

ಕುಂದಾಪುರ: ಬೆಂಗಳೂರಿನ ವಂದೇ ವಾತರಂ ಲಲಿತಕಲಾ ಅಕಾಡೆಮಿ, ರಂಗ ದಿಬ್ಬಣ ಸಂಸ್ಥೆಯು ಕುಂದಾಪುರದ ನಾಗರಾಜ್ ಖಾರ್ವಿ ಅವರ ಸೇವೆ ಗುರುತಿಸಿ ರಂಗ ದಿಬ್ಬಣ ಕರ್ನಾಟಕ ರಾಜ್ಯ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ವಾಡಿದರು.
ಮಣಿಪಾಲದ ವೈದ್ಯಕೀಯ ಸಂಸ್ಥೆಯೊಂದಿಗೆ ಉತ್ತಮ ಸಂಬಂಧ ಹೊಂದಿರುವ ನಾಗರಾಜ್ ಖಾರ್ವಿ ಮಣಿಪಾಲ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತಿದ್ದರು. ಜಿ.ಶಂಕರ ಟ್ರಸ್ಟ್ ಹಾಗೂ ಮೊಗವೀರ ಸಂಟನೆಯೊಂದಿಗೆ ಅತೀ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿದ್ದಾರೆ. ವಂದೇ ವಾತರಂ ಲಲಿತಕಲಾ ಅಕಾಡೆಮಿ, ರಂಗ ದಿಬ್ಬಣ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.