

ಚೆನ್ನೈ: ನಟ ಕಮಲ್ ಹಾಸನ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಸಮಸ್ಯೆ, ಕಹಿ ಅನುಭವಗಳ ಬಗ್ಗೆ ಮಾತನಾಡುತ್ತಾ, ನಾನು 21 ವರ್ಷ ವಯಸ್ಸಿನವನಾಗಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದ ಕಾಲೇಜು ಕಾರ್ಯಕ್ರಮವೊಂದರಲ್ಲಿ ಕಮಲ್ ಹಸಲ್ ಮಾತನಾಡುತ್ತಾ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ವಿದ್ಯಾರ್ಥಿಗಳಿಂದ ಕೆಲವು ಪ್ರಶ್ನೆಗಳನ್ನು ಪಡೆದರು. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಲು ಕಮಲ್ ಅವರನ್ನು ಕೇಳಿದಾಗ ನಟ ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳ ಕುರಿತಾಗಿ ಹೇಳುವ ಮೂಲಕವಾಗಿ ಆತ್ಮಹತ್ಯೆ ತಪ್ಪು ನಿರ್ಧಾರ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
20 ಅಥವಾ 21 ವರ್ಷದವನಿದ್ದಾಗ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದೇನು. ಒಳ್ಳೆ ಅವಕಾಶಗಳು ಬರುತ್ತಿಲ್ಲ, ಮನ್ನಣೆ ಸಿಗುತ್ತಿಲ್ಲ ಎಂದು ಅನಿಸುತ್ತಿತ್ತು . ತಾನು ಸತ್ತರೆ ಒಬ್ಬ ಒಳ್ಳೆಯ ಕಲಾವಿದ, ತುಂಬಾ ಪ್ರತಿಭಾವಂತ ನಟ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸುತ್ತಾರೆ ಎಂದು ಭಾವಿಸಿದ್ದೇನು. ತಮ್ಮ ಗುರುಗಳಾದ ಅನಂತ್ ಅವರಿಗೂ ಇದೇ ಮಾತು ಹೇಳಿದ್ದು ನೆನಪಾಯಿತು. ನಿಮ್ಮ ಕೆಲಸವನ್ನು ನೀವು ಮಾಡಬೇಕು, ಸಮಯ ಬಂದಾಗ ಮನ್ನಣೆ ತನ್ನಿಂದ ತಾನೇ ಬರುತ್ತದೆ ಎಂದು ಹೇಳಿರುವುದು ನೆನಪಿಗೆ ಬಂತು ಎಂದು ಕಮಲ್ ಹಾಸನ್ ಹೇಳಿದರು.
ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ ಅಂತ ನನಗೂ ಅನ್ನಿಸಿತು. ಕೊಲ್ಲುವುದು ಎಷ್ಟು ಅಪರಾಧವೋ.. ಆತ್ಮಹತ್ಯೆಯೂ ಅಪರಾಧವೇ ಆಗಿದೆ. ಜೀವನದಲ್ಲಿ ಕತ್ತಲೆ ಎಂದಿಗೂ ಉಳಿಯುವುದಿಲ್ಲ ಬೆಳಕು ಬರುವುದು ಖಂಡಿತ. ನಿದ್ದೆ ಮಾಡುವ ಮೊದಲು ನಿಮ್ಮ ಕನಸಿನ ಬಗ್ಗೆ ಗುರಿ ಇರಿಸಿ. ಸಾವು ನಮ್ಮ ಜೀವನದ ಒಂದು ಭಾಗವಾಗಿದ್ದು, ಅದಕ್ಕಾಗಿ ಕಾಯಬಾರದು ಎಂದು ಕಮಲ್ ಹೇಳಿದ್ದಾರೆ.
ಕಮಲ್ ಹಾಸನ್ ಪ್ರಸ್ತುತ ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ನಾಗ್ ಅಶ್ವಿನ್ ಅವರ ಚೊಚ್ಚಲ ನಿರ್ದೇಶನದ ಕಲ್ಕಿ 2898 AD ನಲ್ಲಿ ಕಲ್ಕಿ ಖಳನಾಯಕನಾಗಿ ನಟಿಸುತ್ತಿದ್ದಾರೆ.