More

    ನಿರ್ದೇಶಕ ಅಟ್ಲಿ ನನಗೆ ಮೋಸ ಮಾಡಿದ!? ರಾಜಾ-ರಾಣಿ ಚಿತ್ರದ ಮತ್ತೊಂದು ಕಹಾನಿ ಬಿಚ್ಚಿಟ್ಟ ನಟಿ ಸಾಕ್ಷಿ

    ಚೆನ್ನೈ: ನಟಿ ಹಾಗೂ ಮಾಡೆಲ್​ ಆಗಿರುವ ಸಾಕ್ಷಿ ಅಗರ್ವಾಲ್​ ಕನ್ನಡಿಗರಿಗೆ ಪರಿಚಯ ಇಲ್ಲದಿರಬಹುದು. ಏಕೆಂದರೆ, ಇದುವರೆಗೂ ಇವರು ಕನ್ನಡದಲ್ಲಿ ನಟಿಸಿರುವುದು ಒಂದೇ ಒಂದು ಚಿತ್ರದಲ್ಲಿ ಮಾತ್ರ. ಹಿರಿಯ ನಟ ಜಗ್ಗೇಶ್​ ಅಭಿನಯದ “ಸಾಫ್ಟ್​ವೇರ್ ಗಂಡ” ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಸಾಕ್ಷಿ ಮುಖ ಪರಿಚಯ ಇದ್ದೇ ಇರುತ್ತದೆ. ಏಕೆಂದರೆ, ಆಗಾಗ ಇವರು ಸಿಕ್ಕಾಪಟ್ಟೆ ಹಾಟ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ.

    ಕನ್ನಡದಲ್ಲಿ ನಟಿಸಿದ್ದು ಒಂದೇ ಚಿತ್ರವಾದರೂ ತಮಿಳು ಮತ್ತು ಮಲಯಾಳಂನಲ್ಲಿ ಸಾಕ್ಷಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಟ ಕಮಲ್​ ಹಾಸನ್​ ನಿರೂಪಣೆ ಮಾಡಿದ್ದ ತಮಿಳು ಬಿಗ್​ಬಾಸ್​ ಸೀಸನ್​ 3ರಲ್ಲೂ ಇವರು ಕಾಣಿಸಿಕೊಂಡಿದ್ದರು. ನಟ ರಜಿನಿಕಾಂತ್​ ಅಭಿನಯದ ಕಾಳ ಹಾಗೂ ಅಜಿತ್​ ನಟನೆಯ ವಿಶ್ವಾಸಂ ಮತ್ತು ಅರಣ್ಮನೈ-3ನಂತಹ ಬ್ಲಾಕ್​ ಬಸ್ಟರ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ತಮಿಳಿಗರಿಗೆ ಇವರ ಪರಿಚಯ ತುಂಬಾ ಚೆನ್ನಾಗಿಯೇ ಇದೆ.

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಾಕ್ಷಿ, ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುತ್ತಾರೆ. ಸಾಕ್ಷಿ ಅವರು ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 1.7 ಮಿಲಿಯನ್​ ಫಾಲೋವರ್​ಗಳನ್ನು ಹೊಂದಿದ್ದಾರೆ. ಅವರು ಯಾವುದೇ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳಲಿ ಅದು ವೈರಲ್​ ಆಗಿಬಿಡುತ್ತವೆ.

    ಇದೀಗ ಸಾಕ್ಷಿ, ಖ್ಯಾತ ನಿರ್ದೇಶಕ ಅಟ್ಲಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸಾಕ್ಷಿ, ಸೂಪರ್​ಹಿಟ್ ಚಿತ್ರ “ರಾಜಾ ರಾಣಿ”ಯಲ್ಲಿ ನಾನು ನಟಿಸಿದ್ದೆ ಆದರೆ, ನನ್ನ ಪಾತ್ರಕ್ಕೆ ಕತ್ತರಿಹಾಕಲಾಗಿದೆ ಎಂದು ಆರೋಪಿಸಿದ್ದಾರೆ. 2013ರಲ್ಲಿ ರಾಜಾ ರಾಣಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ ಆರಂಭದಲ್ಲಿ, ನನ್ನನ್ನು ಆಯ್ಕೆ ಮಾಡಿದ ಕಾಸ್ಟಿಂಗ್ ಏಜೆನ್ಸಿ ಈ ಚಿತ್ರದಲ್ಲಿ ನಾನು ಎರಡನೇ ನಾಯಕಿ ಮತ್ತು ನಟ ಆರ್ಯ ಮುಖ್ಯ ಪಾತ್ರದಲ್ಲಿದ್ದಾರೆ ಎಂದು ಹೇಳಿತು.

