ಕಳೆದ 44 ದಿನಗಳಲ್ಲೇ ಅತಿ ಕಡಿಮೆ ಕರೊನಾ ಪ್ರಕರಣ: ಸತತ 15 ನೇ ದಿನ ಚೇತರಿಕೆ ಪ್ರಮಾಣ ಏರಿಕೆ

Coronavirus 27 Feb 20
Published on

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಒಟ್ಟು 1.86 ಲಕ್ಷ ಕೋವಿಡ್​ ಪ್ರಕರಣಗಳು ದಾಖಲಾಗುವ ಮೂಲಕ ಭಾರತದಲ್ಲಿ ಮಹಾಮಾರಿ ಕರೊನಾ ವೈರಸ್​ ಪ್ರಕರಣಗಳ ಸಂಖ್ಯೆ 2.75 ಕೋಟಿಗೆ ಏರಿಕೆ ಆಗಿದೆ.

ಕಳೆದ 44 ದಿನಗಳಲ್ಲಿ ದಾಖಲಾದ ಅತಿ ಕಡಿಮೆ ಕರೊನಾ ಪ್ರಕರಣಗಳು ಇದಾಗಿದೆ. ಸರ್ಕಾರಿ ದತ್ತಾಂಶ ಪ್ರಕಾರ ಕಳೆದ 24 ಗಂಟೆಗಳಲ್ಲಿ 3,660 ಕರೊನಾ ರೋಗಿಗಳು ಮೃತಪಟ್ಟಿದ್ದಾರೆ. 11 ದಿನಗಳ ಬಳಿಕ 4000ಕ್ಕೂ ಕಡಿಮೆ ಸಾವಿನ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಈವರೆಗೂ ಒಟ್ಟು 3,18,895 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಸತತ 15 ನೇ ದಿನ ದೈನಂದಿನ ಚೇತರಿಕೆ ಪ್ರಮಾಣವೂ ದಿನನಿತ್ಯದ ಕರೊನಾ ಪ್ರಕರಣಗಳಿಗಿಂತಲೂ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2.59 ಲಕ್ಷಕ್ಕೂ ಅಧಿಕ ಮಂದಿ ಕರೊನಾದಿಂದ ಗುಣಮುಖರಾಗಿದ್ದಾರೆ.

ಎಂದಿನಂತೆ ಮಹಾರಾಷ್ಟ್ರವೇ ಮುಂದಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 21,273 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮಧ್ಯೆ ಕರೊನಾ ವೈರಸ್​ ಸಂಪೂರ್ಣ ನಿಯಂತ್ರಿಸಲು ಜೂನ್​ 1ರ ಬಳಿಕವೂ ಲಾಕ್​ಡೌನ್​ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ತಿಳಿಸಿದ್ದಾರೆ. ಮಹಾರಾಷ್ಟ್ರ ಹೊರತುಪಡಿಸಿದರೆ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ 24,214 ಹೊಸ ಪ್ರಕರಣಗಳು ವರದಿಯಾಗಿದೆ. ರಾಜಧಾನಿ ಬೆಂಗಳೂರು ಒಂದರಲ್ಲೇ 5,949 ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ. 17.59ರಷ್ಟು ಕುಸಿದಿದೆ.

ಕರೊನಾದಿಂದ ಗುಣವಾಗುತ್ತಿರುವ ರೋಗಿಗಳಲ್ಲಿ ಕಪ್ಪು ಶಿಲೀಂದ್ರ ಬೆಳವಣಿಗೆ ಆರೋಗ್ಯ ವಲಯಕ್ಕೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ. ದೆಹಲಿ ಒಂದರಲ್ಲೇ ಹೊಸದಾಗಿ 153 ಬ್ಲ್ಯಾಕ್​ ಫಂಗಸ್​ ಕೇಸ್​ಗಳು ವರದಿಯಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net