More

    Photo: ಕೊನೆಗೂ ತಯಾರಾಯ್ತು ಸುಶಾಂತ್​ ಸಿಂಗ್ ಮೇಣದ ಪ್ರತಿಮೆ!

    ಮುಂಬೈ: ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದವರ ಮೇಣದ ಪ್ರತಿಮೆಗಳು ವಿಶ್ವದ ಹಲವು ಮ್ಯೂಸಿಯಂಗಳಲ್ಲಿ ಮೇಣದ ಪ್ರತಿಮೆಗಳಾಗಿ ಪ್ರದರ್ಶನಕ್ಕಿಡಲಾಗಿದೆ. ಇತ್ತೀಚೆಗಷ್ಟೇ ಸುಶಾಂತ್​ ಸಿಂಗ್ ಅವರ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಿ ಎಂದು ಸ್ವತಃ ಅವರ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದರು. ಇದೀಗ ಆ ಬೆನ್ನಲ್ಲೇ ಮೇಣದ ಪ್ರತಿಮೆಯೊಂದು ಸುಶಾಂತ್ ಅವರ ಮೇಣದ ಪ್ರತಿಮೆಯೊಂದು ಸಿದ್ಧವಾಗಿ ನಿಂತಿದೆ.

    ಇದನ್ನೂ ಓದಿ: ದಾಖಲೆ ಬರೆಯಿತು ಕಾಲಿವುಡ್​ ನಟ ವಿಜಯ್​ ಮಾಡಿದ ಆ ಒಂದೇ ಒಂದು ಟ್ವೀಟ್​!

    ಹೌದು, ಲಂಡನ್​ನ ಮೇಡಂ ಟುಸ್ಸಾಡ್ಸ್​ನಲ್ಲಿ ಸುಶಾಂತ್​ ಅವರ ವ್ಯಾಕ್ಸ್ ಪ್ರತಿಮೆ ನಿರ್ಮಿಸಬೇಕೆಂದು ಅಭಿಮಾನಿಗಳು ಅಭಿಯಾನವನ್ನೇ ಆರಂಭಿಸಿದ್ದರು. ಅದಕ್ಕಾಗಿ ಸಹಿ ಸಂಗ್ರಹಿಸುವ ಕೆಲಸ ಶುರುವಾಗಿತ್ತು. ಒಂದು ಲಕ್ಷ 70 ಸಾವಿರ ಸಹಿಗಳನ್ನೂ ಪಡೆಯಲಾಗಿತ್ತು. ಇದೀಗ ಪಶ್ಚಿಮ ಬಂಗಾಳದಲ್ಲಿ ಸುಶಾಂತ್​ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಬಂಗಾಳದ ಅಸಾನ್​ಸೂಲ್​ನ ಸುಸಾಂತ್ ರಾಯ್​ ಎಂಬುವವರು ಈ ಪ್ರತಿಮೆ ಮಾಡಿದ್ದು, ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ವಿಶೇಷ ಏನೆಂದರೆ ಸುಶಾಂತ್​ ಅವರ ಪ್ರತಿಮೆ ಮಾಡಿರುವ ಸುಶಾಂತ್​ ರಾಯ್​, ಅವರ ಮ್ಯೂಸಿಯಂನಲ್ಲಿ ಅಮಿತಾಬ್​ ಬಚ್ಚನ್​ ಮತ್ತು ವಿರಾಟ್​ ಕೊಹ್ಲಿ ಸೇರಿ ಹಲವು ಗಣ್ಯರ ಪ್ರತಿಮೆಗಳೂ ಸಹ ಕಾಣಸಿಗುತ್ತವೆ.

    ಇತ್ತ ಮೇಡಂ ಟುಸ್ಸಾಡ್ಸ್​ನಲ್ಲಿ ಸುಶಾಂತ್​ ಪ್ರತಿಮೆ ನಿರ್ಮಾಣಕ್ಕೆ ಲಂಡನ್​ನಲ್ಲಿ ನೆಲೆಸಿರುವ ಸೋಫಿ ರೆಹಮಾನ್​ ಎಂಬುವವರು ಅಭಿಯಾನ ಆರಂಭಿಸಿದ್ದಾರೆ. ‘ಸುಶಾಂತ್​ ಎಂದಾಕ್ಷಣ ಆತನ ದುರಂತ ಅಂತ್ಯ ನೆನಪಾಗಬಾರದು. ಒಳ್ಳೊಳ್ಳೆ ಸಿನಿಮಾಗಳನ್ನೂ ಚಿತ್ರರಸಿಕರಿಗೆ ನೀಡಿದ್ದಾರವರು. ಸಾಮಾಜಿಕ ಕಳಕಳಿಯ ಮತ್ತು ಮಹಿಳಾ ಪರ ನಿಲುವು ಸುಶಾಂತ್​ ಅವರದ್ದಾಗಿತ್ತು. ಹಾಗಾಗಿ ಅವರು ಈಗಲೂ ನಮ್ಮ ಜತೆಗಿದ್ದಾರೆ. ಅವರ ಆ ನೆನಪನ್ನು ಮೇಡಂ ಟುಸ್ಸಾಡ್ಸ್​ನಲ್ಲಿ ಪ್ರತಿಮೆ ನೋಡಬೇಕೆಂದು ಸಾಕಷ್ಟು ಮಂದಿಯ ಕನಸಿದೆ’ ಎಂದಿದ್ದಾರವರು.

    ಇದನ್ನೂ ಓದಿ: ಹಾಗಾದ್ರೆ ಕಂಗನಾ ಸಹ ಸಾಫ್ಟ್​ ಪೋರ್ನ್​ ನಟಿಯಾ?ಇದು ನೆಟ್ಟಿಗರ ಪ್ರಶ್ನೆ …

    ಇನ್ನು ಬಾಲಿವುಡ್​ನ ಬಹುತೇಕ ಸ್ಟಾರ್ ಕಲಾವಿದರೆಲ್ಲ ಮೇಣದ ಪ್ರತಿಮೆ ಲಂಡನ್​​, ಸಿಂಗಾಪುರ್​ ಸೇರಿ ಹಲವೆಡೆ ಪ್ರದರ್ಶನಕ್ಕಿಡಲಾಗಿದೆ. ಅದೇ ರೀತಿ ಸುಶಾಂತ್​ ಅವರ ಪ್ರತಿಮೆಯೂ ತಲೆಯತ್ತಲಿ ಎಂಬುದು ಅಭಿಮಾನಿಗಳ ಆಸೆ. (ಏಜೆನ್ಸೀಸ್​)

    ರವಿಕಿಶನ್​ ದಿನ ಶುರುವಾಗ್ತಿದ್ದೇ ಮಾದಕವಸ್ತುಗಳಿಂದ … ಅನುರಾಗ್​ ಸ್ಫೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts