More

    10 ವಿದ್ಯುತ್ ಕಂಬ, 15 ಕ್ಕೂ ಅಧಿಕ ಮನೆಗಳು ನೆಲಸಮ

    ಜಗಳೂರು: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಅಪಾರ ಹಾನಿಯಾಗಿದೆ.
    ರಾತ್ರಿ ಭಾರಿ, ಗುಡುಗು, ಸಿಡಿಲು ಸಹಿತ ಆರಂಭವಾದ ಮಳೆ ಮೂರು ತಾಸಿಗೂ ಹೆಚ್ಚುಕಾಲ ಸುರಿಯಿತು. ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

    ತಾಲೂಕಿನ ಮುಷ್ಟಿಗರಹಳ್ಳಿಯಲ್ಲಿ ಸಿಡಿಲು ಬಡಿದು ಒಂದು ಹಸು ಮೃತಪಟ್ಟಿದೆ. ರಸ್ತೆ ಮಾಕುಂಟೆ 2, ಕಾಟೇನಹಳ್ಳಿ 2, ರಸ್ತೆ ಮಾಕುಂಟೆ ಗೊಲ್ಲರಹಟ್ಟಿ 2, ಮುಚ್ಚನೂರು 2 ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಇದರಿಂದ ಬಹುತೇಕ ಗ್ರಾಮಗಳಲ್ಲಿ ರಾತ್ರಿಪೂರ್ತಿ ವಿದ್ಯುತ್ ನಿಲುಗಡೆ ಆಗಿತ್ತು.

    ಕೂಲಂಗಟ್ಟೆ ಗ್ರಾಮದಲ್ಲಿ 3 ಎಕರೆ ಅಡಕೆ ತೋಟಕ್ಕೆ ಹಾನಿಯಾಗಿದೆ. ಕೆಳಗೋಟೆ ಗ್ರಾಮದ ವಿಶಾಲಕ್ಷಮ್ಮ, ಶಂಭು ಮನೆ, ಬಣಕಾರ್ ಶರಣಪ್ಪ ಅವರ ದನದಕೊಟ್ಟಿಗೆ, ದೇವಿಕೆರೆ ಪ್ರೇಮಕ್ಕ, ಮಲ್ಲಾಪುರ ತಿಪ್ಪೇಸ್ವಾಮಿ, ಕಟ್ಟಿಗೆಹಳ್ಳಿ, ದೊಡ್ಡಬೊಮ್ಮನಹಳ್ಳಿಯಲ್ಲಿ ತಲಾ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಅಣಬೂರು, ಮರಿಕುಂಟೆ, ಮಾಳಮ್ಮನಹಳ್ಳಿ ಮತ್ತಿತರ ಕಡೆ 15ಕ್ಕೂ ಹೆಚ್ಚು ಮನೆಗಳು ಕುಸಿದಿವೆ.

    ದಶಕದ ನಂತರ ಕೆರೆಗೆ ನೀರು: ಗಡಿಮಾಕುಂಟೆ ಗ್ರಾಮದ ಕೆರೆಯೂ ದಶಕದ ನಂತರ ಉತ್ತಮ ಮಳೆಯಿಂದಾಗಿ 6 ಅಡಿಯಷ್ಟು ನೀರು ಸಂಗ್ರಹವಾಗಿದೆ. ವರ್ಷದ ಮುಂಗಾರು ಮುನ್ನವೇ ಕೆರೆ ನೀರು ಬಂದಿರುವುದರಿಂದ ರೈತರ ಮುಖದಲ್ಲಿ ಹರ್ಷ ತಂದಿದೆ. ಜಗಳೂರು ಕೆರೆ, ಸೊಕ್ಕೆ, ಕೆಳಗೋಟೆ, ಸಂಗೇನಹಳ್ಳಿ ಕೆರೆ, ಹುಚ್ಚವ್ವನಹಳ್ಳಿ ಕೆರೆಗಳಿಗೆ ಸ್ವಲ್ಪ ಮಟ್ಟಿಗೆ ನೀರು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts