ಅದೊಂದೆ ನನ್ನ ತಂಗಿಯ ನೋವಿಗೆ ಪರಿಹಾರ: ಆಕೆಯ ಜತೆ ಮಲಗು ಎಂದು ಯುವಕನ ಬೆನ್ನುಬಿದ್ದ ಗೆಳತಿ!​

Twin Sister
Published on

ನ್ಯೂಯಾರ್ಕ್​: ಸಂಬಂಧ ಅಂತ ಬಂದಾಗ ಕೆಲವೊಂದು ಲಕ್ಷ್ಮಣ ರೇಖೆಗಳು ಇರುತ್ತವೆ. ಅವುಗಳನ್ನು ಎಂದಿಗೂ ದಾಟಬಾರದು. ಇನ್ನೊಬ್ಬರ ಜೀವನದಲ್ಲಿ ಪೋಲಿ ಆಟ ಆಡುವುದು ಮತ್ತು ಸಂಗಾತಿಯ ಫ್ರೆಂಡ್ಸ್​ ಮತ್ತು ಸಂಬಂಧಿಕರ ಜತೆ ಸಲುಗೆ ಬೆಳೆಸಬಾರದು.

ಆದರೆ, ನಿಮ್ಮ ಆಪ್ತರು ಈ ಮೇಲಿನಂತೆ ಮಾಡಲು ಪ್ರೋತ್ಸಾಹಿಸಿದಾಗ ಮಾನಸಿಕವಾಗಿ ಎಷ್ಟೊಂದು ಗೊಂದಲಕ್ಕೆ ಒಳಗಾಗುತ್ತೇವೆ ಎಂಬುದಕ್ಕೆ ವ್ಯಕ್ತಿಯೊಬ್ಬ ಅಮೆರಿಕ ಜಾಲತಾಣ ರೆಡ್ಡಿಟ್​ನ ಸಂಬಂಧ ಸಲಹಾ ವೇದಿಕೆಯಲ್ಲಿ ಹಂಚಿಕೊಂಡ ಒಂದು ಘಟನೆ ಉದಾಹರಣೆ ಆಗಿದೆ.

ಹೆಸರು ಹೇಳಲು ಇಚ್ಛಿಸದ 23 ವರ್ಷದ ವ್ಯಕ್ತಿ ರೆಡ್ಡಿಟ್​ ಜಾಲತಾಣದ ಬಳಕೆದಾರರ ಬಳಿ ಸಲಹೆಯೊಂದನ್ನು ಕೇಳಿದ್ದಾರೆ. ತನ್ನ ಅವಳಿ ಸಹೋದರಿಯೊಂದಿಗೆ ಮಲಗುವಂತೆ ನನ್ನ ಗರ್ಲ್​ಫ್ರೆಂಡ್​ ಒತ್ತಾಯಿಸುತ್ತಿದ್ದಾಳೆ. ನಾನು ಏನು ಮಾಡಬೇಕೆಂದು ತಿಳಿಯುತ್ತಿಲ್ಲ, ಸಲಹೆ ನೀಡಿ ಎಂದು ಕೇಳಿಕೊಂಡಿದ್ದಾನೆ.

ಗರ್ಲ್​ಫ್ರೆಂಡ್ ಮತ್ತು ಆಕೆಯ ಸಹೋದರಿ ಅವಳಿ-ಜವಳಿ. ನೋಡಲು ಒಂದೇ ರೀತಿ ಇದ್ದಾರೆ. ಆದರೂ ಸ್ವಲ್ಪ ವ್ಯತ್ಯಾಸವೂ ಇದೆ. ಇತ್ತೀಚೆಗಷ್ಟೇ ಆಕೆಯ ಸಹೋದರಿ ಕೆಟ್ಟ ಬ್ರೇಕ್​ ಅಪ್​ ಅನುಭವಿಸಿದ್ದಾಳಂತೆ. ಹೀಗಾಗಿ ಸಹೋದರಿಯನ್ನು ಹುರಿದುಂಬಿಸಲು ಮತ್ತು ಅವಳ ಸ್ವಾಭಿಮಾನವನ್ನು ಸುಧಾರಿಸಲು ನನ್ನ ಬಳಿ ಗರ್ಲ್​ಫ್ರೆಂಡ್​ ಸಹಾಯ ಬಯಸಿದ್ದಾಳೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾರೆ.

