ಸಮಾಜದಲ್ಲಿ ಪರಸ್ಪರ ಹೊಂದಾಣಿಕೆ ಭಾವ

mallar
ಮಲ್ಲಾರು ಯುವಕ ಮಂಡಲದಲ್ಲಿ ಅಬ್ದುಲ್ ರಶೀದ್ ಸಖಾಫಿ ಮಾತನಾಡಿದರು
Published on

ಪಡುಬಿದ್ರಿ: ಸಮಾಜದಲ್ಲಿ ಇರುವ ನಾವೆಲ್ಲರೂ ಒಂದೇ ತಾಯಿ ಮಕ್ಕಳು, ಪರಸ್ಪರ ಸಹೋದರ, ಸಹೋದರಿಯರು ಎಂಬ ಭಾವನೆಯೊಂದಿಗೆ ಜೀವನ ಸಾಗಿಸಿದರೆ, ನಮಗೆ ಸಿಕ್ಕಿರುವ ಸ್ವಾತಂತ್ರೃಕ್ಕೆ ಬೆಲೆ ಬರುತ್ತದೆ ಎಂದು ಮಲ್ಲಾರು ಯುವಕ ಮಂಡಲ ಅಧ್ಯಕ್ಷ ರಾಜೇಶ್ ಭಂಡಾರಿ ಹೇಳಿದರು.
ಮಲ್ಲಾರು ಯುವಕ ಮಂಡಲದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ನಾಗಭೂಷಣ ರಾವ್, ಮಜೂರು ಮಲ್ಲಾರ್ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಅಬ್ದುಲ್ ರಶೀದ್ ಸಖಾಫಿ, ಇಮ್ಯಾನುವಲ್ ಟ್ರಸ್ಟ್ ಅಧ್ಯಕ್ಷ ಸುನೀಲ್ ಫಾಸ್ಟರ್, ಗೌರವ ಅಧ್ಯಕ್ಷ ಸುಧಾಕರ ಶೆಟ್ಟಿ, ಪುರಸಭಾ ಸದಸ್ಯರಾದ ಉಮೇಶ್ ಕರ್ಕೇರ, ವಿದ್ಯಾಲತಾ, ನಸೀರ್ ಅಹಮ್ಮದ್, ನಿತ್ಯಾನಂದ ಕಾಮತ್, ವೇಲು ಮಲ್ಲಾರ್, ಮುಹಮ್ಮದ್ ಸಾದಿಕ್ ಉಪಸ್ಥಿತರಿದ್ದರು. ರೇಖಾ ಸಂತೋಷ್ ಸ್ವಾಗತಿಸಿದರು. ಸಲಹೆಗಾರ ಅನ್ವರ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net