    ಕಾಸ್ಟಿಂಗ್​ ಏಜೆನ್ಸಿ ಹೇಳಿದಂತೆ ಕೇಳಿದೆ ಮತ್ತು ಆ ಚಿತ್ರದಲ್ಲಿ ನಟಿಸಲು ಹೋದೆ. ನಾನು ಕೆಲವು ಶಾಪಿಂಗ್ ಮಾಲ್ ದೃಶ್ಯಗಳನ್ನು ಮಾಡಿದ್ದೇನೆ. ಕೆಲವು ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ಇದಾದ ಬಳಿಕ ಎರಡು ದಿನ ಕಳೆದರೂ ಚಿತ್ರೀಕರಣಕ್ಕೆ ಕರೆ ಬರಲಿಲ್ಲ. ಒಂದು ಹಂತದಲ್ಲಿ ಚಿತ್ರದ ಚಿತ್ರೀಕರಣ ಮುಗಿದು ಚಿತ್ರ ಬಿಡುಗಡೆಯಾಯಿತು. ಸಿನಿಮಾ ನೋಡಲು ಹೋದ ನಾನು ಬೆಚ್ಚಿಬಿದ್ದೆ. ವಾಸ್ತವವಾಗಿ, ನನ್ನ ಎಲ್ಲಾ ದೃಶ್ಯಗಳನ್ನು ಕತ್ತರಿಸಲಾಗಿದೆ. ಆಗ ನನಗೆ ಪ್ರೊಡಕ್ಷನ್ ಕಂಪನಿಗಳ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಏಕೆಂದರೆ ನಾನು ಎಂದಿಗೂ ಅಟ್ಲಿ ಸರ್ ಬಳಿ ಹೋಗಿ ನನ್ನ ಪಾತ್ರದ ಬಗ್ಗೆ ಚರ್ಚಿಸಿಲ್ಲ. ಇದು ನನ್ನ ತಪ್ಪು ಎಂದು ಹೇಳಿದ ಸಾಕ್ಷಿ, ಈ ಚಿತ್ರದಲ್ಲಿ ನಟಿಸುವ ಅವಕಾಶ ನೀಡುವುದಾಗಿ ಹೇಳಿ ನನಗೆ ಮೋಸ ಮಾಡಲಾಗಿದೆ ಎಂದು ಸಾಕ್ಷಿ ಅಗರ್ವಾಲ್ ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ರವಿಕೆ ಧರಿಸದೆ ಬಂದ ನಟಿ?! ಸೀರೆ ಜಾರಿ ಬಿದ್ದರೆ ಕೆಲವರಿಗೆ ಅದೇ ಆನಂದ ಎಂದ ಚೈತ್ರಾ, ವಿಡಿಯೋ ವೈರಲ್​

    ಒಳಉಡುಪಲ್ಲಿ ಫೋಟೋಶೂಟ್​ ಮಾಡಿಸೋ ಧೈರ್ಯ ಸೌತ್​ ನಟಿಯರಿಗಿಲ್ಲ ಎಂದ ನೆಟ್ಟಿಗನಿಗೆ ಸಾಕ್ಷಿ ತಿರುಗೇಟು!

    ಇಂಥಾ ವ್ಯಕ್ತಿಯಿಂದ ಒಳ್ಳೆಯದು ಸಾಧ್ಯವೇ? ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ವಿಜಯ್​ ವಿರುದ್ಧ ಮಹಿಳೆ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts