More

    ಕೆಂಗೇರಿ-ಚಲ್ಲಘಟ್ಟ ವಿಸ್ತರಿತ ಮಾರ್ಗದಲ್ಲಿ ಸೆ.29ಕ್ಕೆ ಸುರಕ್ಷತಾ ತಪಾಸಣೆ; ಅಕ್ಟೋಬರ್​ ವಾಣಿಜ್ಯ ಸೇವೆ ಸಾಧ್ಯತೆ!

    ಬೆಂಗಳೂರು: ಕೆಂಗೇರಿ-ಚಲ್ಲಘಟ್ಟ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಶುಕ್ರವಾರ (ಸೆ.29) ಅಂತಿಮ ಹಂತದ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

    ರೈಲಿನ ವೇಗ, ವಿದ್ಯುತ್​ ವ್ಯವಸ್ಥೆ, ರೈಲುಗಳ ಸಂಚಾರ ಸಮಯ, ಸಿಗ್ನಲಿಂಗ್​, ನಿಲ್ದಾಣಗಳಲ್ಲಿ ಮೂಲಸೌಕರ್ಯ ಮುಂತಾದ ಕ್ರಮಗಳ ಬಗ್ಗೆ ಕಮಿಷನರ್​ ಆಫ್ ಮೆಟ್ರೋ ರೈಲ್​ ಸೇಫ್ಟಿ (ಸಿಎಂಆರ್​ಎಸ್​) ಅಧಿಕಾರಿಗಳ ತಂಡ ಪರಿಶೀಲಿಸಿ ಅಂತಿಮ ವರದಿ ನೀಡಲಿದೆ. ಬಳಿಕ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ವಾಣಿಜ್ಯ ಸೇವೆ ಆರಂಭವಾಗಲಿದೆ.

    ಕಳೆದ ಗುರುವಾರ (ಸೆ.21)ದಂದು ಬೈಯಪ್ಪನಹಳ್ಳಿ-ಕೆ.ಆರ್​.ಪುರ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ನಡೆಸಿದ್ದ ಅಂತಿಮ ಹಂತದ ಪರಿಶೀಲನೆ ಯಶಸ್ವಿಯಾಗಿದ್ದು, ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿದೆ.

    ಬೈಯಪ್ಪನಹಳ್ಳಿ-ಕೆ.ಆರ್​.ಪುರ ವಿಸ್ತರಿತ ಮಾರ್ಗ ಹಾಗೂ ಕೆಂಗೇರಿ-ಚಲ್ಲಘಟ್ಟ ಮಾರ್ಗವು ಆರಂಭವಾದಲ್ಲಿ ಇಡೀ ನೇರಳೆ ಮಾರ್ಗ 42.5 ಕಿ.ಮೀ.ಗೆ ಹಿಗ್ಗಲಿದೆ. ಒಮ್ಮೆ ಈ ಮಾರ್ಗವು ಪೂರ್ಣವಾಗಿ ಕಾರ್ಯಾಚರಣೆ ಆದಲ್ಲಿ ನಗರದ ಪೂರ್ವಭಾಗದಲ್ಲಿರುವ ಐಟಿ ಕಾರಿಡಾರ್​ನಲ್ಲಿ ಕೆಲಸ ನಿರ್ವಹಿಸುತ್ತಿರುವ ಟೆಕ್ಕಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ನಿತ್ಯ ನೇರಳ ಲೇನ್​ನಲ್ಲಿ ನಿತ್ಯ 1.5 ಲಕ್ಕಿಂತಲೂ ಅಧಿಕ ಜನರು ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ.

    ಅಕ್ಟೋಬರ್​ ಮಧ್ಯಭಾಗದಲ್ಲಿ ಸೇವೆ?

    ಈಗಾಗಲೇ ಬೈಯಪ್ಪನಹಳ್ಳಿ-ಕೆ.ಆರ್​.ಪುರ ಮಾರ್ಗದಲ್ಲಿ ಅಂತಿಮ ತಪಾಸಣೆ ಯಶಸ್ವಿಯಾಗಿದ್ದು, ರೈಲು ಸಂಚಾರಕ್ಕೆ ಅನುಮತಿ ಲಭಿಸಿದೆ. ಇದೀಗ ಕೆಂಗೇರಿ&ಚಲ್ಲಟ್ಟ ಮಾರ್ಗ ಅಂತಿಮ ಪರಿಶೀಲನೆ ಸಿದ್ಧಗೊಂಡಿದೆ. ತಿಂಗಳಾಂತ್ಯದಲ್ಲಿ ಈ ಮಾರ್ಗದ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಅಕ್ಟೋಬರ್​ ತಿಂಗಳ ಮಧ್ಯಭಾಗದಲ್ಲಿ ವಿಸ್ತರಿತ ಎರಡೂ ಮಾರ್ಗಗಳು ವಾಣಿಜ್ಯ ಬಳಕೆಗೆ ತೆರೆದುಕೊಳ್ಳುವ ಸಾಧ್ಯತೆ ಇದೆ.

    ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಈಗಾಗಲೇ ಸೆ.29ರಂದು ವಿವಿಧ ಸಂಟನೆಗಳು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಇದೇ ದಿನದಂದು ನಡೆಯಲಿರುವ ಕೆಂಗೇರಿ&ಚಲ್ಲಟ್ಟ ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆಗೆ ಬಂದ್​ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಸುರಕ್ಷತಾ ಪರೀಕ್ಷೆ ದಿನಾಂಕ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

    ರಾಜ್ಯೋತ್ಸವ ರಸಪ್ರಶ್ನೆ - 27

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts