More

  ಪ್ರತಿದಿನ ಕರಿಬೇವಿನ ಎಲೆ, ಬೆಳ್ಳುಳ್ಳಿ ತಿನ್ನಿ ಆಮೇಲೆ ನಿಮ್ಮ ದೇಹದಲ್ಲಾಗುವ ಚಮತ್ಕಾರವನ್ನು ನೀವೇ ನೋಡಿ!

  ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಎಷ್ಟೇ ಅಭಿವೃದ್ಧಿ ಹೊಂದಿದರೂ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಆರೋಗ್ಯ ನಿರ್ವಹಣೆಯೂ ಒಂದು ಸವಾಲಾಗಿದೆ. ಆರೋಗ್ಯಯುತವಾಗಿ ಬದುಕು ನಡೆಸಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ. ಅದಕ್ಕಾಗಿ ಆರೋಗ್ಯಕರ ಅಭ್ಯಾಸ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಸಹ ನಿರ್ವಹಿಸುತ್ತಾರೆ. ಬೆಳಗೆದ್ದು ದೇಹವನ್ನು ದಂಡಿಸುತ್ತಾರೆ. ಆದರೆ, ದೇಹವನ್ನು ದಂಡಿಸಿದರೆ ಸಾಲದು. ಬೆಳಗ್ಗೆ ಎದ್ದಾಗ ಕೆಲವೊಂದು ಕೆಲಸಗಳನ್ನು ಚಾಚೂ ತಪ್ಪದೇ ಮಾಡಿದರೆ ತುಂಬಾ ಆರೋಗ್ಯವಾಗಿರುತ್ತೀರಿ.

  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಒಳ್ಳೆಯದು. ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಲು ಇದು ಉತ್ತಮ ಮಾರ್ಗವಾಗಿದೆ. ಬೆಳಗ್ಗೆ ಎದ್ದಾಗ 5 ಕರಿಬೇವಿನ ಸೊಪ್ಪು, ಒಂದು ಬೆಳ್ಳುಳ್ಳಿ ಎಸಳು ತಿಂದು ಒಂದು ಲೋಟ ಬಿಸಿ ನೀರು ಕುಡಿದರೆ ದೇಹದಲ್ಲಿ ಅನೇಕ ಅದ್ಭುತಗಳೇ ನಡೆಯುತ್ತವೆ.

  ಇದನ್ನೂ ಓದಿ: ಹಿಂದೂಯೇತರ ಸಮುದಾಯಗಳ ಜತೆ ಹೆಚ್ಚು ಬೆರೆಯಿರಿ; ಆರ್​ಎಸ್​ಎಸ್​ ಕಾರ್ಯಕರ್ತರಿಗೆ ಕರೆ ನೀಡಿದ ಮೋಹನ್​ ಭಾಗವತ್

  ಅಂದಹಾಗೆ ಕರಿಬೇವಿನ ಎಲೆಗಳು ಮತ್ತು ಬೆಳ್ಳುಳ್ಳಿ ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪದಾರ್ಥಗಳಾಗಿವೆ. ಹಸಿಯಾಗಿ, ಅದೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅವುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ಸಂಪೂರ್ಣವಾಗಿ ದೇಹಕ್ಕೆ ಹೋಗುತ್ತವೆ. ದೇಹದಲ್ಲಿನ ವಿವಿಧ ಸಮಸ್ಯೆಗಳನ್ನು ಸುಧಾರಿಸುತ್ತದೆ. ನೀವು ಒಂದು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ 5 ಕರಿಬೇವಿನ ಎಲೆಗಳು ಮತ್ತು 1 ಬೆಳ್ಳುಳ್ಳಿಯನ್ನು ತಿಂದರೆ ಏನೆಲ್ಲಾ ಅದ್ಭುತಗಳು ಸಂಭವಿಸುತ್ತವೆ ಎಂಬುದನ್ನು ತಿಳಿಯೋಣ.

