ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತ

byn (1)
Published on

ಬೈಂದೂರು: ಹುಟ್ಟು ಸಾವುಗಳ ನಡುವಿನ ನಾಲ್ಕು ದಿನದ ಬದುಕಿನಲ್ಲಿ ನಾವು ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತವಾಗಿರುತ್ತದೆ. ಅದೇ ರೀತಿಯಲ್ಲಿ ಪುಟ್ಟ ಗ್ರಾಮದಲ್ಲಿ ಹುಟ್ಟಿ ಕಡುಕಷ್ಟದಲ್ಲಿ ಬೆಳೆದು ತಮ್ಮ ಸತ್ಕಾರ್ಯಗಳ ಮೂಲಕ ದೇಶ, ವಿದೇಶದಲ್ಲಿ ಗುರುತಿಸಿಕೊಂಡಿರುವ ಸುರೇಶ ಎಸ್.ಪೂಜಾರಿ ನಮಗೆಲ್ಲ ಮಾದರಿಯಾಗಿದ್ದಾರೆ. ಅವರ ವ್ಯಕ್ತಿತ್ವ, ಆದರ್ಶ ಮುಂದಿನ ಪೀಳಿಗೆಗಳಿಗೆ ದಾರಿ ದೀಪವಾಗಲಿ ಎಂದು ಹಾಸನದ ಸೋಲೂರು ಶ್ರೀ ರೇಣುಕಾ ಯೆಲ್ಲಮ್ಮದೇವಿ ದೇವಸ್ಥಾನದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ನಿಧನರಾದ ಮಹಾದಾನಿ, ಹಿರಿಯ ಉದ್ಯಮಿ ಹಾಗೂ ಮುಂಬೈನ ಸುಖ ಸಾಗರ್ ಗ್ರೂಪ್ ಆಫ್ ಹೊಟೇಲ್ಸ್ ಸಂಸ್ಥಾಪಕ ಸುರೇಶ ಎಸ್.ಪೂಜಾರಿ ಅವರ ಭಾವಚಿತ್ರಕ್ಕೆ ಮರವಂತೆ ಶ್ರೀ ವರಾಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪುಷ್ಪಾರ್ಚನೆ ಮೂಲಕ ನುಡಿನಮನ ಸಲ್ಲಿಸಿ ಮಾತನಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ಸುರೇಶ್ ಅವರ ಪುತ್ರರಾದ ಸಿದ್ದಾರ್ಥ ಎಸ್.ಪೂಜಾರಿ, ಭರತ್ ಎಸ್.ಪೂಜಾರಿ, ಉದ್ಯಮಿ ಎನ್.ಒ.ಪೂಜಾರಿ, ಸಿಲ್ವೆಸ್ಟರ್ ಅಲ್ಮೇಡ, ಬಾಬು ಶಿವ ಪೂಜಾರಿ ಮುಂಬೈ, ಬಾಲಕೃಷ್ಣ ಹೆಗಡೆ ಬೆಂಗಳೂರು, ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್, ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಹರೀಶ ಅಮೀನ್, ವಿಜಯಕೃಷ್ಣ ಪಡುಕೋಣೆ, ವಕೀಲ ಇಂದ್ರಾಜ್ ಸಿಂಧೆ, ಕುಟುಂಬದವರಾದ ಬಾಬು ಎಸ್.ಹೊಸಮನೆ, ಶಂಕರ ಎಂ.ಪೂಜಾರಿ, ರವೀಜ ಪೂಜಾರಿ, ಪ್ರಕಾಶ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ಕೆ.ಸಿ.ರಾಜೇಶ್ ನಿರೂಪಿಸಿದರು. ಡಾ.ಪ್ರೇಮಾನಂದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net