ಲಂಡನ್: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಮತ್ತು ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಲಂಡನ್‌ನಲ್ಲಿ ಬಸವೇಶ್ವರನ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಲಂಡನ್‌ನ ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್ ಸಂಸದ ಬಸವರಾಜ್ ಬೊಮ್ಮಾಯಿಗೆ ಸಾಥ್ ನೀಡಿದರು.
ಈ ಕಾರ್ಯಕ್ರಮವನ್ನು ಲಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್ಡಮ್‌ನ ಬಸವ ಸಮಿತಿಯು ಜಂಟಿಯಾಗಿ ಆಯೋಜಿಸಿತ್ತು. ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಭಾಗವಹಿಸಿದರು.
ಲ್ಯಾಂಬೆತ್ ಮಾಜಿ ಮೇಯರ್ ಡಾ. ನೀರಾಜ್ ಪಾಟೀಲ್, ಬಸವ ಸಮಿತಿಯ ಅಧಿಕಾರಿಗಳಾದ ಶ್ರೀ ಅಭಿಜಿತ್ ಸಾಲಿಯಂಥ್ ಮತ್ತು ಶ್ರೀ ರಂಗನಾಥ ಮಿರ್ಜಿ ಅವರು ಬ್ರಿಟಿಷ್ ಭಾರತೀಯ ಮತ್ತು ಕನ್ನಡ ಸಮುದಾಯವನ್ನು ಪ್ರತಿನಿಧಿಸುತ್ತಾ ಸಮಾರಂಭದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಇದನ್ನೂ ಓದಿ: ಐಸಿಸಿ ಚುನಾವಣೆಯಲ್ಲಿ ಜಯ್ ಷಾ ವಿರುದ್ಧ ಮತ ಚಲಾಯಿಸಿದ ಪಿಸಿಬಿ; ಮಾಜಿ ಆಟಗಾರನ ಹೇಳಿಕೆಯಿಂದ ಬಯಲಾಯ್ತು ಪಾಕ್ ನರಿ ಬುದ್ಧಿ
ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ ಪತ್ರವನ್ನು ವಹಿಸಿದದ್ದು, ಅದನ್ನು ಭಾರತದ ಮಾನ್ಯ ಪ್ರಧಾನಮಂತ್ರಿ ಅವರಿಗೆ ಹಸ್ತಾಂತರಿಸಲು ವಿನಂತಿಸಿತು. ಈ ಆಹ್ವಾನವು ಈ ಐತಿಹಾಸಿಕ ಸ್ಮಾರಕದ ದಶಕೋತ್ಸವದ ಆಚರಣೆಗಾಗಿ ಪ್ರಧಾನಮಂತ್ರಿಯವರನ್ನು ಪುನಃ ಭೇಟಿಸಲು ಕೋರಿದೆ.
2015ರ ನವೆಂಬರ್ 14ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅನಾವರಣಗೊಂಡು ಐತಿಹಾಸಿಕವಾದ ಈ ಮೂರ್ತಿ, ಯುಕೆ statutes Act 1854 ಅಡಿಯಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅಂಕಿತಗೊಳಿಸಿದ ಮೊದಲ ಕನ್ಸೆಪ್ಟ್ ಸ್ಮಾರಕಗಳಲ್ಲೊಂದಾಗಿದೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು 2023ರ ಮಾರ್ಚ್ 5 ರಂದು ಲಾರ್ಡ್ ಬಸವೇಶ್ವರನ ಸ್ಮಾರಕಕ್ಕೆ ಪೂರ್ವದಲ್ಲೇ ನಮನ ಸಲ್ಲಿಸಿದ್ದರು.