More

    ಹೆದ್ದಾರಿಯಲ್ಲಿ ತರಬೇತಿ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ !

    ಮಥುರಾ : ಎರಡು ಆಸನಗಳ ಚಿಕ್ಕ ತರಬೇತಿ ವಿಮಾನವೊಂದು ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ನಡುವೆ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿರುವ ಘಟನೆ ನಿನ್ನೆ ಉತ್ತರಪ್ರದೇಶದಲ್ಲಿ ನಡೆದಿದೆ. ಟ್ರೈನೀ ಪೈಲಟ್ ಮತ್ತು ಇನ್​ಸ್ಟ್ರಕ್ಟರ್​ ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

    ಅಲಿಗಡಕ್ಕೆ ಹೋಗುತ್ತಿದ್ದ ಸೆಸ್ನಾ-152 ಟ್ರೈನಿಂಗ್​ ಏರ್​ಕ್ರ್ಯಾಫ್ಟ್​ ತಾಂತ್ರಿಕ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಮಥುರಾ ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇ ಮೇಲೆ ಸುರಕ್ಷಿತವಾಗಿ ನೆಲಕ್ಕಿಳಿದಿದೆ. ಅಲಿಗಡದ ಖಾಸಗಿ ಫ್ಲೈಯಿಂಗ್ ಅಕಾಡೆಮಿಯೊಂದಕ್ಕೆ ಸೇರಿದ ಈ ಚಿಕ್ಕ ವಿಮಾನವು ಹರಿಯಾಣದ ನಾರ್​ನೌಲ್​ಗೆ ಹೋಗಿ ಹಿಂತಿರುಗುತ್ತಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಹಾವನ್ನು ಕೊಂದು ತಿಂದ ವಿಡಿಯೋ ವೈರಲ್​: ಬಂಧಿತ ಆರೋಪಿ ಕೊಟ್ಟ ಹೇಳಿಕೆಗೆ ಪೊಲೀಸರೇ ಶಾಕ್!​

    “ಟು ಸೀಟರ್​ ಏರ್​ಕ್ರ್ಯಾಫ್ಟ್​ನ ಇಬ್ಬರು ಪೈಲೆಟ್​ಗಳು ಯಮುನಾ ಎಕ್ಸ್​​ಪ್ರೆಸ್​ವೇನ 72ನೇ ಮೈಲಿಗಲ್ಲಿನ ಬಳಿ ಮಧ್ಯಾಹ್ನ 1.15 ರ ವೇಳೆಗೆ ತುರ್ತು ಲ್ಯಾಂಡಿಂಗ್​ ಮಾಡಿದರು. ಮಥುರಾದ ನೌಝಿಲ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ” ಎಂದು ಮಥುರಾ ಗ್ರಾಮಾಂತರ ಎಸ್ಪಿ ಶ್ರೀಶ್ ಚಂದ್ರ ಹೇಳಿದ್ದಾರೆ.

    ಹೀಗೆ ಅಚಾನಕ್ಕಾಗಿ ಬಂದಿಳಿದ ವಿಮಾನವನ್ನು ನೋಡಲು ಜನರು ಜಮಾಯಿಸಿದರು. ಅವರನ್ನು ಚದುರಿಸಲು ಪೊಲೀಸ್​ ಸಿಬ್ಬಂದಿಯನ್ನು ಬಳಸಲಾಯಿತು. ಈ ಘಟನೆಯಿಂದ ಹೆದ್ದಾರಿಯ ಒಂದು ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಟ್ರಾಫಿಕ್​ ಸಮಸ್ಯೆ ಕೂಡ ಉಂಟಾಯಿತು. ಬಹುಕಾಲ ಹೆದ್ದಾರಿಯಲ್ಲೇ ನಿಲುಗಡೆಯಾಗಿದ್ದ ಈ ವಿಮಾನದ ದೋಷವನ್ನು ನಿವಾರಿಸಲು ನಂತರದಲ್ಲಿ ಫ್ಲೈಯಿಂಗ್​ ಅಕಾಡೆಮಿಯ ತಾಂತ್ರಿಕ ನಿರ್ವಹಣಾ ತಂಡ ಸ್ಥಳಕ್ಕೆ ಆಗಮಿಸಿತು ಎನ್ನಲಾಗಿದೆ.

    ಇದನ್ನೂ ಓದಿ: ಹುಟ್ಟಿದ ಹಸುಗೂಸಿನ ಗಾತ್ರ ನೋಡಿ ದಿಗಿಲುಗೊಂಡ ವೈದ್ಯರು- ತಲೆತಿರುಗಿಬಿದ್ದ ಅಮ್ಮ!

    ಈ ಮುನ್ನವೂ ವಿಮಾನ ನಿಲ್ದಾಣಗಳನ್ನು ಬಳಸಲಾಗದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಮಿಲಿಟರಿ ಜೆಟ್​ಗಳು ಯಮುನಾ ಎಕ್ಸ್​ಪ್ರೆಸ್​ವೇ ಮೇಲೆ ಲ್ಯಾಂಡ್​ ಆಗಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಕೋವಿಡ್​ ಹೆಚ್ಚಿರುವ ಜಿಲ್ಲೆಗಳಿಗೆ ಸಿಎಂ ಭೇಟಿ; ಇಂದು ತುಮಕೂರಿಗೆ ಬಿಎಸ್​​ವೈ

    ಒಂದು ಡೋಸ್​ ಕೋವಿಶೀಲ್ಡ್​, ಇನ್ನೊಂದು ಡೋಸ್​ ಕೋವಾಕ್ಸಿನ್ ! ಸರ್ಕಾರ ಹೇಳಿದ್ದೇನು ?

    ‘ಫ್ರೆಂಡ್ಸ್​’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್​ನಲ್ಲಿ ತಾರೆಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts