VIDEO| ನನ್ನ ಪತಿಯನ್ನು ಉದ್ಯಮಿ ಮಾಡಿದೆ, ಮಗಳು ಆಕೆಯ ಗಂಡನನ್ನು ಪ್ರಧಾನಿ ಮಾಡಿದ್ದಾಳೆ: ಸುಧಾ ಮೂರ್ತಿ

Sudha Murthy
Published on

ಲಂಡನ್​: ನಾನು ನನ್ನ ಪತಿಯನ್ನ ಉದ್ಯಮಿ ಮಾಡಿದ ಹಾಗೆ ಮಗಳು ಅಕೆಯ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ಧಾಳೆ ಎಂದು ಇನ್ಪೋಸಿಸ್​ ಸಹ ಸಂಸ್ಥಾಪಕಿ ಸುಧಾ ಮೂರ್ತಿ ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕವಾಗಿ ಶೇರ್​ ಮಾಡಲಾಗುತ್ತಿದೆ.

ಪ್ರಧಾನಿಯನ್ನಾಗಿ ಮಾಡಿದಳು

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಇನ್ಫೋಸಿ್​ ಸಹ ಸಂಸ್ಥಾಪಕಿ ಸುಧಾ ಮೂರ್ತಿ ಅವರು ನಾನು ನನ್ನ ಪತಿಯನ್ನು ಉದ್ಯಮಿಯಾಗಿ ಮಾಡಿದ್ದೇನೆ. ನನ್ನ ಮಗಳು ಆಕೆಯ ಪತಿಯನ್ನು ಬ್ರಿಟನ್​ ದೇಶದ ಪ್ರಧಾನಿಯನ್ನಾಗಿ ಮಾಡಿದ್ದಾಳೆ.

ಇದಕ್ಕೆಲ್ಲ ಕಾರಣ ಹೆಂಡತಿಯರ ಮಹಿಮೆ. ಅವರು ಗಂಡನನ್ನು ಹೇಗೆ ಬದಲಾಯಿಸಬಹುದು ಎನ್ನುವುದಕ್ಕೆ ಇದು ಒಂದು ಉತ್ತಮ ಉದಾಹರಣೆ. ನಾನು ನನ್ನ ಪತಿಯನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಆದರೆ, ನನ್ನ ಮಗಳು ಆ ಕೆಲಸವನ್ನು ಮಾಡಿದ್ದಳು ಎಂದಿದ್ದಾರೆ.

ಪ್ರತಿ ಗುರುವಾರ ಉಪವಾಸ

ನನ್ನ ಅಳಿಯನ ಕುಟುಂಬಸ್ಥರು ಕಳೆದ 150 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸಿಸುತ್ತಿದ್ದು ಅವರು ತುಂಬಾ ಧಾರ್ಮಿಕ ಮನೋಭಾವವನ್ನು ಹೊಂದಿದ್ದಾರೆ.

ನನ್ನ ಮಗಳನ್ನು ಮದುವೆಯಾದ ಬಳಿಕ ಅವರು ಒಮ್ಮೆ ಕೇಳಿದರು ನೀವು ಪ್ರತಿಯೊಂದು ಕೆಲಸವನ್ನು ಗುರುವಾರ ಯಾಕೆ ಪ್ರಾರಂಭಿಸುತ್ತೀರಿ ಎಂದು. ನಾನು ಅದಕ್ಕೆ ನಾವು ರಾಘವೇಂದ್ರ ಸ್ವಾಮಿಯ ಭಕ್ತರು ಎಂದು ಹೇಳಿದ್ದೆವು.

ನಾನು ಹೀಗೆಂದ ಬಳಿಕ ಅವರು(ರಿಷಿ ಸುನಕ್​) ಪ್ರತಿ ಗುರುವಾರ ಉಪವಾಸ ಮಾಡುತ್ತಾರೆ. ಅವರ ತಾಯಿ ಪ್ರತಿ ಸೋಮವಾರ ಉಪವಾಸ ಮಾಡುತ್ತಾರೆ ಎಂದು ಸುಧಾ ಮೂರ್ತಿ ಅವರು ವಿಡಿಯೋದಲ್ಲಿ ಹೇಳುತ್ತಿರುವುದು ಕಂಡು ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net