫ್​​ಲೈನ್ ಮೂಲಕ ಟಿಕೆಟ್ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂದರೆ ವೀಕೆಂಡ್​​​ನಲ್ಲಿ ಒಂದು ದಿನ ಹಿಂದೆಯೇ ಟಿಕೆಟ್ ಕಾಯ್ದಿರಿಸಬೇಕು.

ಶೇ.50 ರಷ್ಟು ಟಿಕೆಟ್ ಆನ್​​ಲೈನ್ ಮೂಲಕ ಬುಕ್ಕಿಂಗ್​​ಗೆ ಅವಕಾಶ ನೀಡಲಾಗಿದೆ. ಕೆಎಸ್​​​ಟಿಡಿಸಿ ಸಂಸ್ಥೆಯ ಅಂತರ್ಜಾಲ ತಾಣದ ಮೂಲಕ ಬುಕ್ಕಿಂಗ್ ಮಾಡಬಹುದು. ಉಳಿದ ಶೇ.50 ರಷ್ಟು ಟಿಕೆಟ್ ಆಫ್​​ಲೈನ್ ಮೂಲಕ‌ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೇ ವೀಕೆಂಡ್​​ನಲ್ಲಿ 1000 ಬೈಕ್ 300 ಲಘು ವಾಹನಗಳಾದ ಮಿನಿ ಬಸ್, ಕಾರು, ಆಟೋಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net