More

    ಹಣ, ಅಧಿಕಾರಕ್ಕಿಂತ ಆರೋಗ್ಯವಾಗಿರುವುದು ಮುಖ್ಯ

    ಪಾಂಡವಪುರ: ಹಣ, ಆಸ್ತಿ, ಅಧಿಕಾರಕ್ಕಿಂತ ಮನುಷ್ಯ ಆರೋಗ್ಯವಾಗಿರುವುದು ಮುಖ್ಯ ಎಂದು ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ ಕಿವಿಮಾತು ಹೇಳಿದರು.

    ತಾಲೂಕಿನ ಹಾಗನಹಳ್ಳಿಯಲ್ಲಿ ಪ್ರಗತಿ ಸೇವಾ ಟ್ರಸ್ಟ್ ಪಾಂಡವಪುರ ಹಾಗೂ ಅಮ್ಮನ ಆಸರೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಸಾಧನ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯವಂತರಾಗಿದ್ದರೆ ಏನಾದರೂ ಸಾಧಿಸಲು ಸಾಧ್ಯ. ಪ್ರತಿಯೊಬ್ಬರೂ ಈ ಸತ್ಯ ಅರಿತು ಉತ್ತಮ ಆರೋಗ್ಯದೊಂದಿಗೆ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಂಕಲ್ಪ ಮಾಡಿಬೇಕಿದೆ ಎಂದರು.

    ಪರಿಸರ ಸಂರಕ್ಷಣೆಯಲ್ಲಿನ ವೈಫಲ್ಯದಿಂದ ಇಂದು ಸೊಳ್ಳೆ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಭೀತಿ ಎದುರಾಗಿದೆ. ಮನೆ ಮತ್ತು ಶಾಲೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಸುತ್ತಲ ಪರಿಸರ ಸ್ವಚ್ಛವಾಗಿದ್ದರೆ ಯಾವುದೇ ಕಾಯಿಲೆ ಬರುವುದಿಲ್ಲ ಎಂದು ಹೇಳಿದರು.
    ಸಮಾಜ ಸೇವಕ ನಾಗೇಶ್ ರಾಗಿಮುದ್ದನಹಳ್ಳಿ ಅವರು ಪ್ರತಿವರ್ಷ ಸಸಿ ನೆಟ್ಟು ರಕ್ಷಣೆ ಮಾಡುವುದು ಹಾಗೂ ವಿವಿಧ ಕ್ಷೇತ್ರ ಸಾಧಕರನ್ನು ಸನ್ಮಾನಿಸಿ, ಗೌರವಿಸುವ ಸಂಪ್ರದಾಯವನ್ನು ಸುಮಾರು 20 ವರ್ಷಗಳಿಂದ ರೂಢಿಸಿಕೊಂಡು ಬರುತ್ತಿದ್ದಾರೆ. ಸಮಾಜಕ್ಕೆ ಇವರ ಸೇವೆ ಅನನ್ಯವಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಎಂ.ಎಚ್.ವಿಜಯಕುಮಾರ್, ಡಾ.ಮಾರುತಿ ಮತ್ತು ಆಶ್ರಮದ ಪ್ರಭುಸ್ವಾಮಿ, ಕಾರ್ಯದರ್ಶಿ ಪುಷ್ಪಾವತಿ, ಚಿನಕುರಳಿ ವೈದ್ಯಾಧಿಕಾರಿ ಡಾ.ಸಂದೀಪ್, ಡಾ.ಬಿ.ಸಿ.ವಿಜಯಕುಮಾರ್, ಪದ್ಮಾವತಿ ಬೆಟ್ಟಯ್ಯ, ಚಿಕ್ಕಲಿಂಗಸ್ವಾಮಿ ಇತರರು ಇದ್ದರು.

    ಸಾಧನಾ ಸಾಹಿತ್ಯ ಪ್ರಶಸ್ತಿ: ಮಾಧ್ಯಮ ಕ್ಷೇತ್ರ ರಚಿತಾ ಕಾರ್ಯಪ್ಪ, ಬಿ.ಎನ್.ಪ್ರಸನ್ನಕುಮಾರ್, ಎಸ್.ಜೆ.ಕುಮಾರ್. ಅಮಿತ್, ಕೃಷ್ಣೇ ಗೌಡ ಅವರನ್ನು ಸನ್ಮಾನಿಸಿ ಸಾಧನಾ ಸಾಹಿತ್ಯ ಪ್ರಶಸ್ತಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts