More

    ಮೈಸೂರಿನಲ್ಲಿ ಇನ್ನೊಂದು ತಿಂಗಳಲ್ಲಿ ಕರೊನಾ ನಿಯಂತ್ರಣಕ್ಕೆ ತರುತ್ತೇವೆ: ರೋಹಿಣಿ ಸಿಂಧೂರಿ

    ಮೈಸೂರು: ಮೈಸೂರಿನಲ್ಲಿ ಇನ್ನೊಂದು ತಿಂಗಳಲ್ಲಿ ಕರೊನಾ ನಿಯಂತ್ರಣಕ್ಕೆ ತರುತ್ತೇವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಜನರಿಗೆ ಭರವಸೆ ನೀಡಿದ್ದಾರೆ.

    ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಸೂರು ಜಿಲ್ಲೆಯನ್ನು ಸಂಪೂರ್ಣವಾಗಿ ಕರೊನಾ ಮುಕ್ತ ಮಾಡುವ ಪಣ ತೊಟ್ಟಿದ್ದೇವೆ. ಹೀಗಾಗಿ ಕರೊನಾವನ್ನು ನಿಯಂತ್ರಣಕ್ಕೆ ತರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.

    ಜಿಲ್ಲೆಯಲ್ಲಿ ಪಾಸಿಟಿವ್ ಹೆಚ್ಚಿರುವುದಕ್ಕೆ ಆತಂಕ ಪಡಬೇಡಿ. ನಮ್ಮಲ್ಲಿ ಟೆಸ್ಟಿಂಗ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದೇವೆ‌. ಎಲ್ಲಾ ಅಂಕಿ ಅಂಶಗಳನ್ನು ವಾರ್ ರೂಂ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ಬೆಂಗಳೂರಿನ ನಂತರ ಮೈಸೂರಿನಲ್ಲೇ ಹೆಚ್ಚಿನ ಅಂಕಿ ಅಂಶಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಜುಲೈ 1ರ ವೈದ್ಯರ ದಿನದಂದು ವೈದ್ಯರ ಸೇವೆ ಸ್ಮರಿಸಿ ಕರೊನಾ ಮುಕ್ತ ಮೈಸೂರಿನ ಘೋಷಣೆಯನ್ನು ಅವರಿಗೆ ಅರ್ಪಿಸೋಣ. ಇದು ನಮ್ಮ ಸಂಕಲ್ಪ. ನಾಳೆಯ ಲಾಕ್‌ಡೌನ್ ಬಗ್ಗೆ ಯಾವುದೇ ಗೊಂದಲ ಬೇಡ. ಜನ ತೀರಾ ಅಗತ್ಯವಿದ್ದರೆ ಮಾತ್ರ ಹೊರ ಬನ್ನಿ. ಆದಷ್ಟು ಜನತಾ ಕರ್ಫ್ಯೂ ನಿಯಮವನ್ನು ಅಳವಡಿಸಿಕೊಳ್ಳಿ ಎಂದು ರೋಹಿಣಿ ಸಿಂಧೂರಿ ಅವರು ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್​)

    18 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಮದ್ವೆ! ಹೀಗಿದೆ ನೋಡಿ ಪಾಕ್ ಮುಖಂಡ ಕೊಟ್ಟ ಅಚ್ಚರಿಯ ಕಾರಣ

    ಕಳೆದ 44 ದಿನಗಳಲ್ಲೇ ಅತಿ ಕಡಿಮೆ ಕರೊನಾ ಪ್ರಕರಣ: ಸತತ 15 ನೇ ದಿನ ಚೇತರಿಕೆ ಪ್ರಮಾಣ ಏರಿಕೆ

    ಹೆದ್ದಾರಿಯಲ್ಲಿ ತರಬೇತಿ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts