ಕಳೆದ 44 ದಿನಗಳಲ್ಲೇ ಅತಿ ಕಡಿಮೆ ಕರೊನಾ ಪ್ರಕರಣ: ಸತತ 15 ನೇ ದಿನ ಚೇತರಿಕೆ ಪ್ರಮಾಣ ಏರಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಒಟ್ಟು 1.86 ಲಕ್ಷ ಕೋವಿಡ್​ ಪ್ರಕರಣಗಳು ದಾಖಲಾಗುವ ಮೂಲಕ ಭಾರತದಲ್ಲಿ ಮಹಾಮಾರಿ ಕರೊನಾ ವೈರಸ್​ ಪ್ರಕರಣಗಳ ಸಂಖ್ಯೆ 2.75 ಕೋಟಿಗೆ ಏರಿಕೆ ಆಗಿದೆ. ಕಳೆದ 44 ದಿನಗಳಲ್ಲಿ ದಾಖಲಾದ ಅತಿ ಕಡಿಮೆ ಕರೊನಾ ಪ್ರಕರಣಗಳು ಇದಾಗಿದೆ. ಸರ್ಕಾರಿ ದತ್ತಾಂಶ ಪ್ರಕಾರ ಕಳೆದ 24 ಗಂಟೆಗಳಲ್ಲಿ 3,660 ಕರೊನಾ ರೋಗಿಗಳು ಮೃತಪಟ್ಟಿದ್ದಾರೆ. 11 ದಿನಗಳ ಬಳಿಕ 4000ಕ್ಕೂ ಕಡಿಮೆ ಸಾವಿನ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಈವರೆಗೂ ಒಟ್ಟು 3,18,895 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. … Continue reading ಕಳೆದ 44 ದಿನಗಳಲ್ಲೇ ಅತಿ ಕಡಿಮೆ ಕರೊನಾ ಪ್ರಕರಣ: ಸತತ 15 ನೇ ದಿನ ಚೇತರಿಕೆ ಪ್ರಮಾಣ ಏರಿಕೆ