ನಾಳೆ ವಿಧಾನಸೌಧದಲ್ಲಿ ರಾಜ್ಯಮಟ್ಟದ ಜನಸ್ಪಂದನ: ಸಂಚಾರ ಮಾರ್ಗ ಬದಲಾವಣೆ

CM Siddaramaiah
Published on

ಬೆಂಗಳೂರು: ನಾಳೆ (ಫೆ.8) ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಸ್ಪಂದನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಸಲುವಾಗಿ ಫೆ.7 ಮತ್ತು ಕಾರ್ಯಕ್ರಮದ ದಿನವಾದ ಫೆ. 08ರಂದು ವಿಧಾನ ಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ವೃತ್ತದಿಂದ ಗೇಟ್ ನಂಬರ್-04 ರವರೆಗೆ ಸಂಚಾರವನ್ನು ನಿಷೇಧಿಸಲಾಗಿರುತ್ತದೆ.

ಫೆ. 07 ಮತ್ತು ಫೆ. 08ರಂದು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಈ ಕೆಳಕಂಡಂತಿದೆ.

1. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಡಿ. ದೇವರಾಜು ಅರಸು ರಸ್ತೆಯಲ್ಲಿ ಬರುವ ವಾಹನಗಳು ಎ.ಜಿ.ಎಸ್. ವೃತ್ತ ಮೂಲಕ ಎಂ.ಎಸ್. ಬಿಲ್ಡಿಂಗ್ ಒಳಭಾಗದಿಂದ ಪ್ರವೇಶಿಸಿ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಎಡ ತಿರುವು ಪಡೆದುಕೊಂಡು ಸಂಚರಿಸುವುದು.

2. ಚಾಲುಕ್ಯ ವೃತ್ತದಿಂದ ಬರುವ ವಾಹನಗಳು ಸಿ.ಐ.ಡಿ. ಕಚೇರಿ ಮುಂಭಾಗವಾಗಿ ಚಲಿಸಿ, ಮಹಾರಾಣಿ ಕಾಲೇಜು ಅಪ್ಪರ್ ಕ್ಯಾಂಪ್ ಮಾರ್ಗವಾಗಿ ಎಡ ತಿರುವು ಪಡೆದು ಕೆ.ಆರ್. ವೃತ್ತದಿಂದ ಅಂಬೇಡ್ಕರ್ ವೀದಿ/ಸಿಟಿ ಸಿವಿಲ್ ಕೋರ್ಟ್ ರಸ್ತೆಯನ್ನು ಉಪಯೋಗಿಸಬಹುದು.

ಫೆ. 08 ರಂದು ಬೆಳಗ್ಗೆ 6 ರಿಂದ ರಾತ್ರಿ 7 ರ ವರೆಗೆ ವಾಹನ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ:

1. ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ,

2. ರಾಜಭವನ ರಸ್ತೆ, ಪ್ಯಾಲೇಸ್ ರಸ್ತೆ,

3. ಡಿ. ದೇವರಾಜು ಅರಸು ರಸ್ತೆ

4. ಶೇಷಾದ್ರಿ ರಸ್ತೆ.

ಫೆ. 08 ರಂದು ಸಾರ್ವಜನಿಕ ವಾಹನ ನಿಲುಗಡೆ ಸ್ಥಳಗಳು (ಸ್ಥಳ ಲಭ್ಯತೆಯ ಮೇಲೆ/ಪಾವತಿ ನಿಲುಗಡೆ)

* ಸೌಟ್ ಮತ್ತು ಗೈಡ್ಸ್ ಪಾರ್ಕಿಂಗ್ ಸ್ಥಳ

* ಜ್ಞಾನ ಜ್ಯೋತಿ ಮತು ಬೆಂಗಳುರು ವಿಶ್ವವಿಧ್ಯಾಲಯ ಪಾರ್ಕಿಂಗ್ ಸ್ಥಳ.

* ಸೆಂಟ್ರಲ್ ಕಾಲೇಜ್

* ಸ್ವಾತಂತ್ರ್ಯ ಉದ್ಯಾನವನ

* ಅರಮನೆ ಮೈದಾನ ಪಾರ್ಕಿಂಗ್ ಸ್ಥಳ

ಸಿಎಂ ಸಿದ್ದರಾಮಯ್ಯ ಗುರುವಾರ (ಫೆ.8) ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮ ಇದೇ ಮೊದಲ ಬಾರಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದೆ. ಅಂದಾಜು 10 ಸಾವಿರ ಜನ ಆಗಮಿಸುವ ನಿರೀಕ್ಷೆಯಿದ್ದು, ಬರುವವರಿಗೆ ಊಟ, ತಿಂಡಿ, ನೀರು, ಮಜ್ಜಿಗೆ ವ್ಯವಸ್ಥೆ ಇರಲಿದೆ. ಇವರಿಗಾಗಿ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದಿಂದ ಉಚಿತ ಸಾರಿಗೆ ಸೌಲಭ್ಯವೂ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net