ನಾನು ಎರಡು ವರ್ಷದಿಂದ ಗರ್ಲ್​ಫ್ರೆಂಡ್​ ಜತೆ ಡೇಟಿಂಗ್​ ಮಾಡುತ್ತಿದ್ದೇನೆ. ಆಕೆ ತುಂಬಾ ಒಳ್ಳೆಯವಳು. ನೋಡಲು ಚೆನ್ನಾಗಿದ್ದಾಳೆ. ಆಕೆಯದ್ದು ದಯೆಯುಳ್ಳ ಮನಸ್ಸು. ನನಗೆ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತಾಳೆ. ಸೋತಾಗ ಚಿಯರ್​ ಮಾಡುವಂತಹ ವ್ಯಕ್ತಿತ್ವ. ನಮ್ಮಿಬ್ಬರ ನಡುವೆ ನಿಜಕ್ಕೂ ಶ್ರೇಷ್ಠ ಸಂಬಂಧವಿದೆ. ಆಕೆಯ ಸಹೋದರಿಯನ್ನು ಕಂಡರೆ ತುಂಬಾ ಪ್ರೀತಿ. ಸದಾ ಒಟ್ಟಿಗೆ ಇರುತ್ತಾರೆ. ನಾನು ಸಹ ಕೆಲವೊಮ್ಮೆ ಅವರೊಂದಿಗೆ ಸೇರಿ ಪಾರ್ಟಿ ಮಾಡಿದ್ದೇನೆ. ಅವರೊಂದಿಗೆ ಇದ್ದಾಗ ಇರುಸು-ಮುರುಸು ಆಗಲೇ ಇಲ್ಲ. ಅವಳ ಸಹೋದರಿಯನ್ನು ನನ್ನ ಸ್ವಂತ ಸಹೋದರಿ ಎಂದೇ ಭಾವಿಸಿದ್ದೇನೆ.

ಹೀಗಿರುವಾಗ ಗರ್ಲ್​ಫ್ರೆಂಡ್ ಸಹೋದರಿ​ ಯುವಕನೊಬ್ಬನ ಜತೆ ಡೇಟಿಂಗ್​ ಮಾಡುತ್ತಿದ್ದಳು. ಕೊನೆಗೆ ಆತ ಮೋಸ ಮಾಡಿದ್ದಾನೆ. ಇದೀಗ ಆಕೆ ಮಾನಸಿಕವಾಗಿ ಕುಗ್ಗಿದ್ದಾಳೆ. ಇದರಿಂದ ನನ್ನ ಗರ್ಲ್​ಫ್ರೆಂಡ್​ ಮನಸ್ಸಿಗೂ ತುಂಬಾ ನೋವಾಗಿದೆ. ಹೀಗಾಗಿ ಸಹೋದರಿಯನ್ನು ನೋವಿನಿಂದ ಹೊರತರಲು ಆಕೆ ಪ್ರಯತ್ನಿಸುತ್ತಿದ್ದಾಳೆ. ಮೊನ್ನೆ ನನ್ನ ಜತೆಯಲ್ಲೇ ಉಳಿದುಕೊಂಡಿದ್ದ ಗರ್ಲ್​ಫ್ರೆಂಡ್​, ಮಲಗಿ ಮಾತನಾಡುವಾಗ ಆಘಾತವಾಗುವಂತಹ ಮಾತನ್ನಾಡಿದಳು. ತನ್ನ ಸಹೋದರಿ ಜತೆ ಸೆಕ್ಸ್​ ಮಾಡುವಂತೆ ಕೇಳಿಕೊಂಡಳು.