  ತೂಕ ಕಳೆದುಕೊಳ್ಳಬಹುದು

  ಸ್ಥೂಲಕಾಯದಿಂದ ಬಳಲುತ್ತಿರುವವರು ಬೆಳಗ್ಗೆ ಕರಿಬೇವಿನ ಎಲೆ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ನೀವು ಇದನ್ನು ಒಂದು ತಿಂಗಳ ಕಾಲ ನಿರಂತರವಾಗಿ ಸೇವಿಸಿದರೆ ನಿಮ್ಮ ದೇಹದ ತೂಕದಲ್ಲಿ ಉತ್ತಮ ಬದಲಾವಣೆಯನ್ನು ಖಂಡಿತವಾಗಿ ಕಾಣಬಹುದು. ಏಕೆಂದರೆ ಕರಿಬೇವಿನ ಎಲೆಗಳಲ್ಲಿರುವ ಔಷಧೀಯ ಗುಣಗಳು ತೂಕ ಇಳಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ.

  ರಕ್ತದೊತ್ತಡ ನಿಯಂತ್ರಣ

  ಬೆಳ್ಳುಳ್ಳಿಯು ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್, ಡಯಲ್ ಡೈಸಲ್ಫೈಡ್, ಡಯಲ್ ಟ್ರೈಸಲ್ಫೈಡ್ ಮುಂತಾದ ಸಂಯುಕ್ತಗಳನ್ನು ಒಳಗೊಂಡಿರುವ ಸಲ್ಫರ್ ಇದಕ್ಕೆ ಕಾರಣವಾಗಿದೆ. ಅಲ್ಲದೆ ಕರಿಬೇವಿನ ಸೊಪ್ಪಿನಲ್ಲಿ ಉಪ್ಪು ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿದ್ದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಅದರಲ್ಲೂ ಈ ಎರಡು ಪದಾರ್ಥಗಳನ್ನು ಪ್ರತಿದಿನ ಸೇವಿಸಿದರೆ ಹೃದಯದ ಆರೋಗ್ಯ ಸುಧಾರಿಸುತ್ತದೆ.

  ಇದನ್ನೂ ಓದಿ: BBMP ಕಸದ ಲಾರಿಗೆ ಮತ್ತೊಂದು ಬಲಿ: ಪತ್ನಿ, 8 ತಿಂಗಳ ಮಗು ಅಗಲಿದ ಬೈಕ್​ ಸವಾರ, ಕುಟುಂಬಕ್ಕೆ ಗತಿ ಯಾರು?

  ದೇಹದ ಸ್ವಚ್ಛತೆ

  ದೇಹದಲ್ಲಿನ ವಿಷಕಾರಿ ಅಂಶಗಳ ಸಂಗ್ರಹವು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಮತ್ತು ದೇಹವನ್ನು ಸ್ವಚ್ಛವಾಗಿಡಲು, ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ, ಒಂದು ಲೋಟ ಬಿಸಿನೀರನ್ನು ಕುಡಿಯಿರಿ.

  ಇಮ್ಯೂನಿಟಿ ಬೂಸ್ಟರ್​

  ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವರು ಶೀತಗಳು, ಜ್ವರ ಮತ್ತು ಇತರ ಸೋಂಕುಗಳಿಗೆ ಹೆಚ್ಚು ಒಳಗಾಗಬಹುದು. ಹೀಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಯಸುವವರು, ಕರಿಬೇವಿನ ಎಲೆಗಳು ಮತ್ತು ಬೆಳ್ಳುಳ್ಳಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

  ಕರಿಬೇವಿನ ಎಲೆಗಳು ದೇಹದಲ್ಲಿನ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ತೋರಿಸಿವೆ. (ಏಜೆನ್ಸೀಸ್​)

  ಗರಡಿ ಮನೆಯಿಂದ ಮತ್ತೊಂದು ಹಾಡು; ಚಿತ್ರತಂಡದ ಜತೆಗೆ ಕೈ ಜೋಡಿಸಿದ ಬಾಲಿವುಡ್ ಸಂಸ್ಥೆ

  ಟೀಮ್ ಇಂಡಿಯಾ ದಿಗ್ಗಜರ ಸಾಲಿಗೆ ಸೇರಿದ ಶುಭಮಾನ್ ಗಿಲ್: ಭಾರತ ಪರ ವೇಗದ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್

  ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಅಂಬಾನಿ ಕುಟುಂಬ

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts