More

    ‘I wanna see you win’, ಡಿಕೋಡ್​​ ಮಾಡಿಕೊಂಡ ಫ್ಯಾನ್ಸ್​​.. RCB ಪರ ನಿಂತ್ರಾ ನಟಿ ಸಮಂತಾ?

    ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ಸಮಂತಾ, ಐಪಿಎಲ್ ಟಿ-20ಯಲ್ಲಿ ಆರ್​ಸಿಬಿ ಹಾಗೂ ಆರ್​ಆರ್​ ತಂಡ ಗೆಲುವಿಗಾಗಿ ಸೆಣಸಾಡುವ ಈ ಸಮಯದಲ್ಲಿ ಸ್ಯಾಮ್ ಹೊಸ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​​ ನೋಡಿದ ಆರ್​ಸಿಬಿ ಫ್ಯಾನ್ಸ್​​ ಫುಲ್​​ ಖುಷ್​​ ಆಗಿದ್ದಾರೆ.

    ಇಂದು ನಡೆಯಲಿರುವ ಎಲಿಮಿನೇಟರ್ ರಾಜಸ್ಥಾನ ತಂಡವನ್ನು ಆರ್​ಸಿಬಿ ಎದುರಿಸಲಿದೆ. ಈ ಪಂದ್ಯ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದೀಗ ನಟಿ ಸಮಂತಾ ಪೋಸ್ಟ್​​ ನೋಡಿದ ನೆಟ್ಟಿಗರು ಕೂಡ ಆರ್​ಸಿಬಿ ಗೆಲುವಿಗೆ ನಟಿ ಪ್ರಾರ್ಥನೆ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ‘ಸಮಂತಾ ಇನ್​ಸ್ಟಾಗ್ರಾಮ್​ ಹೊಸ ಪೋಸ್ಟ್ ಮಾಡಿದ್ದಾರೆ. ನಾನು ನಿಮ್ಮ ಗೆಲುವನ್ನು ನೋಡಲು ಕಾಯ್ತಿದ್ದೇನೆ ‘I wanna see you win’ ಎಂದು ಪೋಸ್ಟ್ ಮಾಡಿದ್ದಾರೆ. ನಿಮ್ಮ ಹೃದಯವು ಏನನ್ನು ಬಯಸಿದ್ರೂ, ನೀವು ಯಾವುದೇ ಆಕಾಂಕ್ಷೆಗಳನ್ನು ಹೊಂದಿದ್ದರೂ, ನಾನು ನಿಮಗಾಗಿ ಪ್ರಾರ್ಥಿಸುವೆ. ನೀವು ಗೆಲುವಿಗೆ ಅರ್ಹರು ಎಂದು ಸಮಂತಾ ಪೋಸ್ಟ್ ಮಾಡಿದ್ದಾರೆ. ಆದರೆ ಈ ಪೋಸ್ಟ್​​ನಲ್ಲಿ ಎಲ್ಲೂ ಕೂಡಾ ಆರ್​ಸಿಬಿ ಎಂದು ನಟಿ ಬರೆದಿಲ್ಲ. ಆದರೆ ಈ ಪೋಸ್ಟ್ ನೋಡಿದ ಫ್ಯಾನ್ಸ್ ಇದು, ಆರ್​ಸಿಬಿ ತಂಡಕ್ಕೆ ಸಮಂತಾ ಸೂಚಿಸಿರುವ ಬೆಂಬಲ ಎಂದು ಹೇಳಿದ್ದಾರೆ.

    ಸಮಂತಾ ಅವರು ಈ ಮೊದಲು ಹಲವು ಸಂದರ್ಶನಗಳಲ್ಲಿ ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ. ಅವರ ಕಂಬ್ಯಾಕ್ ​ನಿಂದ ತಮಗೆ ಸ್ಫೂರ್ತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಇದೀಗ ನಟಿ ಸಮಂತಾ ವಿರಾಟ್ ತಂಡದ ಗೆಲುವನ್ನು ನೋಡಲು ಕಾಯ್ತಿದ್ದಾರೆ ಎನ್ನಲಾಗ್ತಿದೆ. ಈ ಪೋಸ್ಟ್​ ನಲ್ಲಿ ನಟಿ ಸಮಂತಾ ಆರ್​ಸಿಬಿ ಹೆಸರನ್ನು ಪಾತ್ರ ಉಲ್ಲೇಖ ಮಾಡಿಲ್ಲ. ಆದರೆ ಫ್ಯಾನ್ಸ್​​ ಡಿಕೋಡ್​​ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts