More

    ಗರ್ಭಿಣಿ ಅಂತ ಗೊತ್ತಿಲ್ದೆ ವರ್ಕೌಟ್‌ ಮಾಡಿದೆ, 4 ತಿಂಗಳಲ್ಲಿ ಗರ್ಭಪಾತವಾಗಿ ಮಾನಸಿಕ ಖಿನ್ನತೆಗೊಳಲಾಗಿದ್ದೇನು: ಭಾವುಕರಾದ ನಮಿತಾ

    ಬೆಂಗಳೂರು: ಒಂದು ಕಾಲದಲ್ಲಿ ಹಲವರ ಹೃದಯ ಬಡಿತ ಹೆಚ್ಚಿಸಿದ್ದ ಬಹುಭಾಷಾ ನಟಿ ನಮಿತಾ, ಈಗ ಸಿನಿಮಾ ನಟನೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ.

    90ರ ದಶಕದಲ್ಲಿ ಗ್ಲಾಮರಸ್ ರೋಲ್‌ನಲ್ಲಿ ಮಿಂಚಿದ್ದ ನಟಿ ನಮಿತಾ , ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ತಮ್ಮ ನಟನೆ ಹಾಗೂ ಗ್ಲಾಮರ್‌ನಿಂದ ಭಾರೀ ಗಮನ ಸೆಳೆದಿದ್ದರು. ನಟಿ ನಮಿತಾ ಜೀವನದಲ್ಲಿ ನಡೆದ ಘಟನೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಗಮನ ಸೆಳೆಯುತ್ತಿದೆ.

    ನಟಿ ನಮಿತಾ ಅವರು ನೀಲಕಂಠ, ಇಂದ್ರ, ಬೆಂಕಿ ಬಿರುಗಾಳಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರನ್ನು ಹೆಚ್ಚಾಗಿ ಗ್ಲಾಮರಸ್‌ ರೋಲ್‌ಗಳಲ್ಲೇ ತೋರಿಸಲಾಗಿದೆ.

    ತಮಿಳು, ಕನ್ನಡ ಮತ್ತು ಮಲಯಾಳಂ ಮುಂತಾದ ಅನೇಕ ತೆಲುಗು ಚಿತ್ರಗಳಲ್ಲಿ ನಮೀತಾ ನಟಿಸಿದ್ದಾರೆ. ತನ್ನ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದಳು. 2020ರಲ್ಲಿ ತಮಿಳಿನ ಮಾಯಾ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಮಿತಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಗರ್ಭಾವಸ್ಥೆಯ ಕಹಿ ಅನುಭವಗಳನ್ನು ಹಂಚಿಕೊಂಡರು.

    ನಾನು 2021 ರಲ್ಲಿ ಮೊದಲ ಬಾರಿಗೆ ಗರ್ಭಿಣಿಯಾದೆ. ಆಗ ನಾನು ಸೂರತ್‌ನಲ್ಲಿದ್ದೆ. ನನ್ನ ಜೊತೆ ನನ್ನ ಅಜ್ಜಿಯರೂ ಇದ್ದಾರೆ.ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ನಾಲ್ಕು ತಿಂಗಳ ನಂತರ ಗರ್ಭಪಾತವಾಯಿತು. ನಾನು ತೀವ್ರ ಖಿನ್ನತೆಗೆ ಒಳಗಾಗಿದ್ದೆ. ಆದರೆ ಅದೃಷ್ಟವಶಾತ್ ಆ ನಂತರ ಮತ್ತೆ ಗರ್ಭಿಣಿಯಾದೆ’ ಎಂದು ನಮಿತಾ ಅಂದಿನ ನೆನಪುಗಳನ್ನು ಮೆಲುಕು ಹಾಕಿದರು.

    ಅವಳಿ ಮಕ್ಕಳನ್ನು ಹೆರುವ ಮುನ್ನ ಕೂಡ ಒಮ್ಮೆ ಗರ್ಭ ಧರಿಸಿದ್ದೆ. ಗರ್ಭಪಾತವಾಗಿತ್ತು. 4 ತಿಂಗಳ ಗರ್ಭಿಣಿ ಆಗಿದ್ದೆ. ನನಗೆ ಮೊದಲ 2 ತಿಂಗಳು ಗೊತ್ತಿರಲಿಲ್ಲ. ಹೆವಿ ವರ್ಕೌಟ್ ಮಾಡುತ್ತಿದ್ದೆ. ಬಳಿಕ ನನಗೆ ಗರ್ಭಪಾತವಾಗಿದ್ದು. ಬಳಿಕ ನಾನು ಡಿಪ್ರೆಶನ್‌ಗೆ ಒಳಗಾಗಿದ್ದೆ ಎಂದಿದ್ದಾರೆ.

    See also  ಬಿಸಿಸಿಐಗೆ ಜನರಲ್​ ಮ್ಯಾನೇಜರ್​ ಬೇಕಾಗಿದ್ದಾರೆ!

    ನಮಿತಾ ಅವರು ಉದ್ಯಮಿ ವೀರೇಂದ್ರ ಚೌಧರಿ ಅವರನ್ನು 2017 ರಲ್ಲಿ ವಿವಾಹವಾದರು. ಅವರಿಗೆ 2022 ರಲ್ಲಿ ಅವಳಿ ಮಕ್ಕಳು ಜನಿಸಿದರು. ಇತ್ತೀಚೆಗೆ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts