ಕಲ್ಕಿ 2898 AD ಸೀಕ್ವೆಲ್​ನಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ಮಹೇಶ್​ಬಾಬು; ನಿರ್ದೇಶಕ ನಾಗ್ ಅಶ್ವಿನ್ ಹೇಳಿದ್ದೇನು?

Untitled-design-2024-07-05T163001.200
Published on

ಹೈದರಾಬಾದ್​​: ಕಳೆದ ವಾರ ದೇಶಾದ್ಯಂತ ಕಲ್ಕಿ 2898 AD ರಿಲೀಸ್​ ಆಗಿದೆ. ಸಿನಿಮಾ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್​ ಹಿಟ್​ನೊಂದಿಗೆ ಬಾಕ್ಸ್​​ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್​ನೊಂದಿಗೆ ಮುನ್ನಡೆಯುತ್ತಿದೆ. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಶೋಭನಾ, ಅನ್ನಾ ಬೆನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನು ಅತಿಥಿ ಪಾತ್ರಗಳಲ್ಲಿ ಮೃಣಾಲ್ ಠಾಕೂರ್, ಎಸ್ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಬೆನ್ನೆಲುಬು ಪಾತ್ರಗಳಲ್ಲಿ ಶ್ರೀಕೃಷ್ಣನ ಪಾತ್ರವು ಕೂಡ ಒಂದು. ಸಿನಿಮಾ ನೋಡಿದ ಅಭಿಮಾನಿಗಳು ಕಲ್ಕಿ ಸೀಕ್ವೆಲ್​ನಲ್ಲಿ ಶ್ರೀಕೃಷ್ಣನಾಗಿ ಯಾರು ನಟಿಸಬಹುದು ಎಂದು ಆಲೋಚಿಸುತ್ತಿದ್ದಾರೆ. ಅದರಲ್ಲಿ ಕೆಲವರು ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಕೃಷ್ಣನಾಗಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಿದ್ದರೆ, ಮತ್ತೆ ಕೆಲವರು ನಾನಿ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಊಹಿಸಿದ್ದಾರೆ.

ಫ್ಯಾನ್ಸ್​​ ಆಲೋಚನೆಗಳಿಗೆ ಬ್ರೇಕ್​ ಹಾಕುವಂತೆ ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ದೇಶಕ ನಾಗ್​ ಅಶ್ವಿನ್​​​ ಸಿನಿಮಾದ ಮುಂದಿನ ಭಾಗದಲ್ಲಿ ಕೃಷ್ಣನ ಪಾತ್ರಧಾರಿ ಯಾರಗಲಿದ್ದಾರೆ ಎಂಬ ಪ್ರಶ್ನೆಗೆ ತೆರೆ ಎಳೆದಿದ್ದಾರೆ. ಕೃಷ್ಣನ ಪಾತ್ರವನ್ನು ಒಬ್ಬರ ಗುರುತಿಲ್ಲದೆ ಇಟ್ಟುಕೊಳ್ಳುವುದು ಕಲ್ಪನೆಯಾಗಿತ್ತು. ಒಬ್ಬರನ್ನು ಕೃಷ್ಣ ಪಾತ್ರಧಾರಿಯನ್ನಾಗಿ ಮಾಡಿದರೆ ಆ ಪಾತ್ರವಾಗಿ ಉಳಿಯುತ್ತದೆ. ಅವನನ್ನು ಗಾಢ ಬಣ್ಣಗಳಲ್ಲಿ ಗಾಢ ರೂಪದಲ್ಲಿ ತೋರಿಸಬೇಕಿತ್ತು. ನಿಗೂಢ ಆಕೃತಿಯಂತೆಯೇ ಕೃಷ್ಣನನ್ನು ಇರಿಸುವುದು ಕಲ್ಪನೆಯಾಗಿತ್ತು. ಸ್ವೀಕ್ವೆಲ್​ನಲ್ಲೂ ಕೃಷ್ಣನನ್ನು ತೋರಿಸುವ ಪ್ಲ್ಯಾನ್​ ಇಲ್ಲ. ಈಗಿನಂತೆಯೇ ಮುಂದಿನ ಭಾಗದಲ್ಲೂ ಕೃಷ್ಣನನ್ನು ತೋರಿಸುತ್ತೇನೆ ಎಂದಿದ್ದಾರೆ.

ಈಗಾಗಲೇ 25-30 ದಿನಗಳ ಕಾಲ ಕಲ್ಕಿ ಸಿನಿಮಾದ ಮುಂದಿನ ಭಾಗವನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಕಮಲ್ ಹಾಸನ್ ಅವರ ಮುಖ್ಯ ಎದುರಾಳಿ ಸುಪ್ರೀಮ್ ಯಾಸ್ಕಿನ್ ವಿರುದ್ಧ ಪ್ರಭಾಸ್ ಪಾತ್ರ ಭೈರವ ಮತ್ತು ಅಮಿತಾಬ್ ಅವರ ಪಾತ್ರದ ಅಶ್ವತ್ಥಾಮವನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net