More

    ಚಿತ್ರರಂಗವನ್ನು ಈ ಎಂಟು ಭಯೋತ್ಪಾದನೆಗಳಿಂದ ರಕ್ಷಿಸಲು ಕಂಗನಾ ಕರೆ

    ಮನಾಲಿ: ತೆಲುಗು ಚಿತ್ರರಂಗವು ಭಾರತದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಹೇಳಿದ್ದ ಕಂಗನಾ ರಣಾವತ್​, ಈಗ ಅದರ ಕುರಿತಾಗಿ ಇನ್ನಷ್ಟು ಮಾತನಾಡಿದ್ದಾರೆ. ಪ್ರಮುಖವಾಗಿ ಇಂದು ಬಾಲಿವುಡ್​ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಅವರು ಪಟ್ಟಿ ಮಾಡಿದ್ದಾರೆ.

    ಇದನ್ನೂ ಓದಿ: ರವಿಕಿಶನ್​ ದಿನ ಶುರುವಾಗ್ತಿದ್ದೇ ಮಾದಕವಸ್ತುಗಳಿಂದ … ಅನುರಾಗ್​ ಸ್ಫೋಟಕ ಹೇಳಿಕೆ

    ಕಂಗನಾ ಹೇಳಿರುವ ಪ್ರಕಾರ, ಹಿಂದಿ ಚಿತ್ರರಂಗವು ಈಗ ಒಟ್ಟು ಎಂಟು ರೀತಿಯ ಭಯೋತ್ರಪಾದನೆಗಳಿಂದ ತತ್ತರಿಸುತ್ತಿದೆಯಂತೆ. ಭಯೋತ್ಪಾದನೆಯಲ್ಲೂ ಎಂಟು ರೀತಿ ಇದೆಯಾ ಎಂಬುದು ಆಶ್ಚರ್ಯವಾಗಬಹುದು. ಹೌದು ಎಂದು ಸ್ವತಃ ಟ್ವೀಟ್​ ಮಾಡಿಕೊಂಡಿದ್ದಾರೆ ಕಂಗನಾ.

    ಬಾಲಿವುಡ್​ನ ಈ ಖ್ಯಾತ ನಟಿ ನೀಡುರುವ ಎಂಟು ವಿಷಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ನೆಪೋಟಿಸಂ (ಸ್ವಜನಪಕ್ಷಪಾತ) ಭಯೋತ್ಪಾದನೆ. ನಂತರ ಡ್ರಗ್​ ಮಾಫಿಯಾ, ಲೈಂಗಿಕ ಕಿರುಕುಳ, ಧಾರ್ಮಿಕ, ಪೈರಸಿ, ಅಸಂಘಟಿತ ಕಾರ್ಮಿಕರ ಶೋಷಣೆ ಮತ್ತು ಧಾರ್ಮಿಕ ಹಾಗೂ ಪ್ರಾದೇಶಿಕ ಭಯೋತ್ಪಾದನೆ ಎಂದು ಟ್ವೀಟ್​ ಮಾಡಿದ್ದಾರೆ ಕಂಗನಾ.

    ಇದನ್ನೂ ಓದಿ: 2014, ಜುಲೈ 7ರಂದು ಸಂಜನಾ ಮಾಡಿದ್ದ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​: ಗಲ್ರಾನಿ ಗುಟ್ಟು ರಟ್ಟು!?

    ಭಾರತೀಯ ಚಿತ್ರರಂಗದ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಮಾತನಾಡಿರುವ ಕಂಗನಾ, ‘ಬೇರೆ ಭಾಷೆಗಳಿಂದ ಡಭ್​ ಆದ ಅತ್ಯುತ್ತಮ ಚಿತ್ರಗಳಿಗೆ ಸಿಗದ ಮನ್ನಣೆ, ಡಬ್ ಆದ ಹಾಲಿವುಡ್​ ಚಿತ್ರಗಳಿಗೆ ಸಿಗುತ್ತಿದೆ. ಹಾಗಾಗಿ ಆ ಹಾವಳಿಯನ್ನು ತಪ್ಪಿಸಲು ಮೊದಲು ಮುಂದಾಗಬೇಕು’ ಎಂದು ಸರ್ಕಾರ ಮುಂದಾಗಬೇಕು ಎಂದು ಕಂಗನಾ ಹೇಳಿದ್ದಾರೆ.

    Photo: ಕೊನೆಗೂ ತಯಾರಾಯ್ತು ಸುಶಾಂತ್​ ಸಿಂಗ್ ಮೇಣದ ಪ್ರತಿಮೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts