More

    ಉಪ್ಪು ಸೇವನೆಯಲ್ಲಿ ಭಾರತೀಯರೇ ಮುಂದು!

    ನವದೆಹಲಿ: ಭಾರತೀಯರು ಪ್ರತಿ ದಿನ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್​ಒ) ನಿಗದಿಪಡಿಸಿದ್ದಕ್ಕಿಂತ ಮೂರು ಗ್ರಾಂ ಹೆಚ್ಚು ಉಪ್ಪು ಸೇವಿಸುತ್ತಿರುವುದು ಭಾರತೀಯ ವೈದ್ಯಕಿಯ ಸಂಶೋಧನಾ ಮಂಡಳಿ (ಐಸಿಎಂಆರ್​) ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಡಬ್ಲುಎಚ್​ಒ ನಿಗದಿಪಡಿಸಿರುವ ಮಿತಿ ದೈನಿಕ ಐದು ಗ್ರಾಂ. ಆದರೆ ಭಾರತದಲ್ಲಿ ದಿನನಿತ್ಯ ಎಂಟು ಗ್ರಾಂ ಉಪ್ಪನ್ನು ಸೇವಿಸಲಾಗುತ್ತಿದೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ.

    ಉಪ್ಪು ಸೇವನೆಯು ಪುರುಷರು (8.9 ಗ್ರಾಂ), ಉದ್ಯೋಗಸ್ಥರು (8.6 ಗ್ರಾಂ) ಮತ್ತು ಹಾಲಿ ತಂಬಾಕು ಸೇವಿಸುವವರಲ್ಲಿ (8.3 ಗ್ರಾಂ) ಹೆಚ್ಚಾಗಿರುತ್ತದೆ ಎಂದು ನೇಚರ್​ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಮೀಾ ವರದಿ ಹೇಳಿದೆ. ಸೇವನೆ ಪ್ರಮಾಣವು ಬೊಜ್ಜಿನ ವ್ಯಕ್ತಿಗಳು (9.2 ಗ್ರಾಂ) ಮತ್ತು ಅಧಿಕ ರಕ್ತದೊತ್ತಡ (ಹೈ ಬಿಪಿ) ಇರುವವರಲ್ಲಿ (8.5 ಗ್ರಾಂ) ಯಾವಾಗಲೂ ಹೆಚ್ಚಾಗಿರುತ್ತದೆ ಎನ್ನುವುದೂ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಉಪ್ಪು ಸೇವನೆಯನ್ನು ದೈನಿಕ 5 ಗ್ರಾಮ್​ಗೆ ಇಳಿಸಿದರೆ ಹೈ ಬಿಪಿ ಸಂಭಾವ್ಯತೆಯನ್ನು ಶೇಕಡ 25ರಷ್ಟು ಕಡಿಮೆ ಮಾಡಬಹುದು. ಸಂಸ್ಕರಿತ ಆಹಾರ ಮತ್ತು ಮನೆ ಹೊರಗಿನ ಆಹಾರ ಬಳಕೆಯನ್ನು ನಾವು ಕಡಿಮೆ ಮಾಡುವ ಅಗತ್ಯವಿದೆ’ ಎಂದು ಐಸಿಎಂಆರ್​&ರಾಷ್ಟ್ರೀಯ ವ್ಯಾಧಿ ಮಾಹಿತಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಸಮೀಕ್ಷಾ ವರದಿಯ ಪ್ರಮುಖ ಲೇಖಕ ಪ್ರಶಾಂತ್​ ಮಾಥುರ್​ ಹೇಳಿದ್ದಾರೆ.

    ನೈಸರ್ಗಿಕ ಪರ್ಯಾಯ

    ಲಿಂಬೆ, ಜಜ್ಜಿದ ಬೆಳ್ಳುಳ್ಳಿ, ಕಾಡು ಮಾರ್ಜರಂ ಸೊಪ್ಪು (ಒರೆಗಾನೊ), ಕಾಳುಮೆಣಸು ಮೊದಲಾದವು ಉಪ್ಪಿಗೆ ನೈಸರ್ಗಿಕ ಪರ್ಯಾಯಗಳಾಗಿದ್ದು ಅವನ್ನು ಆಹಾರದಲ್ಲಿ ಸೇವಿಸಬೇಕೆನ್ನುತ್ತಾರೆ ಪೌಷ್ಟಿಕ ತಜ್ಞೆ ಪ್ರಿಯಾಂಕಾ ರೋಹಟ್ಗಿ.

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts