

ನವದೆಹಲಿ: ಹಿಂದೂಗಳ ಧರ್ಮಗ್ರಂಥ, ಕಥೆ, ಪುರಾಣಗಳು ಕೇವಲ ಕಾಲ್ಪನಿಕ ಎಂದು ವಾದಿಸುವವರಿಗೇನೂ ಕಡಿಮೆಯಿಲ್ಲ. ಆದರೆ ಇವುಗಳಲ್ಲಿನ ಘಟನೆಗಳು ನಿಜವಾಗಿ ನಡೆದಿವೆ ಎನ್ನುವುದಕ್ಕೆ ಹತ್ತು ಹಲವು ನಿದರ್ಶನಗಳು ಸಾಕ್ಷೀಕರಿಸುತ್ತಿವೆ. ಇದೇ ನಿಟ್ಟಿನಲ್ಲಿ ಇತ್ತೀಚೆಗೆ ಗುಜರಾತ್‌ನ ಲಿಗ್ನೈಟ್ ಗಣಿಯಲ್ಲಿ ಬೃಹತ್ ಇತಿಹಾಸಪೂರ್ವ ಹಾವಿನ ಪಳೆಯುಳಿಕೆಗಳು ಪತ್ತೆಯಾಗಿವೆ.
47 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿರುವ ಸಾಧ್ಯತೆಯಿರುವ ವಾಸುಕಿ ಇಂಡಿಕಸ್ ಎಂಬ ಬೃಹತ್ ಸರೀಸೃಪದ ಅವಶೇಷಗಳು ಇತ್ತೀಚೆಗೆ ಗುಜರಾತ್ನಲ್ಲಿ ಪತ್ತೆಯಾಗಿದ್ದು, ಇದೀಗ ನಿಗೂಢವಾದ "ಮತ್ಸ್ಯಕನ್ಯೆಯಂತಹ" ಜೀವಿಯ ಮೃತದೇಹ ಪಪುವಾ ನ್ಯೂಗಿನಿಯಾ ತೀರದ ಸಿಂಬೇರಿ ದ್ವೀಪದಲ್ಲಿ ಕಂಡುಬಂದಿದ್ದು, ವ್ಯಾಪಕ ಕುತೂಹಲ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.
ಆದಾಗ್ಯೂ, ತಜ್ಞರು ಈ ನಿಗೂಢ ಜೀವಿಯನ್ನು ಖಚಿತವಾಗಿ ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಅಭಿಪ್ರಾಯಗಳಿಗಾಗಿ ಸಾರ್ವಜನಿಕರ ಕಡೆಗೆ ತಿರುಗಿದ್ದಾರೆ, ಇದು ಡಾಲ್ಫಿನ್ ಅಥವಾ ಸಮುದ್ರ ಹಸುವಿನಂತಹ ಸಮುದ್ರ ಪ್ರಾಣಿಯಾಗಿರಬಹುದು ಎಂದು ಊಹಿಸಲಾಗುತ್ತಿದೆ.
ಪ್ರಪಂಚದ ಅನೇಕ ವಿಷಯಗಳು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅವುಗಳಲ್ಲಿ ಮತ್ಸ್ಯಕನ್ಯೆಯೂ ಒಂದು. ಈ ನಿಗೂಢ ಸಮುದ್ರ ಜೀವಿಯ ಫೋಟೋಗಳನ್ನು ನ್ಯೂ ಐರ್ಲೆಂಡ್ ಓನ್ಲಿ ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಕಂಡ ಅನೇಕರಿಗೆ ಇದು ಯಾವ ವಿಚಿತ್ರ ಜೀವಿ ಎಂಬ ಗೊಂದಲ ಉಂಟಾಗಿದೆ. ಹಲವರು ಇದು ನಿಜವಾದ ಮತ್ಸ್ಯ ಕನ್ಯೆ ಎಂದು ಹೇಳಿದ್ದಾರೆ.
ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಯದ ಸಮುದ್ರ ಸಸ್ತನಿ ತಜ್ಞ ಸಾಸ್ಚಾ ಹೂಕರ್ ಹೇಳುವಂತೆ, ಈ ವಿಚಿತ್ರ ಜೀವಿ ಯಾವುದೇ ಮತ್ಸ್ಯಕನ್ಯೆಯಲ್ಲ. ಇದು ಗ್ಲೋಬ್ಸ್ಟರ್ ಎಂದು ಹೇಳಿದ್ದಾರೆ. ಗ್ಲೋಬ್ಸ್ಟರ್ ಎಂದರೆ ತಿಮಿಂಗಿಲ, ಶಾರ್ಕ್ ಇತ್ಯಾದಿ ದೈತ್ಯ ಸಮುದ್ರ ಜೀವಿಗಳ ಅವಶೇಷವಾಗಿದೆ. ಸಮುದ್ರದಲ್ಲಿ ಇಂತಹ ಜೀವಿಗಳು ಸತ್ತ ನಂತರ ಅದರ ದೇಹದ ಭಾಗವು ಕೊಳೆತು ಹೋಗಿ ಈ ರೀತಿಯ ವಿಲಕ್ಷಣ ಆಕಾರವನ್ನು ಪಡೆದುಕೊಳ್ಳುತ್ತದೆ ಎಂದು ಅವರು ವಿವರಿಸಿದ್ದಾರೆ.
ದುರದೃಷ್ಟವಶಾತ್, ಸ್ಥಳೀಯರು ಹೆದರಿ, ಮೃತದೇಹವನ್ನು ಸಮಾಧಿ ಮಾಡಿದ್ದಾರೆ. ಈ ಪ್ರಾಣಿಯ ಅವಶೇಷಗಳನ್ನು ಪಪುವಾ ನ್ಯೂಗಿನಿಯಾದ ಬಿಸ್ಮಾರ್ಕ್ ಸಮುದ್ರದ ದೂರದ ಸಿಂಬೆರಿ ದ್ವೀಪದಲ್ಲಿ ಪತ್ತೆಹಚ್ಚಲಾಗಿದೆ.