ಆರಂಭದಲ್ಲಿ ಆಕೆ ತಮಾಷೆ ಮಾಡುತ್ತಿದ್ದಾಳೆ ಅಂದುಕೊಂಡೆ. ಆದರೆ, ಅವಳದ್ದು ತಮಾಷೆ ಮಾತಲ್ಲ. ಅವಳ ಸಹೋದರಿ ಈಗಾಗಲೇ ನನ್ನ ಮೇಲೆ ಸ್ವಲ್ಪ ಮೋಹವನ್ನು ಹೊಂದಿರುವುದಾಗಿ ನನಗೆ ಹೇಳಿದಳು. ಈ ಸಮಯದಲ್ಲಿ ಅವಳು ನಿಜವಾಗಿಯೂ ನಂಬುವ ಏಕೈಕ ವ್ಯಕ್ತಿ ನಾನೆಂದು ಗರ್ಲ್​ಫ್ರೆಂಡ್​ ಹೇಳಿದಳು. ತನ್ನ ಸಹೋದರಿಯ ಸ್ವಾಭಿಮಾನ ಮತ್ತು ಮನಸ್ಥಿತಿಯನ್ನು ಬಹಳವಾಗಿ ಸುಧಾರಿಸುತ್ತದೆ. ಅದಕ್ಕಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದಳು.

ಈಗಾಗಲೇ ಆಕೆಯ ಸಹೋದರಿ ಜತೆ ಮಾತನಾಡಿರುವುದಾಗಿ ಮತ್ತು ಆಕೆ ಒಪ್ಪಿಕೊಂಡಿರುವುದಾಗಿ ತಿಳಿಸಿದಳು. ಸಹೋದರಿಯೊಂದಿಗೆ ನಾನು ಒಟ್ಟಿಗೆ ಇರುವುದನ್ನು ನೋಡಿ ಹುಚ್ಚನಾಗುವುದಿಲ್ಲ ಮತ್ತು ಆ ಸಮಯದಲ್ಲಿ ಅಲ್ಲಿರುವುದಿಲ್ಲ ಎಂದು ನನಗೆ ಅನೇಕ ಬಾರಿ ಭರವಸೆ ನೀಡಿದಳು. ತುಂಬಾ ಪರಿಪರಿಯಾಗಿ ಬೇಡಿದಳು. ನನಗೆ ನಿಜಕ್ಕೂ ಅಚ್ಚರಿಯಾಯಿತು. ಕೊನೆಯಲ್ಲಿ ಯೋಚಿಸಲು ಸಮಯ ಕೇಳಿದೆ. ಅಂದು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ನಿಜಕ್ಕೂ ನಾನು ಗೊಂದಲಕ್ಕೆ ಒಳಗಾಗಿದ್ದೆ. ಒಂದು ವೇಳೆ ಆಕೆ ಹೇಳಿದಂತೆ ಸಹೋದರಿ ಜತೆ ಸೆಕ್ಸ್​ ಮಾಡಿದರೆ, ಮೂವರ ನಡುವಿನ ಸಂಬಂಧ ಏನಾಗಬಹುದು ಎಂಬ ಭಯವಾಯಿತು. ಸ್ವಲ್ಪ ದಿನದ ನಂತರ ಗರ್ಲ್​ಫ್ರೆಂಡ್​ ಸಹೋದರಿ ಹೊಟ್ಟೆಕಿಚ್ಚು ಪಟ್ಟು ನಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಾರಂಭಿಸಹುದು ಅನಿಸಿತು. ನಾನು ಈ ಸಮಯದಲ್ಲಿ ವ್ಯಾಮೋಹಕ್ಕೆ ಒಳಗಾಗುತ್ತಿದ್ದೇನೆ, ಆದರೆ ನನ್ನ ಗೆಳತಿಯೊಂದಿಗೆ ನಾನು ಹೊಂದಿರುವ ಈ ಒಳ್ಳೆಯ ವಿಷಯವನ್ನು ಹಾಳುಮಾಡಲು ನಾನು ಬಯಸುವುದಿಲ್ಲ. ನಾನು ಏನು ಮಾಡಲಿ ಎಂದು ಕೇಳಿಕೊಂಡಿದ್ದಾನೆ.

ರೆಡ್ಡಿಟ್​ ಜಾಲತಾಣದಲ್ಲಿರುವ ಈ ಪೊಸ್ಟ್​ ಸಾವಿರಾರು ಮಂದಿಯ ಗಮನ ಸೆಳೆದಿದ್ದು, ಸಾಕಷ್ಟು ಕಾಮೆಂಟ್​ಗಳು ಹರಿದುಬರುತ್ತಿದೆ. ಅವಳಿ ಸಹೋದರಿಯೊಂದಿಗೆ ತೊಡಗಿಸಿಕೊಳ್ಳುವುದು ಕೆಟ್ಟ ಆಲೋಚನೆ ಎಂದು ಅನೇಕ ಜನರು ಯೋಚಿಸುತ್ತಾ ಉತ್ತರಿಸಿದ್ದಾರೆ.

ಖಂಡಿತವಾಗಿ ನೀವು ಇದಕ್ಕೆ ಒಪ್ಪಿಕೊಳ್ಳಬೇಡಿ. ಇದು ನಿಮ್ಮ ಗರ್ಲ್​ಫ್ರೆಂಡ್​ ಜತೆಗಿನ ಸಂಬಂಧ ಮಾತ್ರ ಬದಲಾಯಿಸದೇ, ಆಕೆಯ ಸಹೋದರಿ ಜತೆಗೆ ಸಂಬಂಧವನ್ನು ಬದಲಾಯಿಸುತ್ತದೆ ಮತ್ತು ಎಂದಿಗೂ ಉಳಿದುಬಿಡುತ್ತದೆ ಎಂದು ರೆಡ್ಡಿಟ್​ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.

ಬೇರೊಬ್ಬರು ಪೋಸ್ಟ್ ಮಾಡಿ, ಇಲ್ಲ… ಅದರ ಬಗ್ಗೆ ಸ್ವಲ್ಪವೂ ಯೋಚಿಸಬೇಡಿ. ನಿಮ್ಮ ಗೆಳತಿಯ ಸಹೋದರಿಯ ಸ್ವಾಭಿಮಾನವನ್ನು ಸರಿಪಡಿಸುವುದು ನಿಮ್ಮ ಕೆಲಸವಾಗಲಾರದು. ಸದ್ಯ ಅವಳು ಒಬ್ಬಂಟಿಯಾಗಿರುತ್ತಾಳೆ. ಈ ಸಮಯವನ್ನು ಸ್ವತಃ ಕೆಲಸ ಮಾಡಲು ಬಳಸಿಕೊಳ್ಳುವಂತೆ ಅವಳನ್ನು ಪ್ರೋತ್ಸಾಹಿಸಿ ಎಂದು ಉಪಯುಕ್ತ ಸಲಹೆಯನ್ನು ನೀಡಿದ್ದಾರೆ.

ಇದಾದ ಬಳಿಕ ಮತ್ತೆ ಪೋಸ್ಟ್​ ಮಾಡಿರುವ ಆ ವ್ಯಕ್ತಿ. ನಾನು ಆ ರೀತಿ ಮಾಡಲಿಲ್ಲ. ನಾನು ಮತ್ತೆ ನನ್ನ ಗರ್ಲ್​ಫ್ರೆಂಡ್​ ಭೇಟಿ ಮಾಡಿದೆ. ಆಕೆಗೆ ಎಲ್ಲವನ್ನು ಮನವರಿಕೆ ಮಾಡಿದೆ. ಇದೀಗ ಸ್ವತಃ ಆಕೆ ಪಶ್ಚತಾಪ ಪಡುತ್ತಿದ್ದಾಳೆ. ಯಾರೊಂದಿಗೂ ನನ್ನನ್ನು ಹಂಚಿಕೊಳ್ಳದಿರಲು ಬಯಸಿದ್ದಾಳೆ. ತನ್ನೊಂದಿಗೆ ಆ ರೀತಿಯ ಮಾತುಗಳನ್ನಾಡಿದಕ್ಕೆ ಕ್ಷಮೆ ಕೋರಿದ್ದಾಳೆ. ಸದ್ಯ ಆಕೆ ಸಹಜ ಸ್ಥಿತಿಗೆ ಬಂದಿದ್ದು, ನನ್ನೊಂದಿಗೆ ಎಂದಿನಂತೆಯೇ ಹಸನ್ಮುಖಿಯಾಗಿದ್ದಾಳೆ. ನಾವಿಬ್ಬರೂ ಸಂಜೆ ಸಹೋದರಿಯನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಲು ನಿರ್ಧರಿಸಿದ್ದೇವೆ. ಎಲ್ಲವೂ ಸರಿಹೋಗುವ ಭರವಸೆ ಇದೆ ಎಂದು ವ್ಯಕ್ತಿ ಹೇಳಿಕೊಂಡಿದ್ದೇನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net