ಆತ ನನ್ನ ಎದುರು​ ಗಳಿಸಿರುವುದು ಕೆಲವೇ ರನ್​ಗಳು ಮಾತ್ರ; ಕೊಹ್ಲಿ ಕುರಿತು ಆಸೀಸ್​ ವೇಗಿ ಹೇಳಿಕೆ ವೈರಲ್​

Virat Kohli
Published on

ನವದೆಹಲಿ: ನಾವು ನೋಡಿರುವಂತೆ ಯಾವುದಾದರು ಪ್ರತಿಷ್ಠಿತ ಟೂರ್ನಿ ಅಥವಾ ಸರಣಿ ಅರಂಭವಾಗುವುದಕ್ಕೂ ಮುನ್ನ ಆ ದೇಶದ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ರೀತಿಯ ಹೇಳಿಕೆ ನೀಡುವಾಗ ಬೇಕಂತಲೇ ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ಕೊಡುವ ಮೂಲಕ ಎದುರಾಳಿಗಳನ್ನು ಕೆಣಕಿ ಸುದ್ದಿಯಾಗುತ್ತಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ವೇಗಿ ಮಿಚೆಲ್​ ಸ್ಟಾರ್ಕ್​ ವಿರಾಟ್​ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ಸಖತ್​ ವೈರಲ್​​ ಆಗಿದ್ದು, ಸರಣಿಯಲ್ಲಿ ಸ್ಲೆಡ್ಜಿಂಗ್​ಗೆ ಕಾರಣವಾಗಬಹುದಾಗಿದೆ.

ವಿರಾಟ್​ ಕೊಹ್ಲಿಯೊಂದಿಗೆ ನಾನು ಜಗಳ ಆಡುವುದನ್ನು ಆನಂದಿಸುತ್ತೇನೆ. ಏಕೆಂದರೆ ನಾವು ಅನೇಕ ಬಾರಿ ಮುಖಾಮುಖಿಯಾಗಿದ್ದೇವೆ. ಆತನನ್ನು ನಾನು ಒಂದು ಅಥವಾ ಎರಡು ಔಟ್​ ಮಾಡಿದ್ದೇನೆ ಅಷ್ಟೇ. ಆತ ನನ್ನ ಬೌಲಿಂಗ್​ನಲ್ಲಿ ಕೆಲವೇ ಕೆಲವು ರನ್​ ಗಳಿಸಿದ್ದಾನೆ. ನಾನು ಮತ್ತು ಆತ ಪ್ರತಿಬಾರಿ ಎದುರಾದಾಗಲೂ ಇಬ್ಬರು ಆ ಕ್ಷಣವನ್ನು ಆನಂದಿಸುತ್ತೇವೆ.

ವಿರಾಟ್​ ಕೊಹ್ಲಿ ಹಾಗೂ ಸ್ಟೀವ್​ ಸ್ಮಿತ್​ ಮುಖಾಮುಖಿಯಾದಾಗ ಇದು ಬಾರ್ಡರ್​ ಗವಾಸ್ಕರ್​ ಟ್ರೋಫಿ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದರೆ ಸುಳ್ಳಾಗುವುದಿಲ್ಲ. ಅವರಿಬ್ಬರು ಮಾತ್ರವಲ್ಲದೇ ನಮ್ಮ ಪೀಳಿಗೆಯ ಯುವ ಆಟಗಾರರು ಮುಖಾಮುಖಿಯಾಗುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ಧೇನೆ. ಈ ಕ್ಷಣ ಬಹಳ ರೋಮಾಂಚನಕಾರಿಯಾಗಿರುತ್ತದೆ. ಇಬ್ಬರ ಪೈಕಿ ಯಾರಾದರೂ ಒಬ್ಬರು ಸಾಕಷ್ಟು ರನ್​ ಗಳಿಸಲಿದ್ದಾರೆ ಎಂದು ವೇಗಿ ಮಿಚೆಲ್​ ಸ್ಟಾರ್ಕ್​ ಅಭಿಪ್ರಾಯಪಟ್ಟಿದ್ದಾರೆ.

Mitchell Starc
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net