More

    ಮೇ 26ರಂದು ನಾವು ಫೈನಲ್​ ಆಡಬೇಕಷ್ಟೇ; ಐಪಿಎಲ್​ ಆರಂಭಕ್ಕೂ ಮುನ್ನ ಗೌತಮ್​ ಗಂಭೀರ್​ ಆಡಿದ ಮಾತುಗಳು ವೈರಲ್​

    ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫಯರ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಕೋಲ್ಕತ್ತ ನೈಟ್​ರೈಡರ್ಸ್​ ಗೆದ್ದು ಬೀಗಿದ್ದು, ಫೈನಲ್​ ಪ್ರವೇಶಿಸಿದೆ. ಇತ್ತ ಕೋಲ್ಕತ ಫೈನಲ್​ ಪ್ರವೇಶಿಸುತ್ತಿದ್ದಂತೆ ನಾಯಕ ಶ್ರೇಯಸ್​ ಅಯ್ಯರ್​ ಹಾಗೂ ಮೆಂಟರ್​ ಗೌತಮ್​ ಗಂಭೀರ್​ರನ್ನು ಹಾಡಿ ಹೊಗಳುತ್ತಿದ್ದು, ತಂಡವನ್ನು ಮುನ್ನಡೆಸಿದ ರೀತಿಗೆ ಹಲವರು ಪ್ರಶಂಶಿಸಿದ್ದಾರೆ.

    ಟೀಮ್​ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೌತಿ ಕಳೆದ ವರ್ಷದವರೆಗೆ ಲಖನೌ ಸೂಪರ್‌ಜೈಂಟ್ಸ್‌ (ಎಲ್​ಎಸ್​ಜಿ) ತಂಡದ ಮೆಂಟರ್​ ಆಗಿದ್ದರು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್​) ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕೆಕೆಆರ್​ನ ಹೊಸ ಮೆಂಟರ್ ಆಗಿ ಬಂದ ಬಳಿಕ ತಂಡದ ಸಂಯೋಜನೆಯನ್ನೇ ಗೌತಿ ಬದಲಾಯಿಸಿದರು. ಸುನೀಲ್ ನಾರಾಯಣ್ ಅವರನ್ನು ಆರಂಭಿಕರಾಗಿ ಕಳುಹಿಸುವುದು ಮತ್ತು ಸತತ ವೈಫಲ್ಯಗಳ ನಡುವೆಯೂ ಮಿಚೆಲ್ ಸ್ಟಾರ್ಕ್ ಅವರನ್ನು ಮುಂದುವರಿಸುವುದು ಮುಂತಾದ ಅವರ ನಿರ್ಧಾರಗಳಿಂದ ತಂಡವು ಸತತ ಗೆಲುವಿನೊಂದಿಗೆ ಫೈನಲ್​ ಪ್ರವೇಶಿಸಿದೆ.

    ಗೌತಮ್​ ಗಂಭೀರ್​ ಕೆಕೆಆರ್​ ಮೆಂಟರ್​ ಆಗಿ ಅಧಿಕಾರ ವಹಿಸಿಕೊಂಡ ನಂತರ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದು, 17ನೇ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಲ್ಲದೆ ಗೌತಮ್​ ಗಂಭೀರ್​ ನಾಯಕತ್ವದಲ್ಲಿ ಕೆಕೆಆರ್​ 2012 ಹಾಗೂ 14ರಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಇದೀಗ ಮತ್ತೊಮ್ಮೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಈ ಬಾರಿಯೂ ತಂಡ ಚಾಂಪಿಯನ್​ ಪಟ್ಟ ಅಲಂಕರಿಸುತ್ತ ಎಂದು ಕಾದು ನೋಡಬೇಕಿದೆ.

    ಇದನ್ನೂ ಓದಿ: ದೇವೇಗೌಡರ ಮೇಲೆ ಅಭಿಮಾನ ಇದ್ದರೆ 48 ಗಂಟೆಯೊಳಗೆ ಶರಣಾಗು: ಎಚ್.ಡಿ. ಕುಮಾರಸ್ವಾಮಿ

    ಇನ್ನೂ ಪಂದ್ಯ ಶುರುವಾಗುವುದಕ್ಕೂ ಮುನ್ನ ಗೌತಮ್​ ಗಂಭೀರ್​ ಆಡಿದ್ದಾರೆ ಎನ್ನಲಾದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಗಂಭೀರ್​ ಆಡಿರುವ ಈ ಮಾತುಗಳೇ ಕೆಕೆಆರ್​ ಯಶಸ್ವಿಯಾಗಿ ಫೈನಲ್​ ಪ್ರವೇಶಿಸಲು ಸ್ಫೂರ್ತಿ ನೀಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್​ ಆರಂಭಕ್ಕೂ ಮುನ್ನ ಈ ವಿಡಿಯೋ ಮಾಡಲಾಗಿದ್ದು, ಈಗ ವೈರಲ್​ ಆಗುತ್ತಿದೆ.

    ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಐಪಿಎಲ್​ನಲ್ಲಿ ನೀವು ಅತ್ಯಂತ ಯಶಸ್ವಿ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿದ್ದೀರಾ. ಟ್ರೋಫಿ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಎಲ್ಲಾ ಆಟಗಾರರನ್ನು ಸಮಾನವಾಗಿ ನೋಡಲಾಗುವುದು. ನಾವು ಇಂದಿನಿಂದ ಅಭಿಯಾನವನ್ನು ಆರಂಭಿಸುತ್ತೇವೆ. ನೀವು ದೈಹಿಕವಾಗಿ, ಮಾನಸಿಕವಾಗಿ, ಬುದ್ಧಿವಂತಿಕೆಯಿಂದ ಸಾಧ್ಯವಿರುವ ಎಲ್ಲವನ್ನೂ ನೀಡಿ. ನೀವು ಒಂದು ಯಶಸ್ವಿ ಫ್ರಾಂಚೈಸ್​ಅನ್ನು ಪ್ರತಿನಿಧಿಸುತ್ತಿದ್ದೀರಾ. ನೀವು ಮೈದಾನದಲ್ಲಿ ಆಡುವಾಗ ಆ ಮನೋಭಾವದೊಂದಿಗೆ ಕಣಕ್ಕಿಳಿಯಿರಿ. ನಾನು ಸಂಪೂರ್ಣವಾಗಿ ನಂಬುವ ಒಂದು ವಿಷಯವೆಂದರೆ ಆಟಗಾರರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ನೀಡುವುದು. ಏಕೆಂದರೆ ಇದು ಮುಖ್ಯ ವಿಚಾರವಾಗಿದ್ದು, ನನ್ನ ಜೊತೆ ಆಡಿರುವ ಬಹುತೇಕರು ಈ ವಿಚಾರವನ್ನು ತಿಳಿದಿರುತ್ತಾರೆ. ಎಂದು ಗೌತಮ್​ ಗಂಭೀರ್​ ಹೇಳಿರುವ ವಿಡಿಯೋ ಟ್ರೆಂಡ್​ ಆಗಿದೆ.

    ಕೋಲ್ಕತ ನೈಟ್​ರೈಡರ್ಸ್​ ತಂಡವು ಇದುವರೆಗೆ ನಾಲ್ಕು ಬಾರಿ ಫೈನಲ್​ ಪ್ರವೇಶಿಸಿದ್ದು, ಎರಡರಲ್ಲಿ ಗೆದ್ದು (2012, 2014) 2021ರಲ್ಲಿ ಸೋಲು ಕಂಡಿತ್ತು. 17ನೇ ಆವೃತ್ತಿಯಲ್ಲೂ ಫೈನಲ್​ ಪ್ರವೇಶಿಸಿದ್ದು, ಈ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸುತ್ತ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts