More

    ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು

    ಕೋಲಾರ: ಸಾವಿರ ಕೋಟಿ ಆಸ್ತಿ ಒಡೆಯ ಕೆಜಿಎಫ್ ಬಾಬು ಕೊಟ್ಟಿದ್ದ ಚೆಕ್​ಗಳು ಬೌನ್ಸ್​ ಆಗಿದ್ದು, ಈ ಚೆಕ್​ ಪಡೆದಿದ್ದ ಮಕ್ಕಳಿಗೆ ಸಂಕಷ್ಟ ಎದುರಾಗಿದೆ.

    ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದ ಕರ್ನಾಟಕ ಪಬ್ಲಿಕ್​ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೆಜಿಎಫ್​​ ಬಾಬು 2021ರ ಸೆಪ್ಟೆಂಬರ್​ ಕೊನೇ ವಾರದಲ್ಲಿ 250ರಿಂದ 450 ವಿದ್ಯಾರ್ಥಿಗಳಿಗೆ ತಲಾ 500 ರೂ.ಗಳ ಚೆಕ್​ ವಿತರಣೆ ಮಾಡಿದ್ದರು. ಅವೆಲ್ಲವೂ ಈಗ ಬೌನ್ಸ್​ ಆಗಿವೆ. ಹಾಗಾಗಿ ಬ್ಯಾಂಕ್​ನವರು ಮಕ್ಕಳ ಖಾತೆಯಿಂದ ರಿಟರ್ನ್​ 590 ರೂಪಾಯಿ ಕಟ್​ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಬ್ಯಾಂಕ್​ನಲ್ಲಿ ವಿಚಾರಣೆ ಮಾಡಿದರೆ ಚೆಕ್​ ಬೌನ್ಸ್​ ಆಗಿದೆ. ಅದಕ್ಕೆ ರಿಟರ್ನ್​ ಚೆಕ್​ ಬೌನ್ಸ್​ ಆಗಿ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರಿಗೆ ದೂರು ಕೊಡಲು ಹೋದರೆ, ಮಧ್ಯವರ್ತಿಗಳು ದೂರು ನೀಡಬೇಡಿ ಎಂದು ಬೆದರಿಕೆ ಒಡ್ಡಿದ್ದಾರೆ. ಶಾಲೆಯ ಸಿಬ್ಬಂದಿಯನ್ನು ಕೇಳಿದರೆ, ಕೆಜಿಎಫ್​ ಬಾಬು ಅವರಿಗೆ ತಿಳಿಸಿದ್ದು, ಹಣ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು

    ನಮ್ಮ ಅಕೌಂಟ್​ನಿಂದ 590 ರೂ. ಕಟ್ಟಾಗಿದೆ. ನಮಗೆ ಹೆಚ್ಚುವರಿ ಹಣ ನೀಡಬೇಕೆಂದು ಬ್ಯಾಂಕ್​ ಸಿಬ್ಬಂದಿ ತಿಳಿಸಿದ್ದಾರೆ. ಕೆಜಿಎಫ್​ ಬಾಬು ಅವರು ಚೆಕ್​ ನೀಡಿದ್ದರಿಂದ ನಮಗೆ ಸಾಲದ ಹೊರೆಯಾಗಿದೆ ಎಂದು ವಿದ್ಯಾರ್ಥಿನಿ ಲಕ್ಷ್ಮಮ್ಮ ಅಳಲುತೋಡಿಕೊಂಡಿದ್ದಾರೆ.

    ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು

    ಕೆಜಿಎಫ್​​ ಬಾಬು ಅವರು ಮಕ್ಕಳಿಗೆ ನೀಡಿದ್ದ ಎಲ್ಲ ಚೆಕ್​ಗಳು ಬೌನ್ಸ್​ ಆಗಿವೆ. ಮಕ್ಕಳಿಗೆ ಮೋಸ ಮಾಡಿದ್ದರಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಎಸ್​ಡಿಎಂಸಿ ಅಧ್ಯಕ್ಷ ಆಂಜನೇಯಪ್ಪ ತಿಳಿಸಿದ್ದಾರೆ.

    ದೊಡ್ಡಪ್ಪನಿಂದಲೇ ಅತ್ಯಾಚಾರ, ತೀವ್ರ ರಕ್ತಸ್ರಾವವಾಗಿ 2 ವರ್ಷದ ಕಂದಮ್ಮ ಸಾವು: ಆನೇಕಲ್​ನಲ್ಲಿ ಅಮಾನುಷ ಘಟನೆ

    ಆಸ್ತಿ ಬರೆಸಿಕೊಂಡು ತಂದೆ-ತಾಯಿಯನ್ನ ಬೀದಿಗೆ ತಳ್ಳಿದ್ದ ಮಕ್ಕಳಿಗೆ ತಕ್ಕ ಪಾಠ ಕಲಿಸಿದ ಕಂದಾಯ ಇಲಾಖೆ!

    ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts