ಗರಡಿ ಮನೆಯಿಂದ ಮತ್ತೊಂದು ಹಾಡು; ಚಿತ್ರತಂಡದ ಜತೆಗೆ ಕೈ ಜೋಡಿಸಿದ ಬಾಲಿವುಡ್ ಸಂಸ್ಥೆ

garadi
Published on

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಗರಡಿ’. 2017ರಲ್ಲಿ ಬಿಡುಗಡೆಯಾದ ‘ಹ್ಯಾಪಿ ನ್ಯೂ ಇಯರ್’ ಹಾಗೂ ‘ಕಾಫಿತೋಟ’ ಚಿತ್ರದ ಬಳಿಕ ಬಿ.ಸಿ ಪಾಟೀಲ್ ರಾಜಕೀಯ ಜೀವನದಲ್ಲಿ ಬಿಜಿಯಿದ್ದರು. ಇದೀಗ ಆರು ವರ್ಷಗಳ ಬ್ರೇಕ್‌ನ ಬಳಿಕ ಮುಖ್ಯ ಪಾತ್ರದಲ್ಲಿ ಕಂಬ್ಯಾಕ್ ಮಾಡುತ್ತಿರುವುದು ವಿಶೇಷ.

ನಟನೆಯ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಬಿ.ಸಿ ಪಾಟೀಲ್ ಹೊತ್ತಿದ್ದಾರೆ. ಜತೆಗೆ ಯಶಸ್ ಸೂರ್ಯ ಚಿತ್ರಕ್ಕೆ ನಾಯಕರಾಗಿದ್ದು, ಇವರಿಗೆ ಸೋನಲ್ ಮೊಂಟೇರೊ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ವಿಶೇಷ ಪಾತ್ರದಲ್ಲಿ ದರ್ಶನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಚಿತ್ರದ ‘ಹೊಡಿರಲೇ ಹಲಗಿ’ ಹಾಡು ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಈ ವಿಶೇಷ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಕುಣಿದು ಕುಪ್ಪಳಿಸಿದ್ದಾರೆ. ಇಂದು ಈ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗುತ್ತಿದೆ.

ಇದೀಗ ಚಿತ್ರತಡದ ಜತೆಗೆ ಬಾಲಿವುಡ್‌ನ ಹೆಸರಾಂತ ರಿಲಾಯನ್ಸ್ ಎಂಟರ್ಟೇನ್ಮೆಂಟ್ ಕಂಪನಿ ಕೈ ಜೋಡಿಸಿದೆ. ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿರುವ ರಿಲಾಯನ್ಸ್ ಎಂಟರ್ಟೇನ್ಮೆಂಟ್ ಸಿನಿಮಾವನ್ನು ವಿಶ್ವಾದ್ಯಂತ ರಿಲೀಸ್ ಮಾಡಲು ಸಜ್ಜಾಗಿದೆ ಎನ್ನಲಾಗಿದೆ. ನವೆಂಬರ್ 10ಕ್ಕೆೆ ಸಿನಿಮಾ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net