ಕ್ರಾಂತಿಕಾರಿಗಳ ಬಲಿದಾನದಿಂದ ಸ್ವಾತಂತ್ರೃ

masidi
ಕೋಟದ ಜಾಮೀಯಾ ಮಸೀದಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ನೆರವೆರಿಸಿದರು
Published on

ಕೋಟ: ಇಂದು ನಾವು ಸ್ವಾತಂತ್ರೊೃೀತ್ಸವನ್ನು ಸಡಗರದಿಂದ ಆಚರಿಸುವುದಕ್ಕೆ ಕ್ರಾಂತಿಕಾರಿಗಳ ಬಲಿದಾನವೇ ಕಾರಣ ಅಂತಹ ಮಹಾನ್ ಪುರುಷರನ್ನು ನೆನಪಿಸುತ್ತಾ ಜಾತಿ ಮತ ಭೇದಗಳನ್ನು ಮರೆತು ಸಂಭ್ರಮಿಸೋಣ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಜಾಮೀಯಾ ಮಸೀದಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಸೀದಿ ಧರ್ಮಗುರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಯಮಿ ಕೋಟ ಇಬ್ರಾಹಿಂ ಸಾಹೇಬ್ ಸಂದೇಶ ನೀಡಿದರು. ಮಸೀದಿ ಉಪಾಧ್ಯಾಕ್ಷ ವಾಹಿದ್ ಆಲಿ ಸ್ವಾಗತಿಸಿ, ಕಾರ್ಯದರ್ಶಿ ಬಷೀರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net