'ಕುಬೇರ'ನ ರಾಣಿಯ ಫಸ್ಟ್​ಲುಕ್​ ರಿಲೀಸ್​; ಕುತೂಹಲ ಮೂಡಿಸುತ್ತಿದೆ ರಶ್ಮಿಕಾ ಹೊಸ ರೂಪ

Untitled-design-2024-07-05T145440.525
Published on

ಹೈದರಾಬಾದ್​​: ಹ್ಯಾಪಿಡೇಸ್​​ ಸಿನಿಮಾ ಖ್ಯಾತಿಯ ನಿರ್ದೇಶಕ ಶೇಖರ್​​ ಕಮ್ಮುಲ ನಿರ್ದೇಶನದ ಕುಬೇರ ಚಿತ್ರದಲ್ಲಿ ಕಾಲಿವುಡ್​​ ಸ್ಟಾರ್​ ಹೀರೋ ಧನುಷ್​, ಟಾಲಿವುಡ್​​​ ನಟ ನಾಗಾರ್ಜುನ ಅಕ್ಕಿನೇನಿ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಗೊತ್ತೇ ಇದೆ. ಈ ಪ್ಯಾನ್-ಇಂಡಿಯಾ ಸಿನಿಮಾ ಕುಬೇರ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಪ್ರಸ್ತುತ ಈ ಚಿತ್ರದ ಶೂಟಿಂಗ್​​ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಈ ಮಧ್ಯೆ ಚಿತ್ರತಂಡ ರಶ್ಮಿಕಾ ಮಂದಣ್ಣ ಅವರ ಫಸ್ಟ್​​ಲುಕ್​ ವೀಡಿಯೊವನ್ನು ಬಿಡುಗಡೆ ಮಾಡಿದೆ.

ವೀಡಿಯೊದಲ್ಲಿ ರಶ್ಮಿಕಾ ಕಾಡಿನ ಮಧ್ಯೆ ಮಣ್ಣನು ಅಗೆದು ಸೂಟ್ಕೇಸ್​ ಹೊರತೆಗೆಯುತ್ತಾರೆ. ಸೂಟ್ಕೇಸ್​ ತೆರೆದು ಅದರಲ್ಲಿ ಇರುವ ಹಣವನ್ನು ನೋಡಿ ಉತ್ಸುಕರಾಗಿ ಕಾಡಿನಿಂದ ಹೊರೆನಡೆಯುತ್ತಿರುವುದನ್ನು ನೋಡಬಹುದು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರು ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ.

ಸಿನಿಮಾದಲ್ಲಿ ರಶ್ಮಿಕಾ ಪಾತ್ರದ ಬಗ್ಗೆ ಕುತೂಹಲ ಮೂಡಿಸುವಂತೆ ಬಿಡುಗಡೆ ಮಾಡಿರುವ ವೀಡಿಯೊ ನೋಡಿ ಅಭಿಮಾನಿಗಳು ಆಕೆಯ ಪಾತ್ರ ಹೇಗಿರಲಿದೆ ಎಂದು ಆಲೋಚಿಸುತ್ತಿದ್ದಾರೆ. ಅಲ್ಲದೆ ವೀಡಿಯೊ ನೋಡಿ ನೆಟ್ಟಿಗರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಅಭಿಮಾನಿ ಕುತೂಹಲಕಾರಿ, ಕಥೆ ಮತ್ತು ಅದರಲ್ಲಿ ನಿಮ್ಮ ಪಾತ್ರವನ್ನು ತಿಳಿಯಲು ಸಿನಿಮಾ ಬಿಡುಗಡೆಗಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಲವ್ ಯು ರಾಶೂ, ಸಿನಿಮಾ ನೋಡಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಈ ಹಿಂದೆ ಕುಬೇರ ಚಿತ್ರತಂಡ ಬಿಡುಗಡೆ ಮಾಡಿದ್ದ ಧನುಷ್ ಹಾಗೂ ನಾಗಾರ್ಜುನ ಅಕ್ಕಿನೇನಿ ಅವರ ಫಸ್ಟ್​​ಲುಕ್​​ಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಳೆಯಲ್ಲಿ ಕೊಡೆ ಹಿಡಿದುಕೊಂಡು ನಾಗಾರ್ಜುನ ಅವರ ಲುಕ್​​​​​ಗೆ ಫ್ಯಾನ್ಸ್​ ಫಿದಾ ಆಗಿದ್ರು. ಈಗ ಬಿಡುಗಡೆಯಾಗಿರುವ ರಶ್ಮಿಕಾ ಮಂದಣ್ಣ ಅವರ ಫಸ್ಟ್​ಲುಕ್​ ವೀಡಿಯೊ ನೋಡಿ ಫ್ಯಾನ್ಸ್​ ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ನಿರೀಕ್ಷಿಸುತ್ತಿದ್ದೇವೆ ಎನ್ನುತ್ತಿದ್ದಾರೆ.

ಕುಬೇರ ಸಿನಿಮಾಕ್ಕೆ ನಿಕೇತ್​ ಬೊಮ್ಮಿ ಛಾಯಾಗ್ರಹಣವಿದ್ದು, ದೇವಿಶ್ರೀ ಪ್ರಸಾದ್​ ಸಂಗೀತ ಸಂಯೋಜನೆ ಇದೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಬಿಡುಗಡೆ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕುಬೇರ ಮಾತ್ರವಲ್ಲದೆ ರಶ್ಮಿಕಾ ಮಂದಣ್ಣ ಕೂಡ ಪುಷ್ಪ 2, ಸಲ್ಮಾನ್​ಖಾನ್​ ಅಭಿನಯದ ಸಿಕಂದರ್​ ಸಿನಿಮಾದಲ್ಲಿ ಬಿಸಿ ಇದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net