ನಿತಿನ್‌ಗೆ ನಭಾ ನಾಯಕಿ ... ಅಂಧಾದುನ್ ರಿಮೇಕ್‌ನಲ್ಲಿ ಕನ್ನಡತಿ

Nabha Natesh - Final
Published on

ಹೈದರಾಬಾದ್​: ಪಕ್ಕದ ಟಾಲಿವುಡ್‌ನಲ್ಲಿ ಕನ್ನಡ ನಟಿಯರಿಗೆ ಬೇಡಿಕೆ ಹೆಚ್ಚಿದೆ. ಈಗಾಗಲೇ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದರೆ, ಅದೇ ರೀತಿ ನಭಾ ನಟೇಶ್ ಸಹ ಸರಣಿ ಆರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ನಿತಿನ್ ಹೊಸ ಚಿತ್ರದ ನಾಯಕಿಯಾಗಿಯೂ ನಭಾ ಆಯ್ಕೆಯಾಗಿದ್ದಾರೆ.

ಬಾಲಿವುಡ್‌ನಲ್ಲಿ ನಿರ್ಮಾಣವಾಗಿದ್ದ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ‘ಅಂಧಾದುನ್’ ಚಿತ್ರವನ್ನೇ ಟಾಲಿವುಡ್‌ನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಮೂಲ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ಮಾಡಿದ ಪಾತ್ರವನ್ನು ನಿತಿನ್ ನಿಭಾಯಿಸಲಿದ್ದು, ರಾಧಿಕಾ ಆಪ್ಟೆಯಾಗಿ ನಭಾ ಕಾಣಿಸಿಕೊಳ್ಳಲಿದ್ದಾರೆ.

ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಬಹಿರಂಗಪಡಿಸಿದ್ದು, ಇನ್ನೋರ್ವ ನಾಯಕಿಯಾಗಿ ತಮನ್ನಾ ಭಾಟಿಯಾ ಸಹ ನಟಿಸುವುದು ಅಧಿಕೃತವಾಗಿದೆ. ಮೆರ್ಲಪಕಾ ಗಾಂಧಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ತೆಲುಗಿನಲ್ಲಿ ಖ್ಯಾತಿ ಗಿಟ್ಟಿಸಿಕೊಂಡ ನಭಾ, ಸದ್ಯ ಸಾಯಿ ಧರ್ಮ ತೇಜ ಅವರ ಜತೆ ‘ಸೋಲೋ ಬ್ರತುಕೆ ಸೋ ಬೆಟರ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ‘ಅಲ್ಲುಡು ಅಧುರ್ಸ್’ ಚಿತ್ರವನ್ನೂ ಒಪ್ಪಿಕೊಂಡಿದ್ದು, ಈಗ ನಿತಿನ್ ಸಿನಿಮಾಕ್ಕೂ ನಾಯಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net