

ಮುಂಬೈ: ಬಾಲಿವುಡ್ ಕಲಾವಿದರಿಗೆ ಡ್ರಗ್ಸ್ ನಂಟಿರುವ ಕುರಿತು ದೀಪಿಕಾ ಪಡುಕೋಣೆ ಸೇರಿದಂತೆ ನಾಲ್ವರು ಬಾಲಿವುಡ್ ನಟಿಯರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಸಮನ್ಸ್ ನೀಡಿದ್ದು, ಶುಕ್ರವಾರ ಆ ನಟಿಯರು ಎನ್ಸಿಬಿ ಅಧಿಕಾರಿಗಳ ಎದುರು ಹಾಜರಾಗಬೇಕಿದೆ.
ಇದನ್ನೂ ಓದಿ: ಡ್ರಗ್ಸ್ ಪೆಡ್ಲರ್ ಜತೆ ನಟ ದಿಗಂತ್ ಚಾಟಿಂಗ್…
ಈ ನಾಲ್ವರು ನಟಿಯರ ಜತೆಗೆ ಕಂಗನಾ ರಣಾವತ್ಗೆ ಮಾತ್ರ ಯಾಕೆ ಇನ್ನೂ ಸಮನ್ಸ್ ಕೊಟ್ಟಿಲ್ಲ ಎಂದು ನಟಿ ನಗ್ಮಾ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಕಾರಣಕ್ಕೆ ನಾಲ್ವರು ನಟಿಯರಿಗೆ ಎನ್ಸಿಬಿ ಸಮನ್ಸ್ ಕೊಟ್ಟಿದೆ. ಕಂಗನಾ ಸಹ ತಾನು ಹಿಂದೊಮ್ಮೆ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದರು. ಹಾಗಿರುವಾಗ, ಅವರಿಗೆ ಮಾತ್ರ ಯಾಕೆ ಇನ್ನೂ ಸಮನ್ಸ್ ಕೊಟ್ಟಿಲ್ಲ' ಎಂದು ನಗ್ಮಾ ಪ್ರಶ್ನಿಸಿದ್ದಾರೆ.
ಎನ್ಸಿಬಿಯವರು ಈ ವಿಷಯದಲ್ಲಿ ಬಹಳ ಸೆಲೆಕ್ಟಿವ್ ಆಗಿದ್ದಾರೆ ಎಂದು ಆರೋಪಿಸಿರುವ ಕಂಗನಾ, 'ಬೇರೆಯವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಂಗನಾ, ಹಲವು ದಿನಗಳಿಂದ ಟ್ವೀಟ್ ಮಾಡುತ್ತಲೇ ಇದ್ದಾರೆ. ಹಿಂದೊಮ್ಮೆ ತಾವು ಸಹ ಡ್ರಗ್ಸ್ ತೆಗೆದುಕೊಂಡಿದ್ದಾಗಿ ಹೇಳಿದ್ದರು. ಆದರೆ, ಆಕೆಯನ್ನು ಮಾತ್ರ ಎನ್ಸಿಬಿ ಅಧಿಕಾರಿಗಳು ಇದುವರೆಗೂ ಪ್ರಶ್ನೆ ಮಾಡಿಲ್ಲ. ಒಬ್ಬರು ಮಾಡಿದ್ದು ತಪ್ಪು ಎನ್ನುವುದಾದರೆ, ಎಲ್ಲರು ಮಾಡಿದ್ದೂ ತಪ್ಪೇ. ಹಾಗಾಗಿ ಕೆಲವರತ್ತ ಮಾತ್ರ ಎನ್ಸಿಬಿಯವರು ಯಾಕೆ ಬೆರಳು ಮಾಡಿ ತೋರಿಸುತ್ತಿದ್ದಾರೆ' ಎಂಬುದು ನಗ್ಮಾ ಪ್ರಶ್ನೆ.