More

    VIDEO | ರಸ್ತೆಯ ಡಿವೈಡರ್ ಮೇಲೆ ಬೈಕ್ ಚಲಾಯಿಸಿದ! ಕೈಯಲ್ಲಿ ಬೈಕ್ ಇದ್ದರೆ ಸಾಕು ಹೀಗೆ ಮಾಡ್ತಿರಲ್ಲ..ಎಂದು ನೆಟ್ಟಿಗರಿಂದ ಆಕ್ರೋಶ

    ತಮಿಳುನಾಡು: ಸಾಮಾನ್ಯವಾಗಿ ವಾಹನಗಳು ರಸ್ತೆಯಲ್ಲಿ ಹೋಗುತ್ತವೆ. ಆದರೆ, ಎಲ್ಲಿಯಾದರೂ ರಸ್ತೆ ವಿಭಜಕದಲ್ಲಿ ವಾಹನ ಚಲಾಯಿಸುವುದನ್ನು ನೋಡಿದ್ದೀರಾ..? ಆದರೆ, ಇದೀಗ ವ್ಯಕ್ತಿಯೊಬ್ಬರು ಇಂತಹ ಸ್ಟಂಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತ ಯುವಕನೊಬ್ಬ ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲೆ ಅಪಾಯಕಾರಿಯಾಗಿ ಬೈಕ್ ಚಲಾಯಿಸುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟಿಜನ್‌ಗಳು ಕೋಪಗೊಂಡಿದ್ದಾರೆ. ತಮಿಳುನಾಡಿನ ತಿರುಚ್ಚಿಯಲ್ಲಿ ಈ ಘಟನೆ ನಡೆದಿದೆ.

    ಇದೇ ತಿಂಗಳ 23 ರಂದು ಪೆರುಂಬಿಡುಗು ಮುತ್ತುರಾಯರ್ ಜನ್ಮದಿನದ ಸಂದರ್ಭದಲ್ಲಿ ಆ ಸಮುದಾಯದ ಅನೇಕ ಯುವಕರು ತಿರುಚ್ಚಿಯಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು. ಈ ಸಂದರ್ಭ ಯುವಕನೊಬ್ಬ ಬೈಕ್ ನಲ್ಲಿ ನಿಯಮ ಉಲ್ಲಂಘಿಸಿ ಸ್ಟಂಟ್ ಮಾಡಿದ್ದಾನೆ.

    ಕೊಲ್ಲಿದಂ ನದಿಯ ಸೇತುವೆಯ ಮೇಲೆ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಮೇಲೆ ತನ್ನ ಬೈಕನ್ನು ಅಪಾಯಕಾರಿಯಾಗಿ ಚಲಾಯಿಸುತ್ತಿದ್ದನು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆ ಪೊಲೀಸರ ಗಮನಕ್ಕೆ ಬಂದಿದೆ.

    ಯುವಕನ ಬೈಕ್ ಸ್ಟಂಟ್ ಅನ್ನು ಆ ಮೂಲಕ ಹೋಗುತ್ತಿದ್ದ ಸ್ಥಳೀಯರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈಗ ಆ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟ್ಟಿಗರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಕೈಯಲ್ಲಿ ಬೈಕ್ ಇದ್ದರೆ ಸಾಕು ಕೆಲವರು ಭಯಾನಕ ಸಾಹಸಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಜೀವವನ್ನು ಅಪಾಯಕ್ಕೆ ತಳ್ಳುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts