More

    ರೇವ್ ಪಾರ್ಟಿ..ಮುಂದುವರಿದ ಹೇಮಾ ನಾಟಕ..!

    ಬೆಂಗಳೂರು: ತೆಲುಗು ನಟಿ ಹೇಮಾ ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರೂ ವಿಚಾರಣೆಗೆ ಹಾಜರಾಗುವ ವಿಚಾರದಲ್ಲಿ ಮತ್ತೆ ಆಕೆ ನಾಟಕ ಶುರು ಮಾಡಿದ್ದಾಳೆ.

    ಇದನ್ನೂ ಓದಿ:ಸಮುದ್ರದಲ್ಲಿ ಪತ್ತೆಯಾದ ಮತ್ಸ್ಯಕನ್ಯೆ! ಈ ನಿಗೂಢದ ಬಗ್ಗೆ ತಜ್ಞರು ಹೇಳೋದೇನು?

    ಬೆಂಗಳೂರು ಸಿಸಿಬಿ ಪೊಲೀಸರು ಆಕೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಆಕೆ ವೈರಲ್ ಜ್ವರದಿಂದ ಬಳಲುತ್ತಿರುವುದಾಗಿ ಹೇಳಿದ್ದಾಳೆ. ಹೀಗಾಇಯೇ ತಕ್ಷಣ ವಿಚಾರಣೆಗೆ ಹಾಜರಾಗುವಂತೆ ಹೇಮಾಗೆ ಮತ್ತೊಂದು ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    ಹೇಮಾ ಅಂತಿಂತಹ ಆಸಾಮಿಯಲ್ಲ. ಈಕೆ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಈ ಸುದ್ದಿಯನ್ನು ಅಲ್ಲಗಳೆದ ಆಕೆ ಕೂಡಲೇ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ತಾನು ಯಾವುದೇ ರೇವ್ ಪಾರ್ಟಿಗೆ ಹೋಗಿಲ್ಲ.. ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿದ್ದೇನೆ.. ಎಂದು ಸ್ಪಷ್ಟಪಡಿಸಿದ್ದಳು.

    ಆದರೆ ಪೊಲೀಸರು ರೇವ್ ಪಾರ್ಟಿಯಲ್ಲಿ ಆಕೆ ಭಾಗವಹಿಸಿದ್ದ ಫೋಟೋವನ್ನು ಬಿಡುಗಡೆ ಮಾಡಿದ್ದರು. ಹೀಗಾಗಿ ಆಕೆಯ ಕಾಮೆಂಟ್‌ಗಳು ಸುಳ್ಳು ಎಂದು ದೃಢಪಟ್ಟಿದ್ದವು.

    ಇನ್ನು ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಹೇಮಾ, ಕೃಷ್ಣವೇಣಿ ಎಂಬ ಹೆಸರಿನಲ್ಲಿ ಭಾಗವಹಿಸಿದ್ದು ಗೊತ್ತಾಗಿದೆ. ಹೇಮಾ ನಿಜವಾದ ಹೆಸರು ಕೃಷ್ಣವೇಣಿ.

    ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ: ಈ ಬಗ್ಗೆ ನಟ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts