ನನ್ನ ತಂದೆ ಹುಲಿ ಕೊಂದು ರಕ್ತ ಮುಖಕ್ಕೆ ಹಚ್ಚಿದರು! ಅದೇ ರೀತಿ… ತಮ್ಮ ಹೇಳಿಕೆ ಮೂಲಕವೇ ಸುದ್ದಿಯಾದ ಯುವರಾಜ್​ ತಂದೆ ಯೋಗರಾಜ್​

Yuvraj Yograj

ನವದೆಹಲಿ: ಟೀಮ್​ ಇಂಡಿಯಾದ ಸ್ಪೋಟಕ ಬ್ಯಾಟ್ಸ್​ಮನ್​, ಟಿ20-ಏಕದಿನ ವಿಶ್ವಕಪ್​ ವಿಜೇತ ತಂಡದ ಸದಸ್ಯ ಯುವರಾಜ್​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್​ ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಆಟದ ದಿನಗಳಲ್ಲಿ ಉತ್ತಮ ಪ್ರತಿಭೆ ಎಂದು ಪರಿಗಣಿಸಲ್ಪಟ್ಟಿದ್ದ ಯೋಗರಾಜ್​ ಸಿಂಗ್​ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಲಿಲ್ಲವಾದರೂ ಒಬ್ಬ ತರಬೇತುದಾರನಾಗಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಮಾಸ್ಟರ್​ ಬ್ಲ್ಯಾಸ್ಟರ್​ ಸಚಿನ್​ ತೆಂಡೂಲ್ಕರ್ ಪುತ್ರ ಅರ್ಜುನ್​ ಕೂಡ ಯೋಗರಾಜ್​ ಅವರ ಗರಡಿಯಲ್ಲೇ ಟ್ರೈನಿಂಗ್​ ಪಡೆಯುತ್ತಿದ್ದು, ಆಗಿಂದಾಗೆ ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುತ್ತವೆ.

ಕೆಲ ದಿನಗಳ ಹಿಂದಷ್ಟೇ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಯೋಗರಾಜ್​ ತಮ್ಮ ಅಕಾಡೆಮಿ ಸೇರುವವರು ಯಾವ ಮನಸ್ಥಿತಿಯಲ್ಲಿರಬೇಕು ಎಂದು ಹೇಳಿದ್ದು, ತಮ್ಮ ಬಾಲ್ಯದಲ್ಲಿ ಆದ ಘಟನೆಯನ್ನು ಉಲ್ಲೇಖಿಸಿ ವಿವರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ: ನಾನು ಹೇಳಿದಂತೆ ಮಾಡು ಇಲ್ಲಾಂದ್ರೆ ನಿನ್ನ ಪತಿ… ಪ್ರಜ್ವಲ್​ ರೇವಣ್ಣ ವಿರುದ್ಧದ 3ನೇ ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ಮತ್ತಷ್ಟು ಆಘಾತಕಾರಿ ಅಂಶ

ನನ್ನ ಅಕಾಡೆಮಿ ಸೇರುವವರಿಗೆ ಮೊದಲು ಸಾವಿನ ಭಯ ಇರಬಾರದು. ನಾನು ಮೂರು ವರ್ಷದವನಿದ್ದಾಗ ಅಪ್ಪ ಅಮ್ಮನಿಗೆ ನಾವು ಹುಲಿ ಬೇಟೆಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಅಮ್ಮನಿಗೆ ಭಯವಾಗಿತ್ತು. ಅಪ್ಪ ಹೇಳಿದರು. ಅವನು ಸತ್ತರೆ ಏನಾಗುವುದಿಲ್ಲ ಎಂದು ಹೇಳಿ ನನ್ನನ್ನು ಕರೆದುಕೊಂಡರು ಹೋದರು. ಆದರೆ, ನನ್ನ ಜೊತೆ ಬಂದರೆ ಆತನನ್ನು ಹುಲಿಯಂತೆ ಮಾಡುತ್ತೇನೆ. ನಾನು ನನ್ನ ತಂದೆ ಕಾಳಧುಂಗಿ ಕಾಡಿನಲ್ಲಿ ಶಿಕಾರಿ ಹೊರಟೆವು. ನಾವು ಮಚಾನ್​ ಮೇಲೆ ಕುಳಿತಿದ್ದೆವು. ನಾನು ಅದನ್ನು ನೋಡಿ ಅಳಲು ಪ್ರಾರಂಭಿಸಿದೆ. ಆಗ ನನ್ನ ತಾಯಿ ಬಾಯಿ ಮುಚ್ಚಿದರು. ಹುಲಿ ನಮ್ಮತ್ರ ಬಂದಾಗ ನನ್ನ ತಂದೆ ಅದರ ತಲೆಗೆ ಗುಂಡಿಟ್ಟು ಹೊಡೆದರು. ಅದು ಸ್ಥಳದಲ್ಲೇ ಪ್ರಾಣಬಿಟ್ಟಿತು.

ಇದನ್ನು ನೋಡಿ ನಾನು ಒಂದು ಕ್ಷಣ ಮೂಕವಿಸ್ಮಿತನಾದೆ. ಹುಲಿ ಯಾವತ್ತೂ ಹುಲ್ಲನ್ನು ತಿನ್ನುವುದಿಲ್ಲ ಎಂದು ನನ್ನ ತಂದೆ ಜೋರಾಗಿ ಕೂಗಲು ಆರಂಭಿಸಿದರು. ನನ್ನನ್ನು ಹುಲಿಯ ದೇಹದ ಮೇಲೆ ಕೂರಿಸಿ ಅದರ ರಕ್ತವನ್ನು ಹಣೆ ಹಾಗೂ ತುಟಿಗೆ ಹಚ್ಚಿದರು. ನಮ್ಮ ಮನೆಯಲ್ಲಿ ಈಗಲೂ ಆ ಫೋಟೋ ಇದೆ. ನನ್ನ ಅಕಾಡೆಮಿಯನ್ನು ಸೇರುವವರನ್ನು ನಾವು ಹುಲಿಯಂತೆ ತಯಾರು ಮಾಡುತ್ತೇವೆ. ನಾನು ಯುವರಾಜ್​ನನ್ನು ಹೇಗೆ ತಯಾರು ಮಾಡಿದ್ದೀನೋ ಅದೇ ರೀತಿ ನನ್ನ ಅಕಾಡೆಮಿ ಸೇರುವವರನ್ನು ತಯಾರು ಮಾಡುತ್ತೇನೆ ಎಂದು ಯೋಗರಾಜ್​ ಸಿಂಗ್​ ಹೇಳಿದ್ದಾರೆ.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…