More

    ಇದಪ್ಪಾ ಅದೃಷ್ಟ ಅಂದ್ರೆ! ಲಾಕ್​ಡೌನ್​ ಮಧ್ಯೆಯೂ ಒಂದೇ ದಿನದಲ್ಲಿ ಲಕ್ಷಾಧಿಪತಿಯಾದ ರೈತ

    ವಿಜಯವಾಡ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ರೈತರೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

    ಹೌದು. ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಜೊನ್ನಾಗಿರಿ ವಲಯದಲ್ಲಿರುವ ಗ್ರಾಮವೊಂದರ ರೈತರೊಬ್ಬರು ಎಂಥಾ ಅದೃಷ್ಟವಂತರೆಂದರೆ ಒಂದೇ ದಿನದಲ್ಲಿ ಲಕ್ಷಾಧಿಪತಿ ಆಗಿದ್ದು, ಇಡೀ ಗ್ರಾಮಸ್ಥರ ಕಣ್ಣರಳಿಸಿದ್ದಾರೆ.

    ವಿವರಣೆಗೆ ಬರುವುದಾದರೆ, ರೈತ ಜಮೀನಿನಲ್ಲಿ ಕೆಲಸ ಮಾಡುವಾಗ ಸಣ್ಣದಾದ ಹೊಳೆಯುವ ವಸ್ತುವೊಂದನ್ನು ನೋಡುತ್ತಾರೆ. ತುಂಬಾ ಆಕರ್ಷಕವಾಗಿದ್ದರಿಂದ ಡೈಮಂಡ್​ ಅಂದುಕೊಂಡು ಮನೆಗೆ ತರುತ್ತಾರೆ. ಅದನ್ನು ಸ್ಥಳೀಯ ಡೈಮಂಡ್​ ಡೀಲರ್​ ಬಳಿ ತೋರಿಸುತ್ತಾರೆ. ಅದು ಕೇವಲ ಹರಳಲ್ಲ, ನಿಜವಾಗಿಯೂ ಅದು ಅತ್ಯಮೂಲ್ಯವಾದ ಡೈಮಂಡ್​ ಎಂದು ಹೇಳಿದಾಗ ರೈತನಿಗೆ ಶಾಕ್​ ಆಗುತ್ತದೆ.

    ಡೈಮಂಡ್​ ಅನ್ನು ರಹಸ್ಯವಾಗಿಯೇ ಹರಾಜು ಹಾಕಲಾಗುತ್ತದೆ. ಡೈಮಂಡ್​ ವ್ಯಾಪಾರಿಯೊಬ್ಬ ಸುಮಾರು 25 ಲಕ್ಷ ರೂಪಾಯಿ ಕೊಟ್ಟು ಅದನ್ನು ಪಡೆದುಕೊಂಡಿದ್ದಾನೆಂದು ತಿಳಿದುಬಂದಿದೆ. 30 ಕ್ಯಾರಟ್​ ತೂಕದ ಡೈಮಂಡ್​ನ ಮಾರುಕಟ್ಟೆಯ ಬೆಲೆ 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

    ರೈತನ ಜಮೀನಿನಲ್ಲಿ ಬೆಲೆಬಾಳುವ ಡೈಮಂಡ್​ ಪತ್ತೆಯಾಗಿದೆ ಎಂಬ ನ್ಯೂಸ್​ ಇದೀಗ ಜೊನ್ನಗಿರಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಡಿಮೆ ಬೆಲೆಗೆ ಡೈಮಂಡ್​ ಖರೀದಿಸಿದ ವ್ಯಾಪಾರಿಯು ಸಹ ಅದೃಷ್ಟವಂತನಾಗಿದ್ದು, ಗಾತ್ರದಲ್ಲಿ ಡೈಮಂಡ್​ ಚಿಕ್ಕದಾಗಿದ್ದರೂ ಅದರ ಮೌಲ್ಯ ಮಾತ್ರ ಶಾಕ್​ ಆಗುವಂತಿದೆ.

    ಇದೆಲ್ಲವು ಅನಧಿಕೃತವಾಗಿಯೇ ನಡೆದಿದೆ. ಪ್ರತಿವರ್ಷ ನೂರಾರು ಡೈಮಂಡ್​ಗಳು ಸ್ಥಳೀಯ ಭೂಮಿಗಳಲ್ಲಿ ಪತ್ತೆಯಾಗುತ್ತವೆ. ಅವುಗಳನ್ನು ಡೈಮಂಡ್​ ವ್ಯಾಪಾರಿಗಳು ರಹಸ್ಯವಾಗಿಯೇ ಖರೀದಿಸಿ ಹಣ ಗಳಿಸುತ್ತಿದ್ದಾರೆ. ಆದರೆ, ಇದರಿಂದ ಸಾರ್ವಜನಿಕ ಅಥವಾ ಸರ್ಕಾರ ಖಜಾನೆಗೆ ಸಮಸ್ಯೆಯಾಗುತ್ತಿದೆ. (ಏಜೆನ್ಸೀಸ್​)

    ವೈರಲ್​ ಆಯ್ತು ಸುಶೀಲ್​ ಕುಮಾರ್​ ದಾಳಿಯ ವಿಡಿಯೋ: ಕುಸ್ತಿಪಟು ಮೇಲಿನ ಹಲ್ಲೆ ಹಿಂದಿನ ಉದ್ದೇಶ ಬಯಲು​

    ಕೋವಿಡ್ ಗೆದ್ದರೂ ಎದುರಾಗುತ್ತಿದೆ ಆಘಾತ! ಚಿಕಿತ್ಸೆ ಬಳಿಕ ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಳ

    VIDEO| ನಾಗಾಲ್ಯಾಂಡ್​-ಅಸ್ಸಾಂ ಗಡಿಯಲ್ಲಿ ಕಾಂಗ್ರೆಸ್​ ಶಾಸಕನ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts