ನಾಗಚೈತನ್ಯ ಖಿನ್ನತೆಗೊಳಗಾಗಿದ್ದ.. ಈಗ ಅವನಲ್ಲಿ ಸಂತೋಷ ಕಾಣುತ್ತಿದೆ: ನಾಗಾರ್ಜುನ

ಹೈದರಾಬಾದ್​​: ಟಾಲಿವುಡ್​ ಸ್ಟಾರ್​ ನಾಗಚೈತನ್ಯ ಮತ್ತು ನಟಿ ಸೋಭಿತಾ ಧೂಳಿಪಾಲ ಅವರು ಕುಟುಂಬಸ್ಥರ ಸಮ್ಮುಖದಲ್ಲಿ ಗುರುವಾರ (ಆಗಸ್ಟ್​​ 8) ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಕೆಲವು ಸಮಯದಿಂದ ಚೈತನ್ಯ ಮತ್ತು ಸೋಭಿತಾ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಆದರೆ ಈ ವಿಚಾರವಾಗಿ ಇಬ್ಬರು ಬಹಿರಂಗವಾಗಿ ಏನನ್ನೂ ತಿಳಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಾಗ್​ಚೈತನ್ಯ ಮತ್ತು ಸೋಭಿತಾ ಅವರ ನಿಶ್ಚಿತಾರ್ಥದ ಫೋಟೊಗಳನ್ನು ನಟ ನಾಗಾರ್ಜುನ​ ಹಂಚಿಕೊಂಡಿದ್ದಾರೆ. ಇದರಿಂದ ಅವರ ನಿಶ್ಚಿತಾರ್ಥದ ವಿಚಾರ ದೃಢಪಟ್ಟಿದೆ.

ಇದನ್ನು ಓದಿ: ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಜೂ.ಎನ್​ಟಿಆರ್​​ 31ನೇ ಸಿನಿಮಾ; ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ ಚಿತ್ರತಂಡ

ನಾಗಚೈತನ್ಯ ಖಿನ್ನತೆಗೊಳಗಾಗಿದ್ದ.. ಈಗ ಅವನಲ್ಲಿ ಸಂತೋಷ ಕಾಣುತ್ತಿದೆ: ನಾಗಾರ್ಜುನ

ಇಬ್ಬರು ಮದುವೆ ವಿಚಾರವಾಗಿ ನಟ ನಾಗಾರ್ಜುನ ಪ್ರತಿಕ್ರಿಸಿದ್ದು, ಈ ಹಿಂದೆ ಹೇಳಿದಂತೆ ಮದುವೆ ಸಮಾರಂಭ ತಕ್ಷಣಕ್ಕಿಲ್ಲ. ಆಗಸ್ಟ್​​​ 8 ತುಂಬಾ ಶುಭಕರವಾದ ದಿನವೆಂಬ ಕಾರಣಕ್ಕೆ ತರಾತುರಿಯಲ್ಲಿ ನಿಶ್ಚಿತಾರ್ಥ ಮಾಡಿದ್ದೇವೆ. ನಿಶ್ವಿತಾರ್ಥ ಸಮಾರಂಭದಲ್ಲಿ ಹತ್ತಿರದ ಕುಟುಂಬಸ್ಥರು ಮಾತ್ರ ಇದ್ದೇವು. ನಿಶ್ಚಿತಾರ್ಥ ತುಂಬಾ ಚೆನ್ನಾಗಿ ನಡೆದಿದೆ. ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. 

ಈ ನಿಶ್ಚಿತಾರ್ಥ ಸಮಾರಂಭ ನಮ್ಮ ಕುಟುಂಬಕ್ಕೆ ಸುಲಭವಾಗಿರಲಿಲ್ಲ. ನಾಗಚೈತನ್ಯ ಮತ್ತು ಸಮಂತಾ ನಡುವಿನ ವಿಚ್ಛೇದನದ ಬಗ್ಗೆ  ನಟ ನಾಗಾರ್ಜುನ ಪ್ರತಿಕ್ರಿಯಿಸಿದ್ದು, ಸಮಂತಾ ಜತೆಗಿನ ವಿಚ್ಛೇದನದ ನಂತರ ನಾಗಚೈತನ್ಯ ಖಿನ್ನತೆಗೆ (ಡಿಪ್ರೆಷನ್​​) ಒಳಗಾಗಿದ್ದರು. ನನ್ನ ಮಗನಿಗೆ ಅದು ಸುಲಭದ ಸಮಯವಾಗಿಲಿಲ್ಲ. ಅವನು ತನ್ನ ಮಾತುಗಳಿಂದ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ತನ್ನ ಭಾವನೆಗಳನ್ನು ಯಾರಿಗೂ ತೋರಿಸುವುದಿಲ್ಲ, ಆದರೆ ಅವನು ದುಃಖದಲ್ಲಿದ್ದಾನೆ ಎಂಬುದು ನನಗೆ ತಿಳಿದಿತ್ತು. ಈಗ ಮತ್ತೆ ಅವನು ನಗುತ್ತಿರುವುದನ್ನು ನೋಡಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ನಾಗಚೈತನ್ಯ ಖಿನ್ನತೆಗೊಳಗಾಗಿದ್ದ.. ಈಗ ಅವನಲ್ಲಿ ಸಂತೋಷ ಕಾಣುತ್ತಿದೆ: ನಾಗಾರ್ಜುನ

ನಾಗಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು 2017ರಲ್ಲಿ ವಿವಾಹವಾದರು. ಆದರೆ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. 2021ರಲ್ಲಿ ನಾಲ್ಕು ವರ್ಷಗಳ ನಂತರ ಇಬ್ಬರು ಬೇರ್ಪಟ್ಟರು.(ಏಜೆನ್ಸೀಸ್​​)

ಅಭಿಮಾನಿಗಳಿಗೆ ಮಾದರಿ ಆಗಬೇಕಾದ್ರೆ ಇದನ್ನು ಮಾಡಬಾರದು; ಜಾನ್​ ಅಬ್ರಾಹಂ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…